Showing posts with label ಶರಣು ಭಾರತೀ ತಾಯೆ ಕರವಬಿಡದಲೆ pranesha vittala. Show all posts
Showing posts with label ಶರಣು ಭಾರತೀ ತಾಯೆ ಕರವಬಿಡದಲೆ pranesha vittala. Show all posts

Sunday, 17 November 2019

ಶರಣು ಭಾರತೀ ತಾಯೆ ಕರವಬಿಡದಲೆ ankita pranesha vittala

by ಪ್ರಾಣೇಶದಾಸರು
ಶರಣು ಭಾರತೀ ತಾಯೆ |ಕರವಬಿಡದಲೆ ಕಾಯೆ ||ಮರುತದೇವನ ರಮಣಿ | ಸುರ ನದಿಯ ಭಗಿನಿ ಪ

ಪ್ರದ್ಯುಮ್ನ ದೇವಸುತೆ | ರುದ್ರಾದಿ ಸುರ ವಿನುತೆ ||ಭದ್ರ ವಿಗ್ರಹೆ ದಯಾ ಸ | ಮುದ್ರೆ ಕುಲಿಶೆ ||ಅದ್ರಿಯೋಪಮ ದೋಷ | ಕಿದ್ದ ದುರ್ಮತಿಕ್ಲೇಶ||ವೊದ್ದು ನಿನ್ನವನೆನ್ನು | ಬುದ್ಧಿ ಕೊಡು ಇನ್ನೂ 1

ನೀರಜಾಂಬಕೆ ಯನಗೆ | ತೋರು ಸಾಧನ ಕುನಗೆ |ಜಾರಿಸು ಭಕುತಿಯನ್ನು | ತೋರು ಕರುಣಾ ||ವಾರಿಧಿಹರಿಯಪಾದ| ಆರಾಧಿಸಲುಮೋದ|ವಾರವಾರಕೆ ಈಯೇ |ವಾರಣಗಮನೆಯೇ 2

ಪ್ರಾಣೇಶ ವಿಠಲನ | ಧ್ಯಾನದೊಳಗಿರಿಸು ಮನ |ವಾಣೀ ಪದವೈದುವಳೇ |ಮಾನನಿನ್ನದೆಲೆ ||ಹೀನ ವಿಷಯಗಳೊಲ್ಲೆ | ನೀನೇ ಸ್ವಾಂತದಿ ನಿಲ್ಲೆ |ಕ್ಷೋಣಿಯೊಳಗತಿ ಮಾನೀ | ಜ್ಞಾನೀ ಅಹಿವೇಣೀ 3
*******