Showing posts with label ಪರಬೊಮ್ಮ ಹರಿಯು vijayeendra ankita suladi ರಾಮ ಮಹಾತ್ಮೆ ಸುಳಾದಿ PARABOMMA HARIYU RAAMA MAHATME SULADI. Show all posts
Showing posts with label ಪರಬೊಮ್ಮ ಹರಿಯು vijayeendra ankita suladi ರಾಮ ಮಹಾತ್ಮೆ ಸುಳಾದಿ PARABOMMA HARIYU RAAMA MAHATME SULADI. Show all posts

Sunday, 8 December 2019

ಪರಬೊಮ್ಮ ಹರಿಯು vijayeendra ankita suladi ರಾಮ ಮಹಾತ್ಮೆ ಸುಳಾದಿ PARABOMMA HARIYU RAAMA MAHATME SULADI




Audio by Mrs. Nandini Sripad

ಶ್ರೀ ವಿಜಯೀಂದ್ರತೀರ್ಥಾರ್ಯ ವಿರಚಿತ 

 ಶ್ರೀರಾಮಚಂದ್ರದೇವರ ಮಹಾತ್ಮೆ ಸುಳಾದಿ 

 ರಾಗ ನಾಟ 

 ಧ್ರುವತಾಳ 

ಪರಬೊಮ್ಮ ಹರಿಯು ತಾ ನರರೂಪ ತಾಳಿಹ
ನರನಾಥ ದಶರಥನ ವರಗೇಹದಲವತರಿಸಿ
ಸಿರಿರಾಮನೆಂಬೊ ಪುಣ್ಯನಾಮದಿಂದ ಕರೆವುತಿರೆ
ಹರುಷದಿಂದ ಇಲ್ಲಿಗೈದಿ ಕರಿಯ ಬಂದ ಕೌಶಿಕನ್ನ
ಗುರು ಯಜ್ಞ ವಿಘ್ನವನ್ನು ಪರಿಹರಿಸುವ ಮುನಿವರನ
ಕರುಣದಿಂದ ಪರಮಾನಂದ ಶರಧಿಯಲ್ಯೋಲ್ಯಾಡಿಸಿದ
ಸಿರಿ ವಿಜಯೀಂದ್ರರಾಮ ಪೊರೆಯಲೆಮ್ಮ 
ನಾಮವ ಹಾಹಾ ಎಲೆ ರಮಣಾ ॥ 1 ॥

 ಮಠ್ಯತಾಳ 

ಈತನೆಂದು ಯಜ್ಞದ ವಿಘ್ನವ ಪರಿಹರಿಸುವ
ಪೋತ ಮಹದ್ಭೂತದಂತಿಹ ರಕ್ಕಸರ
ವೀತ ಭಯನಾಗಿ ಪೊರೆವದೆಂತೊ
ಭೂತಳ ಕರ್ತ ಸಿರಿ ವಿಜಯೀಂದ್ರರಾಮನ ಚರಿತ
ಪೋತ ಮಹದ್ಭೂತದಂತಿಹ ರಕ್ಕಸರ
ವೀತ ಭಯನಾಗಿ ಪೊರೆವದೆಂತೊ ॥ 2 ॥

 ರೂಪಕತಾಳ 

ಜನಕನಂದು ಜನಪತಿಯ ಮನಿಗೆ ಪೋಗಿ ಜಾನಕಿಯ 
ಮನಕೆ ಹರುಷ ಬಪ್ಪಂತೆ ಅಣಕವಾಗಿ ಶಿವನ
ಧನುವು ಮುರಿದು ವಿಜಯೀಂದ್ರರಾಮ 
ಮನಕೆ ಹರುಷ ಬಪ್ಪಂತೆ ॥ 3 ॥

 ಝಂಪಿತಾಳ 

ಇವನರ್ಭಕನೆ ಇವನ ಮುನಿಗಳಾದವರೆಲ್ಲ 
ಮನದಿ ಭಾವಿಸಿ ಕಾಣನೆಂಬದರಿಯಾ
ಭುವನ ಪಾವನ ನಾಮ ಸಿರಿ  ವಿಜಯೀಂದ್ರರಾಮ 
ಇವನರ್ಭಕನೆ ಇವನ ಮುನಿಗಳಾದವರೆ ॥ 4 ॥

 ತ್ರಿಪುಟತಾಳ 

ರಾಮ ಜಾನಕಿ ಮದುವೆಯ ಆಗಿ ಬಾವಾಗ ಪರುಶ -
ರಾಮನದರಸ ಅವನಖಿಲ ಹೆದರಿಸಿ ಮೆರೆದೆ
ಕೋಮಲಾಂಗ ವಿಜಯೀಂದ್ರರಾಮ 
ಬಾಲಕನೆ ಹೇಗೆ ಹೆದರಿಸಿದಾ ॥ 5 ॥

 ಅಟ್ಟತಾಳ 

ನಸಲಲ್ಲಿ ಕಣ್ಣು ಪಡೆದವನ ಗೆಲಿದೆ
ಅಸುಳೆಯೆಂದು ಬೇಡಿಕೊಂಡ ಕಂದನ ಕಾಯ್ದೆ
ಉಸರಬೇಕೆಂದು ಪಣವ ಮಾಡಿದನ
ಅಸುಳೆಯೆಂದ ಸುರರ ಪೊರೆವೆ ವಿಜಯೀಂದ್ರರಾಮ 
ಅಸುಳೆಯೆಂದು ಬೇಡಿಕೊಂಡ ಕಂದನ್ನ ಕಾಯ್ದೆ ನರಹರಿ ॥ 6 ॥

