..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಗೋಪಾಲ ದಾಸಾರ್ಯ ವಿಜಯ
ಭಾಗಣ್ಣ ಗೋಪಾಲ ದಾಸಾರ್ಯರ್ ಪಾದಕ್ಕೆ
ಬಾಗಿ ಶರಣಾದೆನು ಸತತ ನಿಶ್ಚಯದಿ
ಜಗದಾದಿ ಕರ್ತ ಅಜ ಅಘದೂರ ಸುಗುಣಾಬ್ಧಿ
ತುರಗಾಸ್ಯ ವಿಜಯ ಶ್ರೀನಿವಾಸ ಪ್ರಿಯತಮರು || ಭಾಗಣ್ಣ ಪ
ನಾರ ಸುಗುಣಾರ್ಣವನು ಶ್ರೀರಮಾಪತಿ ಹಂಸ
ಸರಿಸಿಜಾಸನ ಸನಕ ದೂರ್ವಾಸ ಇಂಥಾ
ಪರಮೋತ್ಕøಷ್ಟ ಗುರು ಪರಂಪರೆಗೆ ಶರಣೆಂಬೆ
ಪುರುಷೋತ್ತಮಾಚ್ಯುತ ಪ್ರೇಕ್ಷರಿಗೆ ಶರಣು 1
ಸದಾಗಮಾಮಾಯಗಳು ಬ್ರಹ್ಮ ಧಾಮವೆÉಂದು
ಉದ್ಘೋಷಿಸುತಿವೆ ಮುಖ್ಯವಾಯುದೇವ
ಮಾತರಿಶ್ವ ಸೂತ್ರ ಪವಮಾನ ಮುಖ್ಯಪ್ರಾಣ
ಪ್ರತಿರಹಿತ ಬಲಜ್ಞಾನ ರೂಪ ಹನುಮ ಭೀಮ ಮಧ್ವನ್ನ 2
ಪ್ರೋಚ್ಚಸುರವರ ವಾಯುವಿನ ತೃತೀಯಾವತಾರ ಮಧ್ವ
ಅಚ್ಯುತ ಪ್ರೇಕ್ಷರಲಿ ಸಂನ್ಯಾಸಕೊಂಡು
ಪ್ರಚ್ಛನ್ನ ಬೌದ್ಧಾದಿ ಮತ ಪಂಕದಿ ಬಿದ್ದಿದ್ದ
ಸಜ್ಜನರನ್ನುದ್ಧರಿಸಿ ಸತ್ನಜ್ಞಾವಿತ್ತ 3
ಶ್ರೀ ಮಧ್ವಗುರು ವಂಶಸ್ಥ ಪದ್ಮನಾಭ ನರಹರಿ
ಮಾಧವಾಕ್ಷೋಭ್ಯಜಯ ವಿದ್ಯಾಧಿರಾಜ
ವಿದ್ಯಾಧಿರಾಜರ ಶಿಷ್ಯರು ಈರ್ವರು
ಸಾಧು ಉತ್ಕøಷ್ಟರೀ ತೀರ್ಥರ್‍ಗಳಿಗೆ ಶರಣು 4
ಶ್ರೀ ವಿದ್ಯಾಧಿರಾಜರ ಪ್ರಥಮ ಶಿಷ್ಯ ರಾಜೇಂದ್ರ
ಹಸ್ತ ಪದ್ಮ ಜಾತರು ಜಯಧ್ವಜಾರ್ಯ
ಮಾಧವನ ಏಕಾಂತ ಭಕ್ತ ಪುರುಷೋತ್ತಮರು
ತತ್ಸುತ ಬ್ರಹ್ಮಣ್ಯರೀ ಸರ್ವರಿಗೂ ಶರಣು 5
ಪದ್ಮನಾಭ ತೀರ್ಥಜ ಲಕ್ಷ್ಮೀಧರರ ವಂಶ
