..
kruti by ವಿಶ್ವೇಂದ್ರತೀರ್ಥರು vishwendra teertharu sode mutt
ಶೇಷಮೂರುತಿ ಪೋಷಿಸೆನ್ನ
ಹಾಸಿಗೆಯಾಗಿ ನೀ ಹರಿಯ ಪೊತ್ತಿರುವಿ ಪ
ಶ್ವೇತದ್ವೀಪದ ಮಧ್ಯದಲ್ಲಿ
ದೇವನರಸಿಯ ಕೂಡುತ್ತಲಿರಲು
ಭಕ್ತಿಯಿಂದಲಿ ಕಂಗಳಿಂದ
ಬಿಡದೆ ನೋಡುತಲಿಪ್ಪ ಸಮಯ1
ಮಗಳ ಲಜ್ಜೆಯ ಕಂಡು ಪಿತನು
ಹಾಲಿನ ತೆರೆಯಿಂದ ಕಣ್ಣನೆ ಮುಚ್ಚಿಸಿಹನು
ಮಗಳ ಮೇಲಿನ ಪ್ರೀತಿ ಪಿತಗೆ
ಯೆಣಿಸಲಾಗದು ಲೋಕದೊಳಗೆ 2
ರಾಜೇಶ ಹಯಮುಖ ಹರಿಗೆ
ಮಂಚವೆಂದರೆ ನೀನೆ ಖರೆಯು
ರಾಜರಾಜರಿಗಿಂಥ ಮಂಚ
ದೊರಕದೆಂದೆಂದಿಗೂ ದೇವ 3
***
No comments:
Post a Comment