Thursday, 5 August 2021

ಬೆಳಗುಝಾವದಿ ಬಾರೊ ಹರಿಯೆ ನಿನ್ನ ಚರಣತೊಳೆದು ankita bhupati vittala

 ..

kruti by bhupati vittalaru ( kakhandaki Ramacharyaru) 


ಬೆಳಗುಝಾವದಿ ಬಾರೊ ಹರಿಯೆ ನಿನ್ನ ಚರಣತೊಳೆದು ತೀರ್ಥ ಪಾನ ಮಾಡುವೆ ನಾ ಪ


ನೀರುಬಿಟ್ಟು ಮೇಲೆ ಬಾರೋ ಬೆನ್ನ ಭಾರವನು ಕೆಳಗಿಟ್ಟು ಬಾರಯ್ಯಾ ಹರಿಯೆಕೋರೆದಾಡಿಯ ತೋರ ಬಾರೋ ನಿನ್ನಧೀರ ಗಂಭೀರ ನರಹರಿ ರೂಪ ತೋರೊ1

ಪುಟ್ಟ ಬ್ರಾಹ್ಮಣನಾಗಿ ಬಾರೊ ಆ-ದುಷ್ಟ ಕ್ಷತ್ರಿಯರನ್ನು ತಿರಿದವನೆ ಬಾರೋಸತ್ಯಸಂಧ ರಾಮ ಬಾರೋ ಬಲುಸಿಸ್ತಾಗಿ ಕೊಳಲನೂದುತ ಕೃಷ್ಣ ಬಾರೋ 2

ಬುದ್ಧ ಪ್ರಬುದ್ಧನಾಗಿ ಬಾರೊ ಬಲುದೊಡ್ಡ ತೇಜಿಯನೇರಿ ಭರದಿಂದ ಬಾರೋಮುದ್ದು ಭೂಪತಿ ವಿಠ್ಠಲ ಬಾರೋ ನಮ್ಮಮಧ್ವರಾಯರಿಗೊಲಿದ ಕೃಷ್ಣಯ್ಯ ಬಾರೋ 3

***


No comments:

Post a Comment