Showing posts with label ರಾಮ ಜಯಾ ಶ್ರೀರಾಮ ಜಯಾ ಅಸುರ jagannatha vittala RAMA JAYA SRIRAMA JAYA ASURA. Show all posts
Showing posts with label ರಾಮ ಜಯಾ ಶ್ರೀರಾಮ ಜಯಾ ಅಸುರ jagannatha vittala RAMA JAYA SRIRAMA JAYA ASURA. Show all posts

Wednesday 21 April 2021

ರಾಮ ಜಯಾ ಶ್ರೀರಾಮ ಜಯಾ ಅಸುರ ankita jagannatha vittala RAMA JAYA SRIRAMA JAYA ASURA

Audio by Vidwan Sumukh Moudgalya



 ಶ್ರೀ ಜಗನ್ನಾಥದಾಸಾರ್ಯ ವಿರಚಿತ 


 ಶ್ರೀರಾಮಕಥಾಮೃತ


 ರಾಗ : ತೋಡಿ    ತಿಶ್ರನಡೆ


ರಾಮ ಜಯಾ ಶ್ರೀರಾಮ ಜಯಾ.....


ಅಸುರ ಬಾಧಿಸುತಿರಲು ಋಷಿಗಳು ಸ್ತುತಿಮಾಡೆ

ದಶರಥನ ಗರ್ಭದಲಿ ಜನಿಸಿಬಂದೆ ॥೧॥


ಶಿಶುವಾಗಿ ಕೌಸಲ್ಯೆಗೆ ಬಾಲಲೀಲೆಯತೋರ್ದು

ಕುಶಲದಿಂ ನಾಲ್ವರ ಕೂಡಿ ಬೆಳೆದೆ ॥೨॥


ಅಸುರರನೆ ಬಡಿದಟ್ಟಿ ಋಷಿಯ ಯಾಗವ ಕಾಯ್ದು

ವಸುಧೆಯೊಳು ಶಿಲೆಯನ್ನು ಸತಿಯ ಮಾಡಿ ॥೩॥


ಮಿಥಿಲ ಪಟ್ಟಣಕೈದಿ ಮೃಡನ ಧನುವನೆ ಮುರಿದು 

ಶಶಿಮುಖಿ ಜಾನಕಿಯ ಕರವ ಪಿಡಿದು ॥೪॥


ಪಥದೊಳಗೆ ಬರುತ ಭಾರ್ಗವರೊಡನೆ ಹೋರಾಡಿ

ದಶರಥಗೆ ಏಕೀಭಾವವನೆ ತೋರಿ ॥೫॥


ಪರಮ ಹರುಷದಲಿ ಸಾಕೇತನಗರಿಗೆ ಬಂದು 

ಕಿರಿಯ ಮಾತೆಯ ಕಠಿಣ ನುಡಿ ಕೇಳಿ ॥೬॥


ಚಿತ್ರಕೂಟಕೆ ಬಂದು ಕೃತ್ಯವೆಲ್ಲವ ನಡೆಸಿ

ಭ್ರಾತೃ ಭರತನಿಗೆ ಪಾದುಕೆನಿತ್ತು ॥೭॥


ವನದೊಳಗೆ ಸಂಚರಿಸಿ ಘನಕಾರ್ಯಗಳ ಮಾಡಿ

ಹನುಮನ ಕಳುಹಿ ಮುದ್ರಿಕೆಯ ಕೊಡಲು ॥೮॥


ಮಿತ್ರೆ ಜಾನಕಿಗರುಹಿ ರತ್ನಕೊಂಡು ಬರಲು

ಅತ್ಯಂತ ಹರುಷದಲಿ ಶರಧಿ ಕಟ್ಟಿ ॥೯॥


ದುಷ್ಟ ರಾಕ್ಷಸ ಕುಲವ ಕುಟ್ಟಿ ಬೇರನೆ ಸವರಿ

ಸೃಷ್ಠಸಿತೆ ಜಾನಕಿಯ ಅಗ್ನಿ ಹೊಗಿಸಿ ॥೧೦॥


ಪಟ್ಟಣಕೆ ಬಂದು ಭರತನಿಗೆ ಪೇಳೆ

ಅಷ್ಟಗಂಗೆ ಉದಕವನೆ ತಂದು ॥೧೧॥


ಅಷ್ಟ ಋಷಿಗಳು ಎಲ್ಲ ಕೂಡಿಕೊಂಡು

ಪಟ್ಟಾಭಿಷೇಕವನು ಮಾಡುತಿರಲ್ದು ॥೧೨॥


ಸೃಷ್ಠಿಯೊಳು ಜಗನ್ನಾಥವಿಟ್ಠಲನಿಗೆ ಪುಷ್ಪ

