..
kruti by pradyumna teertha ಪ್ರದ್ಯುಮ್ನತೀರ್ಥರು
ಪಾಲಿಸೆನ್ನ ವೇಲಾಪುರ ಚೆನ್ನ ಪ
ಪಾಲಿಸು ಕರುಣಾ ನಿಲಯನೆಂದು ನಾ
ಕೇಳಿ ಬಂದೆ ಬಹು ಸುಂದರಕಾಯ ಅ.ಪ
ಪರಮ ಶಂಖ ಅರಿ ಮುದದಿ ಗದಾಧರ
ಪದಪದುಮದಿ ಮನ ಒದಗಿಸಿ ಬೇಗ 1
ಪೀತಾಂಬರ ಶ್ರೀವತ್ಸ ಕೌಸ್ತುಭದಿ
ಅತಿಶೋಭಿಪನೀ ಸ್ತುತಿಗೊಲಿಯುತಲಿ 2
ಚನ್ನಕೇಶವ ಬಿನ್ನೈಸುವೆನೋ
ಬೆನ್ನ ಬಿಡದಲಿ ಮನ್ನಿಸಿ ತ್ವರದಿ 3
ಕಂದನ ಕುಂದುಗಳೊಂದೆಣಿಸಲೆ
ಬಂದು ಚಿಂತನಕೆ ಇಂದಿರೆರಮಣ 4
ಮೀನಕೇತುಪಿತ ಶ್ರೀ ನರಹರಿಯೆ
ಜ್ಞಾನ ಭಕುತಿಯಿತ್ತು ಮೌನದಿಂದ ನೀ5
***