ಜಾತ ಸುವರ್ಣವರ್ಣ ತೀರ್ಥಾಭಿದರ
ಸುತಲಕ್ಷ್ಮೀ ನಾರಾಯಣ ಯತಿವರ್ಯ ಶ್ರೀ
ಪಾದರಾಜರು ಈ ಸರ್ವರಿಗೂ ಶರಣು 6
ಶಿಂಶುಮಾರ ಪುಚ್ಛಶ್ರಿತರ ಅವತಾರರೇ
ವಸುಮತೀಖ್ಯಾತ ಶ್ರೀಪಾದರಾಜರಲಿ
ಭಾಷ್ಯಾಧಿಗಳ ಕಲಿಯೇ ಬ್ರಹ್ಮಣ್ಯ ತೀರ್ಥರ
ಶಿಷ್ಯವರ್ಯ ವ್ಯಾಸರಾಜರು ಸೇರಿದರು 7
ವಾದಿಗಜ ಕೇಸರಿ ಮಧ್ವಮತೋದ್ಧಾರರು
ಮೇದಿನೀ ಪ್ರಖ್ಯಾತ ಮಹಾಭಾಗವತರು
ಸಾಧುಜನ ಆಹ್ಲಾದ ಶ್ರೀ ವ್ಯಾಸರಾಜರಲಿ
ಸದಾ ಶರಣು ಪಾಲಿಪರು ಪ್ರತಿ ಕ್ಷಣ ದಯದಿ 8
ಆನಂದ ಮುನಿಕರ ಅರವಿಂದ ಸಂಜಾತ
ವಿಷ್ಣುತೀರ್ಥ ವಂಶಜ ವಾಗೀಶರ ಹಸ್ತ
ವನರುಹೋತ್ಪನ್ನರು ಸುಮಹಾಮಹಿಮರು
ಘನ ದಯಾನಿಧಿ ವಾದಿರಾಜ ಸ್ವಾಮಿಗಳು 9
ಯುಕ್ತಿಮಲ್ಲಿಕಾ ಮೊದಲಾದ ತತ್ವಬೋಧಕವಾದ
ಗ್ರಂಥ ಪದ್ಯ ಕೀರ್ತನೆಗಳ್ ಸಜ್ಜನರಿಗಿತ್ತು
ಸೋದೆಯಲ್ಲಿ ತ್ರಿವಿಕ್ರಮಮೂರ್ತಿ ನಿಲ್ಲಿಸಿಹರು
ಭೂಧರ ಹಯಾಸ್ಯ ಪ್ರಿಯತಮ ಶ್ರೀ ವಾದಿರಾಜಾರ್ಯ 10
ತೀರ್ಥಪಾದ ಶ್ರೀಪತಿಯು ಬ್ರಹ್ಮ ಶಿವಾದ್ಯಮರ ಸಹ
ಸದಾ ಸನ್ನಿಹಿತವಾಗಿರುವ ಮತ್ತು
ತೀರ್ಥವನ ಕ್ಷೇತ್ರಗಳೊಳುತ್ತಮ ವೃಂದಾವನದಿ
ಅತ್ಯಕ್ತ ದೇಹದಿ ಕುಳಿತಿಹರು ಗುರುರಾಟ್ 11
ಬುಧರು ತಿಳಿದಂತೆಯೇ ಬ್ರಹ್ಮಾಂಡ ಪುರಾಣದಲ್ಲಿ
ವಾದಿರಾಜರು ಭಾವೀಕಲ್ಪ ಮುಖ್ಯವಾಯು
ಎಂದು ಪ್ರಸಿದ್ಧರೀ ಸುದುಪಾಸ್ಯ ಮದ್ಗುರುವರ್ಯರಲ್ಲಿ ಶರಣಾದೆ
ಸದಾನಮೋ ಲಾತವ್ಯಾಚಾರ್ಯ ಕರುಣಾಬ್ಧೆ 12
ವಿದ್ಯಾಧಿರಾಜರ ಎರಡನೇ ಶಿಷ್ಯರು