ವೃಷ್ಠಿಗಳನ್ನು ಕರೆದರಾಗ ॥೧೩॥

***


ರಾಮ ಜಯಾ ಶ್ರೀರಾಮ ಜಯಾ || PA ||


ಅಸುರ ಬಾಧಿಸುತಿರಲು ಋಷಿಗಳು ಸ್ತುತಿಮಾಡೆ

ದಶರಥನ ಗರ್ಭದಲಿ ಜನಿಸಿಬಂದೆ ॥ 1 ॥


ಶಿಶುವಾಗಿ ಕೌಸಲ್ಯೆಗೆ ಬಾಲಲೀಲೆಯತೋರ್ದು

ಕುಶಲದಿಂ ನಾಲ್ವರ ಕೂಡಿ ಬೆಳೆದೆ ॥ 2 ॥


ಅಸುರರನೆ ಬಡಿದಟ್ಟಿ ಋಷಿಯ ಯಾಗವ ಕಾಯ್ದು

ವಸುಧೆಯೊಳು ಶಿಲೆಯನ್ನು ಸತಿಯ ಮಾಡಿ ॥ 3 ॥


ಮಿಥಿಲ ಪಟ್ಟಣಕೈದಿ ಮೃಡನ ಧನುವನೆ ಮುರಿದು

ಶಶಿಮುಖಿ ಜಾನಕಿಯ ಕರವ ಪಿಡಿದು ॥ 4 ॥


ಪಥದೊಳಗೆ ಬರುತ ಭಾರ್ಗವರೊಡನೆ ಹೋರಾಡಿ

ದಶರಥಗೆ ಏಕೀಭಾವವನೆ ತೋರಿ ॥ 5 ॥


ಪರಮ ಹರುಷದಲಿ ಸಾಕೇತನಗರಿಗೆ ಬಂದು

ಕಿರಿಯ ಮಾತೆಯ ಕಠಿಣ ನುಡಿ ಕೇಳಿ ॥ 6 ॥


ಚಿತ್ರಕೂಟಕೆ ಬಂದು ಕೃತ್ಯವೆಲ್ಲವ ನಡೆಸಿ

ಭ್ರಾತೃ ಭರತನಿಗೆ ಪಾದುಕೆನಿತ್ತು ॥ 7 ॥


ವನದೊಳಗೆ ಸಂಚರಿಸಿ ಘನಕಾರ್ಯಗಳ ಮಾಡಿ

ಹನುಮನ ಕಳುಹಿ ಮುದ್ರಿಕೆಯ ಕೊಡಲು ॥ 8 ॥


ಮಿತ್ರೆ ಜಾನಕಿಗರುಹಿ ರತ್ನಕೊಂಡು ಬರಲು

ಅತ್ಯಂತ ಹರುಷದಲಿ ಶರಧಿ ಕಟ್ಟಿ ॥ 9 ॥


ದುಷ್ಟ ರಾಕ್ಷಸ ಕುಲವ ಕುಟ್ಟಿ ಬೇರನೆ ಸವರಿ

ಸೃಷ್ಠಸಿತೆ ಜಾನಕಿಯ ಅಗ್ನಿ ಹೊಗಿಸಿ ॥ 10 ॥


ಪಟ್ಟಣಕೆ ಬಂದು ಭರತನಿಗೆ ಪೇಳೆ

ಅಷ್ಟಗಂಗೆ ಉದಕವನೆ ತಂದು ॥ 11 ॥


ಅಷ್ಟ ಋಷಿಗಳು ಎಲ್ಲ ಕೂಡಿಕೊಂಡು

ಪಟ್ಟಾಭಿಷೇಕವನು ಮಾಡುತಿರಲ್ದು ॥ 12 ॥


ಸೃಷ್ಠಿಯೊಳು ಜಗನ್ನಾಥವಿಟ್ಠಲನಿಗೆ ಪುಷ್ಪ

ವೃಷ್ಠಿಗಳನ್ನು ಕರೆದರಾಗ ॥ 13 ॥

***


Rāma jayā śrīrāma jayā || PA ||


asura bādhisutiralu r̥ṣigaḷu stutimāḍe daśarathana garbhadali janisibande॥ 1॥


śiśuvāgi kausalyege bālalīleyatōrdu kuśaladiṁ nālvara kūḍi beḷede॥ 2 ॥


asurarane baḍidaṭṭi r̥ṣiya yāgava kāydu vasudheyoḷu śileyannu satiya māḍi॥ 3॥


mithila paṭṭaṇakaidi mr̥ḍana dhanuvane muridu śaśimukhi jānakiya karava piḍidu॥ 4॥


