..
kruti by bhupati vittalaru ( kakhandaki Ramacharyaru)
ಹೇಗೆ ಮಾಡಬೇಕು ಭಜನೆಯನು ಹೇಗೆ ಮಾಡಬೇಕುಬೇಗ ಜ್ಞಾನ ಭಕ್ತಿ ವೈರಾಗ್ಯ ಬರುವಂತೆ ಭಜನೆಮಾಡಬೇಕು ಪ
ಆಧ್ಯಾತ್ಮಿಕ ವಿಷಯದಲಿ ಮೊದಲು ಬಲು ಶುದ್ಧಜ್ಞಾನ ಬೇಕುಮಹಾತ್ಮ್ಯದ ಸುಜ್ಞಾನ ಪೂರ್ವಕ ಸುಧೃಡ ಸ್ನೇಹಬೇಕುದೇಹದೌಲತ್ತಿನ ಸ್ವರೂಪವರಿತು ವೈರಾಗ್ಯ ಹುಟ್ಟಬೇಕುಈ ಮೂರು ಮನಸಿನಲಿ ಮೂಡುವಂತೆ ನಾವು ಭಜನೆ ಮಾಡಬೇಕು 1
ನಾನು ನನ್ನದೆಂಬ ಅಹಂಕಾರ ದಿನದಿನಕೆ ಅಳಿಯಬೇಕುಮಾನಾಪಮಾನವು ಆದರೆ ಹಿಗ್ಗದೆ ಕುಗ್ಗದೆ ಇರಬೇಕುಹೆಣ್ಣು ಹೊನ್ನು ಮಣ್ಣುಗಳ ವಿಷಯದಲಿ ತ್ಯಾಗ ವೈರಾಗ್ಯ ಬುದ್ಧಿಬೇಕುಪುಣ್ಯ ಪಾಪಗಳನರಿತ ಸದ್ಭಕ್ತರ ಸಂಗತಿ ಇರಬೇಕು 2
ಮಧ್ವಮತದ ಸಾತ್ವಿಕರ ಸಂಗದಲಿ ಭಜನೆ ನಡೆಯಬೇಕುಶುದ್ಧಮನದ ಸಾತ್ವಿಕರ ಸಂಗದಲಿ ಭಜನೆ ನಡೆಯಬೇಕುಬುದ್ಧಿಗೇಡಿ ದುರ್ದೈವಿ ದುಷ್ಟರನು ದೂರದಲಿ ಇಡಬೇಕುಶ್ರದ್ಧೆುಂದ ಭೂಪತಿವಿಠ್ಠಲನನು ಭಜಿಸಿ ಕುಣಿಯಬೇಕು
***
No comments:
Post a Comment