Showing posts with label ಶರಣು ನಿತ್ಯಾನಂದ ಸದ್ಗುಣ ಸಾಂದ್ರ ನಿನ್ನ pranesha vittala. Show all posts
Showing posts with label ಶರಣು ನಿತ್ಯಾನಂದ ಸದ್ಗುಣ ಸಾಂದ್ರ ನಿನ್ನ pranesha vittala. Show all posts

Sunday, 17 November 2019

ಶರಣು ನಿತ್ಯಾನಂದ ಸದ್ಗುಣ ಸಾಂದ್ರ ನಿನ್ನ ankita pranesha vittala

by ಪ್ರಾಣೇಶದಾಸರು
ಶರಣು ನಿತ್ಯಾನಂದ ಸದ್ಗುಣ ಸಾಂದ್ರ, ನಿನ್ನ |ಚರಣಕಮಲಂಗಳಿಗೆ ಶ್ರೀ ವರದೇಂದ್ರ ಪ

ನಿನ್ನ ನಂಬಿದ ದಾಸರನವನಿಯೊಳು ಇಂಥ |ಬನ್ನಪಡಿಸುವುದುಚಿತವೆ ದಯಾಳು ||ಅನ್ಯರುಂಟೇ ನೀವಲ್ಲದುದ್ಧರಿಸಲು ಪ್ರ |ಪನ್ನ ಪೋಷಕ ಯನ್ನಬಿನ್ನಪಕೇಳು 1

ನರರ ಪಾಡಿಸದಿರೊ ಯತಿರಾಯಾಹರಿ|ಸ್ಮರಣೆ ಮಾಡಲು ಮನಕೊಡುಜೀಯ||ಕರಕರೆ ಭಾವದೊಳಗೊಂದುಪಾಯ ಕಾಣೆ |ಹರಿಸಿ ಕ್ಲೇಶವಮೋದತೋರಿಸಯ್ಯ 2

ಧರೆಗೆ ಪ್ರಸಿದ್ಧ ಪುಣ್ಯಾಲಯವಾಸ ಕಾಯೊ |ನೆರೆನಂಬಿದವರನ್ನ ರವಿಭಾಸ ||ಹರಿದಾಸರ ಕಾಡುವರನ್ನಾ ಭಾಸ ಮಾಡೊ |ಗುರುಪ್ರಾಣೇಶ ವಿಠಲನ್ನ ನಿಜದಾಸ 3
*******