..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ರುದ್ರದೇವರು
ದೇವತೆಗಳ ದೇವ ಮಹದೇವ ದೇವ
ಆವ ನಿಮಗೆ ಸರಿಯು ಕಾವುದೆಮ್ಮನು ಸರ್ವ ಪ
ಮೂರನೆ ತತ್ವದ ಒಡೆಯನು ನೀನಯ್ಯ
ಕಾರುಣಿಕ ಜನರಿಗಾರ್ಹ ಭಾವಕೆ
ಮಾರಮಣನಾ ನೆನೆದು ಮೈಮರೆದು ನೀ
ತಾರಕಾ ಉಪದೇಶಿ ಕಾಸಿ ವಾಸಿ 1
ಗಂಗೆಯ ಧರಿಸಿ ನೀ
ಭಂಗಬಡುವ ಜನರ ಪೂತನ ಮಾಡಿದ್ಯೊ
ಅಂಗಜನಯ್ಯನ ಭಕುತ ಶಿಖಾಮಣಿಯೆ ನಿ
ಸ್ಸಂಗ ಜನರ ಪ್ರಿಯ ಸನಕಾÀದಿ ವಂದ್ಯ 2
ಮೋಸಗೊಳಿಸುವಿಯೊ ದುರ್ಜನರ ನಾನೀಶನೆಂದು
ವಾಸುದೇವವಿಠಲಗಲ್ಲದವರ
ಲೇಸು ಬೋಧಿಸುವಿಯೊ ಯೋಗ್ಯರನು ನೋಡಿ
ಎನ್ನಲಿ ವಾಸ ಮಾಡೊ ಎನ್ನ ಮನದೊಡೆಯ 3
***