..
kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು
ಶ್ರೀ ನಾಮಕಲ್ ಹನುಮಂತ
ಹನುಮಂತನ ಪಾದ ವನಜಕೆ ಶರಣು ಪ
ಹನುಮಂತನ ಪಾದ ವನಜಕ್ಕೆ ಎರಗಲು
ಅನಿಷ್ಟಗಳಳಿದು ಇಷ್ಟಾರ್ಥಗಳೀವ ಅ ಪ
ಇನಸುತಗೊಲಿದನು ಹನುಮ ಆದುದರಿಂದ
ಇನಕುಲ ತಿಲಕನು ತಾನೂ ಪಾಲಿಸಿದ 1
ಅನಿಮಿಷರಲಿ ಇವ ಪ್ರಥಮನಾಗಿಹ - ಭಾವಿ
ವನರುಹಾಸನ ಜಗತ್ ಪ್ರಾಣ ಜೀವೋತ್ತಮ 2
ನಾಮಗಿರೀಶ ಶ್ರೀ ಪ್ರಸನ್ನ ಶ್ರೀನಿವಾಸನ್ನ
ನಮಗೆಲ್ಲ ಒಲಿಸಲು ನಾಮಶಿಲದಿ ನಿಂತ 3
***