ಕವೀಂದ್ರ ಪೀಳಿಗೆಯ ಶ್ರೀರಾಮಚಂದ್ರ
ದ್ವಿತೀಯ ಶಿಷ್ಯ ವಿದ್ಯಾನಿಧಿ ವಂಶಜಾತರು
ಆದ್ಭುತಮಹಿಮರು ಕರುಣಿ ರಘೋತ್ತಮರು 13
ಕಾಮಿತಪ್ರದ ಟೀಕಾಭಾವ ಬೋಧಾರ್ಯರು
ಎಮ್ಮಪಾಲಿಪ ರಘೋತ್ತಮರಿಗೆ ಶರಣು
ರಾಮಚಂದ್ರರ ಮೊದಲನೆ ಶಿಷ್ಯ ವಿಬುಧೇಂದ್ರ
ಈ ಮಹಾತ್ಮರ ವಂಶಜರು ಸರ್ವರಿಗೂ ನಮಿಪೆ 14
ದುರ್ಜನರ ಕುಮತಗಿರಿವಜ್ರ ವಿಜಯೀಂದ್ರರು
ಸಜ್ಜನರುದ್ಧಾಕರು ಸುಧೀಂದ್ರಸೂರಿ
ನಿಜವಿರಾಗಿ ಯಾದವೇಂದ್ರ ವಿಜ್ಞಾನಿಯು
ಭಜಕಜನ ಸುರಧೇನು ರಾಘವೇಂದ್ರಾರ್ಯ 15
ಯಾರುಹಿಂದೆ ಏಡಮೂಕ ಬ್ರಾಹ್ಮಣನಾಗಿದ್ದಾಗ
ಯಾರದ್ವಾರಾ ಶ್ರೀ ವಾದಿರಾಜರು ಸ್ವಪ್ನದಲ್ಲಿ
ಉತ್ಕøಷ್ಟ ಶುಭತಮ ವೃಂದಾವನಾಖ್ಯಾನ ತಾವೇ ಹೇಳಿದರು
ಆಸೂರಿ ವಿಶ್ವಪ್ರಿಯಾರ್ಯರಿಗೆ ಶರಣು 16
ಸೂರಿಕುಲತಿಲಕರು ವಾದಿಕರಿಹರಿ ಖ್ಯಾತ
ಸಿರಿವ್ಯಾಸರಾಯರಲಿ ಮುದ್ರಿಕೆಯ ಕೊಂಡ
ನಾರದರ ಅವತಾರರೆಂದು ಪ್ರಸಿದ್ಧರು
ಪುರಂದರ ದಾಸಾರ್ಯ ಕರುಣಾಂಬುಧಿಗೆ ಆನಮಿಪೆ 17
ನಿರ್ಝರ ವೃಂದ ಋಷಿ ಭೃಗುಮುನಿಯೇ ಧರೆಯಲ್ಲಿ
ವಿಜಯದಾಸಾರ್ಯರಾಗಿ ಮೆರೆದವರ್ಗೆ ಶರಣು
ವಿಜಯವಿಟ್ಠಲನೊಲಿಯೆ ಜ್ಞಾನ ಭಕ್ತಿಸತ್ತತ್ವ
ಸಜ್ಜನರಿಗೆ ಬೋಧಿಸಿದ ನಿವ್ರ್ಯಾಜ ಕರುಣಿ 18
ಆಲಸ್ಯದಿನಾ ಮೈಥಿಲೀಪತಿ ಪಲ್ಲಿಯಲ್ಲಿ
ಮಲಗಿರಲು ಶ್ರೀ ಗೋಪಾಲದಾಸಾರ್ಯರು
ಬಲುಕರುಣದಲ್ಲಿ ಮುಂದೆ ನಿಂತು ಯತಿಕೃತ
ಮಾಲೋಲ ಪೂಜೆನೋಡಿ ಒದಗಿದ ಗುರುವರ್ಯ 19
ಉಮಾಸೂನು ವಿಘ್ನಹರ ಕ್ಷಿಪ್ರಪ್ರಸಾದನು