pathadoḷage baruta bhārgavaroḍane hōrāḍi daśarathage ēkībhāvavane tōri॥ 5॥


parama haruṣadali sākētanagarige bandu kiriya māteya kaṭhiṇa nuḍi kēḷi॥ 6॥


citrakūṭake bandu kr̥tyavellava naḍesi bhrātr̥ bharatanige pādukenittu॥ 7॥


vanadoḷage san̄carisi ghanakāryagaḷa māḍi hanumana kaḷuhi mudrikeya koḍalu॥ 8॥


mitre jānakigaruhi ratnakoṇḍu baralu atyanta haruṣadali śaradhi kaṭṭi॥ 9॥


duṣṭa rākṣasa kulava kuṭṭi bērane savari sr̥ṣṭhasite jānakiya agni hogisi॥ 10॥


paṭṭaṇake bandu bharatanige pēḷe aṣṭagaṅge udakavane tandu॥ 11॥


aṣṭa r̥ṣigaḷu ella kūḍikoṇḍu paṭṭābhiṣēkavanu māḍutiraldu॥ 12॥


sr̥ṣṭhiyoḷu jagannāthaviṭṭhalanige puṣpa vr̥ṣṭhigaḷannu karedarāga॥ 13॥


Plain English


Rama jaya srirama jaya || PA ||


asura badhisutiralu rsigalu stutimade dasarathana garbhadali janisibande॥ 1॥


sisuvagi kausalyege balalileyatordu kusaladim nalvara kudi belede॥ 2 ॥


asurarane badidatti rsiya yagava kaydu vasudheyolu sileyannu satiya madi॥ 3॥


mithila pattanakaidi mrdana dhanuvane muridu sasimukhi janakiya karava pididu॥ 4॥


pathadolage baruta bhargavarodane horadi dasarathage ekibhavavane tori॥ 5॥


parama harusadali saketanagarige bandu kiriya mateya kathina nudi keli॥ 6॥


citrakutake bandu krtyavellava nadesi bhratr bharatanige padukenittu॥ 7॥


vanadolage sancarisi ghanakaryagala madi hanumana kaluhi mudrikeya kodalu॥ 8॥


mitre janakigaruhi ratnakondu baralu atyanta harusadali saradhi katti॥ 9॥


dusta raksasa kulava kutti berane savari srsthasite janakiya agni hogisi॥ 10॥


pattanake bandu bharatanige pele astagange udakavane tandu॥ 11॥


asta rsigalu ella kudikondu pattabhisekavanu madutiraldu॥ 12॥


srsthiyolu jagannathavitthalanige puspa vrsthigalannu karedaraga॥ 13॥

***


 ಶ್ರೀ ಜಗನ್ನಾಥದಾಸರ ದಂಡಕ


ಅಖಿಲಾಂಡಕೋಟಿ ಬ್ರಹ್ಮಾಂಡನಾಯಕ , ಆಪದ್ಭಾಂದವ , ಆಶ್ರಿತವತ್ಸಲ, ಅಸುರಾರಿ , ಅಜಪಿತ , ಅನಂತಶಯನ, ಆದಿ ಮಧ್ಯಾಂತರಹಿತ , ಅಗಣಿತ ಗುಣಗಣಮಹಿಮ, ಆರ್ತ ಜನೋದ್ಧಾರಕ , ಅರವಿಂದ ನಯನ , ಅಚ್ಯುತಾ, ಅಮರವಂದಿತ, ಅಗ್ರವಣ್ಯ , ಅಮಿತ ಗುಣಭರಿತ , ಅತ್ರಿ ತನುಜಾತ, ಅನಿರುದ್ಧ, ಇಂದಿರಾಕ್ಷ,  ಇಂದಿರಾಪತಿ , ಇನಕುಲ ತಿಲಕ, ಇಷ್ಟಪ್ರದಾಯಕ, ಇಂದಿರೇಶಾ, ಇಂದುವದನ, ಉಪೇಂದ್ರ , ಉದಧಿ ಶಯನ, ಉರಗಶಯನ, ಉರಗಾದ್ರಿವಾಸ,ಉತ್ತಮಪುರುಷ, ಓಂಕಾರಸ್ವರೂಪ, ಕರುಣಾಕರ,ಕೃಪಣವತ್ಸಲ,ಕೃಷ್ಣವರ್ಣ, ಕೇಶವ ,ಕೈವಲ್ಯದಾಯಕ, ಕಾಮಿತಾರ್ಥಪ್ರದಾಯಕ, ಕಮಲನಾಭ, ಕಮಲಾಕ್ಷ, ಕಮಲಾಕಾಂತ ,ಖಗವಾಹನ, ಖಗಪತೀಶ, ಖಡ್ಗಪಾಣಿ , ಗರುಡವಾಹನ , ಗುಣಭರಿತ , ಗದಾಧರ , ಜ್ಞಾನದಾಯಕ, ಜ್ಞಾನ ಸ್ವರೂಪ, ಚಿನ್ಮಯರೂಪ , ಚಿದಾನಂದ , ಚಾರುಚರಿತ , ಚಕ್ರಪಾಣಿ , ಚನ್ನಕೇಶವ , ಚಿತ್ರವಿಚಿತ್ರ ರೂಪ , ಜನಾರ್ದನ , ಜನ್ಮಾಂತರಹಿತ,ಜಗದೇಕವಿಖ್ಯಾತ, ಜಗದೋದ್ಧಾರ,ಜಗನ್ಮಾತೆಯರಸ, ಜಾಮದಗ್ನಿ ಜಗದ್ರಕ್ಷಕ ಜಗನ್ಮೋಹನ ಜಾನ್ಹವಿಜನಕ ಜನಕ ಜಾಮಾತಾ, ಜಾನಕಿರಮಣ, ಜನಮನೋಲ್ಲಾಸ,ಜಯದೇವ, ಜಯಾರಮಣ, ಜಗನ್ನಾಥವಿಟ್ಠಲ ಜಗತ್ಪತೆ.

******