 ಆದಿತಾಳ 

ಉರವಣಿಸಿ ಬಾಹ ತಾಟಕಿಯ ಕೈ
ಕರಗಳ ನಿಮಿಷದಿ ಕತ್ತರಿಸುವೆನೆಂದು
ಸುರರ ಪೊರೆವ ವಿಜಯೀಂದ್ರರಾಮ ನರಹರಿ
ಕರಗಳ ನಿಮಿಷದಿ ಕತ್ತರಿಸುವೆನೆಂದಾ ॥ 7 ॥

 ಜತೆ 

ಲೋಕಾಭಿರಾಮ ಶುಭಗುಣ ಭೌಮ
ಲೋಕೇಶ ಭೌಮ ವಿಜಯೀಂದ್ರರಾಮ ॥
***********



vijayeendra ankita suladi ರಾಮ ದೇವರ ಸುಳಾದಿ

 ಅಟ್ಟತಾಳ
ಪರಬೊಮ್ಮ ಹರಿಯು ತಾ ನರರೂಪವ ತಾಳಿದ
ನರನಾದ ದಶರಥನ ವರದೇಹದಲವತರಿಸಿ
ಸಿರಿರಾಮನೆಂಬ ಪುಣ್ಯನಾಮದಿಂದ ಮೆರೆವುತ್ತಿರೆ
ಹರುಷದಿಂದ ಲೀಲೆಗೈದು ಕರೆಯ ಬಂದ ಕೌಶಿಕನ
ಉರು ಯಜ್ಞ ವಿಘ್ನವನು ಪರಿಹರಿಸುವುದಕ್ಕಾಗಿ ಪರಬೊಮ್ಮ
ಪರಿತಂದು ವಿಘ್ನವನು ಪರಿಹರಿಸಿದ ಮುನಿವರನ
ಹರುಷದಿಂದ ಪರಮಾನಂದ ಶರಧಿಯಲೋಲಾಡಿಸಿದ
ಸಿರಿ ವಿಜಯೀಂದ್ರ ನಾಮ ಹೊರೆಯಲೆಮ್ಮ ಯಾವಾಗಲೂ ||1||

ಮಠ್ಯ
ಈತನೆಂತು ಯಜ್ಞದ ವಿಘ್ನವ ಪರಿಹರಿಸುವ
ಪೋತ ಮಹಾದ್ಭುತರಂತಿಹ ರಕ್ಕಸರ
ವೀತ ಭಯನಾಗಿ ಕೊಲ್ಲುವುದೆಂತೊ
ಭೂತಳಕಚ್ಚರಿ ವಿಜಯೀಂದ್ರ ರಾಮನ ಚರಿತ ||2||

ರೂಪಕ
ಜನಕನೆಂಬ ಜನಪತಿಯ ಮನೆಗೆ ಹೋಗಿ
ಜಾನಕಿಯ ಮನಕೆ ಹರುಷವಪ್ಪಂತೆ
ಜನಪದ ಕೈವಾರಿಸುತ್ತಿರೆ ಮನಕೆ
ಅಣಕವಾಡಿ ಶಿವನಧನುವ ಮುರಿದ ವಿಜಯೀಂದ್ರರಾಮ
ಮನಕೆ ಹರುಷವಪ್ಪಂತೆ ||3||

ಝಂಪೆ
ಇವನರ್ಭಕನೆ ಇವನ ಮುನಿಗಳಾದವರೆಲ್ಲ ಮನದಿ
ಭಾವಿಸಿ ಕಾಣದೆಂಬುದರಿಯಾ ಎಲೆ ರಮಣಿ
ಭುವನ ಪಾವನ ನಾಮ ಸಿರಿ ವಿಜಯೀಂದ್ರರಾಮ
ಭಾವಿಸೆ ಮನದಿ ||4||

ತ್ರಿಪುಟ
ರಾಮ ಜಾನಕಿಯ ಮದುವೆಯಾಗಿ ಬರುವಾಗ ಪರಶು-
ರಾಮನಿದಿರಸಿ ಅವನ ಬಿಲ್ಲನೇರಿಸಿ ಮೆರೆದ
ರಾಮನಿದಿರಸಿ ಶ್ಯಾಮಲಾಂಗ ವಿಜಯೀಂದ್ರ
ರಾಮ ಬಾಲಕನೆ ಹೇಳಾ ||5||

ಅಟ್ಟ
ನೊಸಲಲಿ ಕಣ್ಣು ಪಡೆದವನ ಗೆಲಿದೆ
ಅಸುಳೆಯೆಂದು ಬೆಂಕೊಂಡು ಕಂದನ ಕಾಯ್ದೆ
ಕುಸುರಿಜವಕೊಂದೆ ಬಾಣದಿಂದ ನಿಮಿಷದಿ
ಅಸಮ ವಿಕ್ರಮ ವಿಜಯೀಂದ್ರರಾಮ ಜಗದೊಳು ||6||

ಏಕ
ಉರವಣಿಸಿ ಬಹ ತಾಟಕಿಯ ಮಹಾ
ಕರಗಳ ನಿಮಿಷದಿ ಕತ್ತರಿಸುಯೆಂದು
ಹಿರಿಯರು ಪೇಳಲಿದಿರು ಪೇಳದೆ ಅಸುರೆಯ
ಕರಗಳ ಕಡಿದ ವಿಜಯೀಂದ್ರರಾಮ
ಸರಸಿಜಾಸÀನ ವಿನುತ ಸಿರಿ ಮೂಲರಾಮ ||7||

ಜತೆ
ಲೋಕಾಭಿರಾಮ ಸದ್ಗುಣಧಾಮ
ಲೋಕೈಕಭೌಮ ವಿಜಯೀಂದ್ರರಾಮ ||8||
***********