Showing posts with label ಶ್ರೀಗುರುರಾಜನೆ ಪಾಲಿಸೋ ಎನ್ನನು lakumeesha. Show all posts
Showing posts with label ಶ್ರೀಗುರುರಾಜನೆ ಪಾಲಿಸೋ ಎನ್ನನು lakumeesha. Show all posts

Monday, 6 September 2021

ಶ್ರೀಗುರುರಾಜನೆ ಪಾಲಿಸೋ ಎನ್ನನು ankita lakumeesha

 ankita ಲಕುಮೀಶ 

ರಾಗ: [ಕಾನಡ] ತಾಳ: [ಆದಿ]


ಶ್ರೀ ಗುರುರಾಜನೆ ಪಾಲಿಸೋ ಎನ್ನನು 


ಬಾಗಿ ನಿನ್ನನು ಬಗೆಬಗೆ ಪೊಗಳುವೆ 

ಜಾಗುಮಾಡದೆ ಪದ ಈಗಲೇ ತೋರಿಸೋ  ಅ ಪ


ತುಂಗಾತಟನಿಲಯ ಶ್ರೀನರಸಿಂಗಮೂರ್ತಿಯ

ಹಿಂಗದೆ ಧ್ಯಾನಿಪ ಮಹಿಮನೆ

ಭಂಗಪಡಿಪ ದುಸ್ಸಂಗವ ಕಳೆಯೋ  1

ಬೃಂದಾವನದಿಂದಲಿ ಮಂತ್ರಮಂದಿರನೆ ಸದನ-

ಎಂದೆನಿಸುತ ಸಲೆ ಬಂದ ಭಕುತರಿಗೆ ತಂದೆ ನೀ 

ಅಂದದಿ ವರವಿತ್ತು ಪೋಷಿಪ  2

ಮೂಲರಾಮರ ರಾಜಿಪ ಪದಕೀಲಾಲಜ ಭ್ರಮರ

ಕೇಳೊ ಮೊರೆಯ ವಿಶಾಲ ಶುಭಗುಣನೆ

ಕಾಳಿಮಥನ ಲಕುಮೀಶನ ತೋರೋ  3

***