Thursday, 5 August 2021

ಹನುಮಂತನ ಪಾದ ವನಜಕೆ ಶರಣು ankita prasannashreenivasa

 ..


kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು

ಶ್ರೀ ನಾಮಕಲ್ ಹನುಮಂತ


ಹನುಮಂತನ ಪಾದ ವನಜಕೆ ಶರಣು ಪ


ಹನುಮಂತನ ಪಾದ ವನಜಕ್ಕೆ ಎರಗಲು

ಅನಿಷ್ಟಗಳಳಿದು ಇಷ್ಟಾರ್ಥಗಳೀವ ಅ ಪ


ಇನಸುತಗೊಲಿದನು ಹನುಮ ಆದುದರಿಂದ

ಇನಕುಲ ತಿಲಕನು ತಾನೂ ಪಾಲಿಸಿದ 1

ಅನಿಮಿಷರಲಿ ಇವ ಪ್ರಥಮನಾಗಿಹ - ಭಾವಿ

ವನರುಹಾಸನ ಜಗತ್ ಪ್ರಾಣ ಜೀವೋತ್ತಮ 2

ನಾಮಗಿರೀಶ ಶ್ರೀ ಪ್ರಸನ್ನ ಶ್ರೀನಿವಾಸನ್ನ

ನಮಗೆಲ್ಲ ಒಲಿಸಲು ನಾಮಶಿಲದಿ ನಿಂತ 3

***


No comments:

Post a Comment