ಈ ಮಹೀಯಲ್ಲಿ ಗೋಪಾಲದಾಸರಾಗಿ
ರಮಾಪತಿಯ ಸೇವಿಸಿ ಸಜ್ಜರನ್ನುದ್ಧರಿಸಿಹರು
ನಮಿಸಿ ಶರಣಾದೆ ಈ ಉದಾರ ಕರುಣಿಗೆ 20
ಸುಪವಿತ್ರೆ ಸೌಭಾಗ್ಯಪ್ರದ ಮಂತ್ರಗಳನೆಗೆ
ಉಪದೇಶಮಾಡಿದ ಕಪಿಗೋತ್ರದವರು
ಸುಪುಣ್ಯ ಶೇಶ್ಲೀಕರು ಉದಾರ ಸಾತ್ವಿಕರು
ಶ್ರೀಪತಿ ಕೃಷ್ಣಪ್ರಿಯ ಶ್ರೀರಾಮಾಚಾರ್ಯರಿಗೆ ಶರಣು 21
ತರುಣತನಾರಭ್ಯ ಹರಿದಾಸತ್ವ ಒದಗಿಸಿ
ಪರಿಪರಿ ವಿಧದಲ್ಲಿ ಔದಾರ್ಯದಿಂದ
ಕಾರುಣ್ಯಬೀರಿ ಕಾಪಾಡುತಿರುವಂಥಾ ಈ
ಹರಿಪ್ರತಿಮಾರೂಪ ಗುರುಸರ್ವರಿಗೂ
ತಂದೆ ತಾಯಿಗೂ ಶರಣು 22
ದಧಿಶಿಲಾ ಎಂಬುವರು ಆಡಂಬರ ಪ್ರಿಯರು
ಮಂದಿಗಳು ಮೊಸರು ಕಲ್ಲೆಂದು ಕರೆಯುವರು
ಸಾಧು ವೈಷ್ಣವ ವಿಪ್ರ ಮುರಾರಿರಾಯರು
ಸಾಧ್ವಿ ವೆಂಕಮ್ಮ ದಂಪತಿ ಇದ್ದ ಕ್ಷೇತ್ರ 23
ಪುತ್ರ ರತ್ನಗಳು ನಾಲ್ಕು ಈ ದಂಪತಿಗೆ
ಅಗ್ರಜ ಭಾಗಣ್ಣ, ಸೀನಪ್ಪ, ದಾಸಪ್ಪ
ತರುವಾಯ ರಂಗಪ್ಪ ನಾಲ್ಕನೆಯವನಾಗಿ
ಗೌರವದಿ ಚರಿಸಿತು ಮುರಾರಿರಾಯರ ಕುಟುಂಬ 24
ಸಂಸಾರಾವಸ್ಥೆಯಲ್ಲಿ ನಶ್ವರ ಸುಖ ದುಃಖ
ಮಿಶ್ರವಾಗಿಯೆ ಉಂಟು ಆ ನಿಯತಿಯಲ್ಲಿ
ಭೂಸುರವರ್ಯರು ಮುರಾರಿರಾಯರು ಸ್ವರ್ಗ
ತಾ ಸೇರಿದರು ಸತಿ ಸುತರನ್ನು ಬಿಟ್ಟು 25
ಬಾಲಕರನ್ನು ಪ್ರಿತ್ರವ್ಯರು ಲೆಕ್ಕಿಸದಿರಲು
ಮಾಲೋಲ ಪಾಲಿಸುವ ಕರ್ತನ್ನೇ ನಂಬಿ
ಶೀಲೆ ವೆಂಕಮ್ಮ ಮಕ್ಕಳನ್ನ ಕರಕೊಂಡು
ಒಳ್ಳೆಯ ಜನಪದ ಶಂಖಪುರವೈದಿದಳು 26
ಶಂಖಪುರ ಹತ್ತಿರವೇ ಹನೂಮಂತನ ಗುಡಿ
ಮಕ್ಕಳ ಸಹ ಅಲ್ಲಿ ವಾಸಮಾಡಿ
