..
kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಶಿವ
ಸೋಮಶೇಖರ ಶಿವನೆ ಹೈಮವತಿವರ ನಿನ್ನ
ತಾಮರಸ ಪದಯುಗಳಕಾ ನಮಿಪೆ ಕಾಯೋ ಪ
ಕಾಮಹರ ಸ್ಕಂಧಪಿತ ಅಮರೇಂದ್ರ ಮುಖವಿನುತ
ರಾಮ ನರಹುದಾಸ ಅಮರತಟನೀಧರನೆ ಅಪ
ರುದ್ರನೇ ನಮೋ ಎನ್ನುಪದ್ರವಗಳನು ತರಿದು
1ಭದ್ರವನು ಇಟ್ಟೆನ್ನ ಉದ್ಧರಿಸೊ ದಯದಿ
ರುದ್ರ ಭವಬಂಧಹರ ದುರ್ಗಾರಮಣನಾದ
ಪದ್ಮಭವತಾತನಿಗೆ ಪ್ರಿಯತರನೆ ತ್ರಿಪುರಾರಿ 1
ಈಶ ಶಿವ ಮಹದೇವ ಈಶಾನ ನಮೋ ನಿನಗೆ
ವಾಸವಾದ್ಯಮರ ಜಗದ್ಗುರುವೆ ಶರಣೆಂಬೆ
ಈಶ ಕೇಶವ ದೋಷದೂರ ಸುಖಮಯ ಶ್ರೀಶ
ದಾಶಾರ್ಹನಲಿ ಎನ್ನ ಮನವ ಚಲಿಸದೆ ನಿಲಿಸೊ 2
ತೀರ್ಥಪಾದನು ಸರ್ವ ಚೇತನರ ದೇಹಸ್ಥ
ಕೃತ್ತಿವಾಸನು ಶ್ರೀ ಪ್ರಸನ್ನ ಶ್ರೀನಿವಾಸ
ಕೃತಿಜಯಾಶ್ರದ್ಧೇಶ ಸಹ ಜ್ವಲಿಪ ನಿನ್ನೊಳಗೆ
ಕೃತ್ತಿವಾಸನೆ ನಮೋ ಶುಭದ ಪಾರ್ವತೀಶ 3
***
No comments:
Post a Comment