Showing posts with label ಹೇಗೆ ಮಾಡಬೇಕು ಭಜನೆಯನು ಹೇಗೆ ಮಾಡಬೇಕು bhupati vittala. Show all posts
Showing posts with label ಹೇಗೆ ಮಾಡಬೇಕು ಭಜನೆಯನು ಹೇಗೆ ಮಾಡಬೇಕು bhupati vittala. Show all posts

Thursday, 5 August 2021

ಹೇಗೆ ಮಾಡಬೇಕು ಭಜನೆಯನು ಹೇಗೆ ಮಾಡಬೇಕು ankita bhupati vittala

 ..

kruti by bhupati vittalaru ( kakhandaki Ramacharyaru) 


ಹೇಗೆ ಮಾಡಬೇಕು ಭಜನೆಯನು ಹೇಗೆ ಮಾಡಬೇಕುಬೇಗ ಜ್ಞಾನ ಭಕ್ತಿ ವೈರಾಗ್ಯ ಬರುವಂತೆ ಭಜನೆಮಾಡಬೇಕು ಪ


ಆಧ್ಯಾತ್ಮಿಕ ವಿಷಯದಲಿ ಮೊದಲು ಬಲು ಶುದ್ಧಜ್ಞಾನ ಬೇಕುಮಹಾತ್ಮ್ಯದ ಸುಜ್ಞಾನ ಪೂರ್ವಕ ಸುಧೃಡ ಸ್ನೇಹಬೇಕುದೇಹದೌಲತ್ತಿನ ಸ್ವರೂಪವರಿತು ವೈರಾಗ್ಯ ಹುಟ್ಟಬೇಕುಈ ಮೂರು ಮನಸಿನಲಿ ಮೂಡುವಂತೆ ನಾವು ಭಜನೆ ಮಾಡಬೇಕು 1

ನಾನು ನನ್ನದೆಂಬ ಅಹಂಕಾರ ದಿನದಿನಕೆ ಅಳಿಯಬೇಕುಮಾನಾಪಮಾನವು ಆದರೆ ಹಿಗ್ಗದೆ  ಕುಗ್ಗದೆ ಇರಬೇಕುಹೆಣ್ಣು ಹೊನ್ನು ಮಣ್ಣುಗಳ ವಿಷಯದಲಿ ತ್ಯಾಗ ವೈರಾಗ್ಯ ಬುದ್ಧಿಬೇಕುಪುಣ್ಯ ಪಾಪಗಳನರಿತ ಸದ್ಭಕ್ತರ ಸಂಗತಿ ಇರಬೇಕು 2

ಮಧ್ವಮತದ ಸಾತ್ವಿಕರ ಸಂಗದಲಿ ಭಜನೆ ನಡೆಯಬೇಕುಶುದ್ಧಮನದ ಸಾತ್ವಿಕರ ಸಂಗದಲಿ ಭಜನೆ ನಡೆಯಬೇಕುಬುದ್ಧಿಗೇಡಿ ದುರ್ದೈವಿ ದುಷ್ಟರನು ದೂರದಲಿ ಇಡಬೇಕುಶ್ರದ್ಧೆುಂದ ಭೂಪತಿವಿಠ್ಠಲನನು ಭಜಿಸಿ ಕುಣಿಯಬೇಕು 

***