ಮುಖ್ಯ ಪ್ರಾಣದೇವರ ಸೇವಿಸಿದ ಫಲವಾಗಿ
ಚಿಕ್ಕ ಜಮೀನು ಕೊಂಡಳು ದಾನವಾಗಿ 27
ದಾನ ಕೊಟ್ಟವನಿಗೆ ಬಲು ಪುಣ್ಯ ದೊರೆಯಿತು
ದಾನಿಗಳು ಭಾಗವತ ಶ್ರೇಷ್ಠರಾದ್ದರಿಂದ
ಹನುಮ ಗೋಪಾಲಾನುಗ್ರಹದಿಂದ ಐವರೂ
ಧಾನ್ಯಸಮೃದ್ದಿ ತೊರೆದರು ಆತಂಕ 28
ಕುಲ್ಕರ್ಣಿ ಎಂಬಂಥ ಸರ್ಕಾರ ಅಧಿಕಾರಿ
ವೆಂಕಮ್ಮನಲ್ಲಿ ಮಾತ್ಸರ್ಯ ದ್ವೇಷ ಬೆಳೆಸಿ
ಸರ್ಕಾರ ಕೆರೆ ನೀರು ಕದ್ದು ಹೊಯಿಸಿದಳೆಂದು ಆ
ಚಿಕ್ಕ ಜಮೀನ ಒಡಮೆ ಕಿತ್ತಿಕೊಂಡ 29
ಸಾಧ್ವೀ ವೆಂಕಮ್ಮನಿಗೂ ಮಹಾತ್ಮ ತತ್ಪುತ್ರರಿಗೂ
ಅಧಮ ಅಧಿಕಾರಿ ಮಾಡಿದ ದ್ರೋಹದಿಂದ
ಪುತ್ರ ಸಂತಾನ ವಂಶಕ್ಷೀಣವಾಯಿತು ಅವಗೆ
ಅಂದಿನಿಂದ ಕೆರೆ ಅದ್ಯಾಪಿ ನೀರಿಲ್ಲ ಆ ಕೆರೆಯಲ್ಲಿ 30
ದೀನರಿಗೂ ಸಾಧು ಮಹಾತ್ಮರಿಗೂ ಮಾಳ್ಪ
ಸಣ್ಣದೋ ದೊಡ್ಡದೋ ದ್ರೋಹಕ್ಕೆ ದಂಡನಾ
ಅನುಭವ ಕ್ಷಿಪ್ರದಲ್ಲೋ ಮೆಲ್ಲಗೋ ಅಪರಾಧಿ ಮೂರ್ಖಗೆ
ದೀನ ರಕ್ಷಕ ಸತ್ಪತಿ ಶ್ರೀ ಹರಿ ಈವ 31
ಭಾಗಣ್ಣ ಸೀನಪ್ಪ ದಾಸಪ್ಪ ರಂಗಪ್ಪ
ಲೌಕಿಕ ವಿದ್ಯಾ ಕಲಿತು ಉಪಾಧ್ಯಾಯರಲ್ಲಿ
ಭಾಗಣ್ಣನಿಗೆ ಶಾನುಭೋಗ ಮುಂಜಿಮಾಡಿ
ಭಗವದ್ವಿಷಯ ಕಲಿತರೂ ಭಾಗಣ್ಣ 32
ತತ್ಕಾಲ ಲೌಕಿಕ ಶ್ರೀತನ ಕೊರತೆ ನೋಡಿ
ಬಂಧುಗಳಿವರನ್ನುದಾಸೀನಮಾಡಿದರು
ಇಂದಿರಾ ಪತಿ ವೆಂಕಟಕೃಷ್ಣಗೋಪಾಲ
ಬಂದು ಶ್ರೀ ಒದಗಿಸಿದ ಕ್ಷಿಪ್ರದಲೆ ಇವರ್ಗೆ 33
ಬ್ರಹ್ಮಚಾರಿ ಭಾಗಣ್ಣ ಗಾಯತ್ರೀ ಮಂತ್ರವ
ಅಹರಹ ಸೂಕ್ಷ್ಮಾರ್ಥ ಅನುಸಂಧಾನ
