ಶರಣು ಶ್ರೀ ಗುರು ರಾಘವೇಂದ್ರಗೆ
ಶರಣು ಭಕುತಸುರೇಂದ್ರಗೆ
ಶರಣು ಶರಣರ ಪೊರೆವ ಕರುಣಿಗೆ
ಶರಣು ಸುರವರಧೇನುಗೆ ಪ
ಮಧ್ವಮತ ಶುಭವಾರ್ಧಿ ಚಂದ್ರಗೆ
ಸಿದ್ಧಸಾಧನ ಮೂರ್ತಿಗೆ
ಬದ್ಧ ಶ್ರೀಹರಿ ದ್ವೇಷಿ ಮಾಯಿಗಳ
ಗೆದ್ದ ರಘುಕುಲ ರಾಮದೂತಗೆ 1
ನಿತ್ಯ ನಿರ್ಮಲ ಪುಣ್ಯಗಾತ್ರಗೆ
ಭೃತ್ಯಜನ ಪರಿಪಾಲಗೆ
ಸತ್ಯ ಸಂಕಲ್ಪಾನುಸಾರದಿ
ನಿತ್ಯ ಕರ್ಮವ ಮಾಳ್ಪ ಧೊರಿಗೆ 2
ಪಾತಕಾಂಬುಧಿ ಕುಂಭüಸಂಭವ
ಅರ್ತಜನ ಪರಿಪಾಲಗೆ
ದಾತ ಗುರು ಜಗನ್ನಾಥವಿಠಲನ
ಪ್ರೀತ ಸುಖಮಯ ದಾತಯತಿಗೆ 3
****