Showing posts with label ದಯಬಾರದ್ಯಾಕೊ ರಾಘವಾ ಕಾಯಬೇಕು vijaya vittala. Show all posts
Showing posts with label ದಯಬಾರದ್ಯಾಕೊ ರಾಘವಾ ಕಾಯಬೇಕು vijaya vittala. Show all posts

Wednesday, 16 October 2019

ದಯಬಾರದ್ಯಾಕೊ ರಾಘವಾ ಕಾಯಬೇಕು ankita vijaya vittala

ದಯ ಬಾರದ್ಯಾಕೊ ರಾಘವಾ ಪ

ಕಾಯಬೇಕು ಯೆಂದು ಕೊರಗಿ ಮೊರೆಯಿಡೆ
ನ್ಯಾಯವೇನು ಯೆನ್ನ ಮರತುಬಿಡುವದು ಅ.ಪ

ಅಂದು ಅಜಮಿಳನು ಅಂತ್ಯಕಾಲದಲ್ಲಿ
ಕಂದ ನಾರ ಬಾಯೆಂದು ಕರಿಯಲು
ಅಂದ ಮಾತುಗಳಿಗೆ ಅತಿ ಹರುಷಿಸಿ
ಬಂದ ಯಮನ ಬಾಧೆ ಬಿಡಿಸಲಿಲ್ಲವೇನೊ 1

ಹರಿಯೆ ಗತಿಯೆಂದು ಹೊಗಳು ಕಂದನ
ಹರುಷವಿಲ್ಲದೆ ಪಿತ ಕಷ್ಟಪಡಿಸಲು
ಊರು ತೋರದಂತಾ ಸ್ತಂಭದಿಂದ ಬಂದು
ಮೂರು ಜಗವು ಅರಿಯೆ ಮನ್ನಿಸಲಿಲ್ಲವೇನೊ 2

ಸರ್ಪಶಯನನೆ ಸಾರ್ವಭೌಮನೆ
ನಾಸಿಕ ಶ್ರೋತ್ರವಳಿದನೇ
ಅಪ್ಪ ಗುರುವರ ವಿಜಯವಿಠ್ಠಲನೇ
ಒಪ್ಪದಿಂದ ವಲಿವ ವರದರಾಜನೇ 3
********