ವಿಹಿತ ಶ್ರದ್ಧಾ ಉದ್ಭಕ್ತಿಪೂರ್ವಕ ಜಪಿಸೆ
ಶ್ರೀ ಹಯಾಸ್ಸ ನಾರಾಯಣನು ಒಲಿದ ಕ್ಷಿಪ್ರದಲೆ 34
ವೇದೋಚ್ಚಾರಣವೇ ಗಾನವು ಜಗದ್ರಕ್ಷಣೆಯೇ ತ್ರಾಣವು
ಮಾಧವನೇ ಗಾಯತ್ರಿನಾಮ ಹಯಗ್ರೀವ
ಭೂತಪೂರ್ಣವಾಗ್ವಶ್ರೀ ಪೃಥ್ವೀ ಆಶ್ರಯ ಶರೀರವ್ಯಾಪ್ತನು
ಹೃದಯ ಪ್ರಾಣಾಧಾರದಿವ ಪರಸ್ವರೂಪ
ಪಾದತ್ರಯವು ಜಗತ್ ಪಾದ ಸದೃಶ 35
ಜ್ಞಾನಸುಖ ಬಲಪೂರ್ಣ ಸರ್ವ ಜಗದಾದಿಕರ್ತ
ದಿನಪತೇಜ ಸ್ಫೂರ್ತಿದ ಚೇಷ್ಟಕಾಧಾರ
ಶ್ರೀ ನಾರಾಯಣದೇವ ನಿನ್ನ ಚಿಂತಿಪೆ ಭಜಿಪೆ
ಅನುಪಮ ಸರ್ವೋತ್ತಮ ನಮೋ ಕೇಶವಾದಿ ನಾಮ 36
ಲೌಕಿಕ ವಿಷಯಗಳೊಳ್ ಮನವಾಕ್ಕು ಚಲಿಸದೆ
ಏಕಚಿತ್ತದಿ ಗಾಯತ್ರೀ ಪ್ರತಿಪಾದÀ್ಯ
ಶ್ರೀ ಗಾಯತ್ರೀನಾಮ ನಾರಾಯಣನನ್ನ
ಭಾಗಣ್ಣ ಜಪಿಸಿದರು ಕಂಡರು ಶ್ರೀಕರನ್ನ 37
ಏಕಾಂತದಲ್ಲಿ ವೃಕ್ಷಮೂಲದಲ್ಲಿ ಕುಳಿತಿದ್ದ
ಭಾಗಣ್ಣನ ಜಪಕೆಡಿಸಿ ಓರ್ವ ದುಷ್ಟ
ಹಾಕಿದನು ಕುದಿನೀರು ಬೊಬ್ಬೆಗಳ್ ಅವನ ಮೇಲೆದ್ದವು
ಚಿಕಿತರಾಗಿ ಜನರು ಹೊಗಳಿದರು ಭಾಗಣ್ಣನ 38
ಮತ್ತೊಂದುದಿನ ಇದಕೆÀ ಮುಂದೆಯೋ ಹಿಂದೆಯೋ
ಸುತ್ತಿ ಭಾಗಣ್ಣ ವೃಕ್ಷಮೂಲದಲಿ ಸರ್ಪ
ಹಿತದಿ ಆಶೀರ್ವದಿಸಿ ಪೋದಂತೆ ಪೋಯಿತು
ಇದು ನೋಡಿ ಜನರು ಕೊಂಡರು ಭೀತಿ, ಆಶ್ಚರ್ಯ ಮರ್ಯಾದೆ 39
ಅಂದು ಮೃತಸರ್ಪ ಅರಿಯರಿಯರು ಶಮೀಕರು ಸಮಾಧಿಯಲಿ
ಇಂದು ತನ್ನ ಸರ್ಪ ಸುತ್ತಿರುವುದು ಭಾಗಣ್ಣ ಅರಿಯರು
ಇಂದಿರೇಶ ಒಲಿದವನಿವನೆಂದು ಶೇಷನೇ ಆಲಿಂಗಿಸಿದನೋ
