Showing posts with label ವರ್ಣಿಸಲರಿಯೆ ನಿನ್ನ ವರ್ಣಿಸಲರಿಯೆ ಗುಣಾರ್ಣವ vijaya vittala. Show all posts
Showing posts with label ವರ್ಣಿಸಲರಿಯೆ ನಿನ್ನ ವರ್ಣಿಸಲರಿಯೆ ಗುಣಾರ್ಣವ vijaya vittala. Show all posts

Wednesday, 16 October 2019

ವರ್ಣಿಸಲರಿಯೆ ನಿನ್ನ ವರ್ಣಿಸಲರಿಯೆ ಗುಣಾರ್ಣವ ankita vijaya vittala

ವಿಜಯದಾಸ
ವರ್ಣಿಸಲರಿಯೆ ನಿನ್ನ | ವರ್ಣಿಸಲರಿಯೆ ಗು |
ಣಾರ್ಣವ ಹರಿಯೆ ಸೂ | ವರ್ಣ ಗಿರೀಶ ಸು |
ಗಮನ ರಂಗಾ ಪ

ಕುಂಡಲ ಮಿನುಗುವ ಹಸ್ತ ಕಂಕಣ ಬೆರಳುಂಗರ |
ಕೌಸ್ತುಭ ಕಂಬು ಸೂದರು |
ಶನ ಭುಜಕೀರ್ತಿ ಭೂ | ಷಣವಾದ ಶಿರ ಉರುವ ಒಪ್ಪಲು ಕಿಂ |
ಕಿಣಿ ಕನಕಾಂಬರವ ಪೂಸಿದ ಗಂಧ |
ಪುನುಗು ಜವ್ವಾದಿಯಿಂದೆಸೆವ ಸುರತರುವೆ 1

ಕಾಂಚಿದಾಮ ಥಳಿ | ಥಳಿಸುವ ಪದಕ ನ್ಯಾ |
ತುಂಬಲು ಸೂಸುತಿರೆ ದಂತಾ |
ಮಾತಾರಗಿಳಿಯಂತೆ ಶೋಭಿಸಿ |
ಕಪೋಲ ಸುತ್ತಲು ಬೆಳಗುವ ಕಂಗಳ ನಾಸಕಾಂತಿ |
ಸಿರಿ ತಿರುವೆಂಗಳಾ2

ಕಟಿ ಕರ ಎರಡೇಳು ಲೋಕ ಜಠರದೊಳಡಗಿರೆ |
ಕರಿ ಪಲ್ಲಿನಂತೆ ಸುಂದರ ಜಂಘೆ ಗುಲ್ಫ ವಿ |
ಪಾದ ನಖ ಪರಿ ಪರಿ ರೇಖೆಗಳ ಕಾಲಿಂದಿಗೆ |
ನಿತ್ಯ ಮಂಗಳಾ 3

ನಿರಯ ತ್ತಮ ಜನ ಮನೋರಥ |
ಗಮ ಸಿದ್ಧಾಂತನೆ ವಿ | ಕ್ರಮದಾನವ ಹರ |
ಕೋಟಿ ಪ್ರಕಾಶಾ | ವೆಂಕಟೇಶಾ |
ಅಪ್ರಾಕೃತ |
ಪ್ರಮೆಯಭರಿತನಾದ | ಕುರುವಂಶ ವಿನಾಶಾ 4

ಭೂಗೋಳದೊಳಗಿದರಾಗಮ ತಿಳಿ | ದುರಗ ಗಿರಿ ಯಾತ್ರಿಗೆ |
ಭೋಗದಾಶೆಯ ಬಿಟ್ಟು | ವೇಗದಿಂದಲಿ ನಿಜ |
ಭವ ಸಾಗಿ ಬರಲು ಚನ್ನಾಗಿ ಜ್ಞಾನವ ನೀವುತ್ತ ಸಾಕುವಂಥ |
ಶ್ರೀ ಗುರು ವಿಜಯವಿಠ್ಠಲ ಭಕ್ತರ ದಾತಾ5
*******