..
kruti: tandevaradagopala vittala (ಪ್ರಹ್ಲಾದಗೌಡರು)
ಗುರು ಪರಂಪರೆ
ಮಧ್ವರಾಯರಿಗೆ ನಮೋ ನಮೋ ಗುರು ಮಧ್ವಸಂತತಿಗೆನಮೋ ನಮೋ ಪ
ಸಂತತ ಶುಭವಾದೆನುತ ದಾಸಜನರಿಗೇಕ ಚಿತ್ತದಿಂದವಂದಿಸಿ ಬೇಡುವೆ ಅ.ಪ.
ಕುಸುಮನಾಭರ ಸಮ ನಾಲ್ವರುಯೆಂದೆನಿಪಹಸನಾದ ಗುರುಗಳ ಸ್ಮರಿಸುತಾನ್ಯಾಯಸುಧಾಕಾರರಿಗೆ ನಮೋ ನಮೋ 1
ರಘುಕುಲನಂದನ ಸುಬ್ರಮಣ್ಯತೀರ್ಥ ಕರದಿ ಪಾಲಿತಗೆಬಿಡದೆ ಬೋಧಿಸಿದ ತಲೆಗೆ ನಮೋ ನಮೋ 2
ರಘೋತ್ತುಮಾಖ್ಯರ ಕಾರುಣ್ಯಪರೆಂದೆನಿಪರಿಗೆಸೂರಿತಾರೇಶ ಜಾತ ವಿಜೇಂದ್ರತನಯನೆನಿಪಶ್ರೀ ಸುಧೀಂದ್ರ ಪೋಷಿತ ಸದ್ಗುರು ರಾಘವೇಂದ್ರತಾತಗೆನಮೋ ನಮೋ 3
ಗುರುಪುರಂದರ ದಾಸರ ಸುಜಾತರ್ಗೆ ನಮೋ ವೈಕುಂಠದಾಸರಿಗೆ ನಮೋ ನಮೋ ಚನ್ನ ಚಿಕ್ಕಬದರಿನಿಲಯನ್ನ ಕಂಡರ್ಗೆ ಕರುಣಾಪಾತ್ರರುಯೆನಿಪವರದಗುರುಗೋಪಾಲ ಸು ಜಗನ್ನಾಥರಾಯರಿಗೆನಮೋ ನಮೋ 4
ತತ್ವಮಸಿ ವ್ಯಾಸ ಶ್ರೀಧರ ಶ್ರೀಗುರು ಶ್ರೀಪತಿ ಪ್ರಾಣೇಶಗುರು ವಿಜಯ ರಾಮಚಂದ್ರದಾಸರಿಗೆ ನಮೋ ನಮೋಬಾದರಾಯಣಗುರು ವೆಂಕಟ ಶ್ರೀನಿವಾಸ ಜಯಜಯೇಶತಂದೆವರದಗೋಪಾಲವಿಠಲನ ದಾಸರಿಗೆ ನಮೋ ನಮೋ5
***