ಸ್ಕಂಧ ತನ್ನಯ ಸಹೋದರನೆಂದಪ್ಪಿ ಕೋಂಡನೋ 40
ತತ್ವಮಾತೃಕಾನ್ಯಾಸಗಳ ಚರಿಸಿ
ಮಂತ್ರ ಮೂಲ ಪ್ರಣವ ಅಷ್ಟಾಕ್ಷರೀ ಗಾಯತ್ರೀ
ಭಕ್ತಿ ಪೂರ್ವಕ ಜಪಿಸಿ ಹೊರ ಒಳಗೆ ಶ್ರೀಹರಿಯ
ವ್ಯಾಪ್ತಿ ವಿಜ್ಞಾನ ಪುಟ್ಟಿತು ಈ ಚೌತಾಪರೋಕ್ಷಿಗೆ 41
ವ್ಯಾಪ್ತಿ ದರ್ಶಿಯು ಇವರು ಶ್ರೀ ವಿಷ್ಣು ಅನುಗ್ರಹದಿ
ಇಂದಿನ ಹಿಂದಿನ ಮುಂದಿನ ವಿಷಯ ಜ್ಞಾನ
ವೇದ್ಯವಾಯಿತು ಹರಿಸ್ಮರಣಾ ಪೂರ್ವ ಆಲೋಚನದಿ
ಬಂದು ಕೇಳುವವರಿಗೆ ಯೋಗ ಪೇಳಿದರು 42
ಯೋಗಕ್ಷೇಮ ಸರ್ವಕೂ ನಿಯಾಮಕನು ಹರಿಯೇವೆ
ಭಾಗಣ್ಣ ಈತತ್ವಜ್ಞಾನ ಪೂರ್ವಕದಿ
ಲೌಕಿಕ ಧನ ಅಪೇಕ್ಷಿಸದಿದ್ದರೂ ಜನರು
ಬಾಗಿ ದ್ರವ್ಯಗಳಿತ್ತು ಬೇಡಿದರು ಸ್ವೀಕರಿಸೆ 43
ಭವಿಷ್ಯ ಪೇಳುವುದರಲ್ಲಿ ಖ್ಯಾತಿ ಹರಡಿದ್ದಲ್ಲದೆ
ಸರ್ವೇಶನ ಸ್ತೋತ್ರಕವನ ಪಟು ಎಂದು
ಸರ್ವರೂ ಕೊಂಡಾಡಿ ಆ ಊರಿಗೆ ಬಂದ ಪ್ರಖ್ಯಾತ
ಕವಿಯನ್ನ ನಿಗ್ರಹಸಿ ಓಡಿಸಿದರು ಧೀರ 44
ದಿಗ್ವಜಯ ಜಯಶೀಲನೆಂದು ಖ್ಯಾತ ಆ ಕವಿ
ಭಾಗಣ್ಣ ಸೋಲಿಸಿ ಓಡಿಸಿದ್ದು
ಭಾಗಣ್ಣನ ಪ್ರಭಾವವ ಹರಡಿಸಿತು ನಾಡಲ್ಲಿ
ಭಾಗಣ್ಣಗೆ ಸನ್ಮಾನ ಮಾಡಿದರು 45
ಗದ್ವಾಲರಾಜನು ಇನ್ನೂ ಬಹು ಪ್ರಮುಖರು
ಬಂದು ನೇರವಾಗಿ ಭಾಗಣ್ಣನಲ್ಲಿ
ವಂದಿಸಿ ಸನ್ಮಾನ ಪ್ರಶಸ್ತಿಗಳ ಅರ್ಪಿಸಿ
ಪೋದರು ಶ್ಲಾಫಿಸುತ ತಮ್ಮ ತಮ್ಮ ಸ್ಥಳಕೆ 46
ಹಿಂದೆ ದ್ರವ್ಯ ಹೀನನಾಗಿದ್ದ ಭಾಗಣ್ಣನಿಗೆ
ಇಂದು ಶ್ರೀಕೃಷ್ಣನ ಒಲುಮೆಯಿಂದ
ಬಂದು ಸೌಭಾಗ್ಯ ಶ್ರೀ ದ್ರವ್ಯಗಳು
ಔದಾರ್ಯದಿ ದಾನಾದಿಗಳ್ ಮಾಡಿದರು 47
ಇಷ್ಟರಲ್ಲೇ ಸೀನಪ್ಪ ದಾಸಪ್ಪ ರಂಗಪ್ಪ
ಪ್ರೌಢವಯಸ್‍ಐದಿ ಗದ್ವಾಲು ಹೋಗೆ ಅಲ್ಲಿ
ಮೌಢ್ಯ ಮಾತ್ಸರ್ಯದಿ ರಾಜ್ಯಾಧಿಕಾರಿಗಳು
ಕಡು ನಿರೋಧ ಮಾಡಿದರು ಮೂವರನ್ನು 48
ವೆಂಕಟೇಶನ ಇಚ್ಛಾ ಈಮೂವರು ಅಣ್ಣ
ಭಾಗಣ್ಣ ನಾಶ್ರಯದಲ್ಲೇವೆ ಇದ್ದು
ಅಗಲದೆ ಶ್ರೀಹರಿಗುಣಾನುವರ್ಣನಾಗಳ
ಸುಗಾನ ಮಾಡುತ್ತಾ ಇರಬೇಕು ಎಂದು 49
ಭಾಗಣ್ಣ ಅರ್ಯರು ಗದ್ವಾಲಿಗೆ ಪೋಗಿ
ಸುಗುಣವಂತ ತಮ್ಮಂದಿರನ್ನ ಕರೆತಂದು
ಅಗಣಿತ ಗುಣಾರ್ಣವ ಶ್ರೀಯಃ ಪತಿಯ ಸೇವೆಗೆ
ಯೋಗ್ಯೋಪದೇಶ ಪೂರ್ವಕ ತಯಾರು ಮಾಡಿದರು 50
ದಾಸಪ್ಪ ಸೀನಪ್ಪ ರಂಗಪ್ಪ ತಮ್ಮ ಜ್ಞಾನಭಕ್ತಿ
ಕಾಶಿಸಿ ವರ್ಧಿಪುದು ದಿನೇ ದಿನೇ ಹೆಚ್ಚಿ
ಶ್ರೀ ಶ್ರೀನಿವಾಸನ ಪ್ರೀತಿಗೆ ಭಾಗಣ್ಣ
ಚರಿಸುವ ಅನ್ನದಾನಾದಿಗಳಲ್ಲಿ ಸೇವಿಸಿದರು 51
ದ್ರವ್ಯ ಧಾನ್ಯರಾಶಿಗಳು ತುಂಬಿದ್ದು ಕಂಡು
ದೇವ ಬ್ರಾಹ್ಮಣ ಸೇವೆಗೆ ಅಕ್ಕಿ ಹೆಚ್ಚು ಬೇಡೆಂದು
ಯಾವರೂ ಕಾಣದೆ ವೆಂಕಮ್ಮ ಮುಚ್ಚಿಡಲು
ಯಾವತ್ತೂ ಅಕ್ಕಿಯು ಹುಳುವಾಯ್ತು ಮರುದಿನ 52
ಹರಿಬಲುಮೆಯಿಂದ ಭಾಗಣ್ಣ ಈ ರೀತಿ ತೋರಿಸಲು
ಹರಿಭಕ್ತಿ ವೈರಾಗ್ಯ ಹೆಚ್ಚಿತು ಮಾತೆಗೆ
ಭಾರಿತರ ಕೀರ್ತನಾ ಸೇವೆ ಅತಿಶಯ ಚರ್ಯ
ಅರಿತು ನಾಡೆಲ್ಲವೊ ಕೊಂಡಾಡಿತು ಭಾಗಣ್ಣನ 53
ಉತ್ತನೂರು ಸಮೀಪವು ಐಜೀ ಎಂಬುವ ಗ್ರಾಮ
ಉತ್ತಮ ಬ್ರಾಹ್ಮಣ (incomplete)
***
No comments:
Post a Comment