Showing posts with label ಎಂಥ ಕೀರುತಿ ಪೊತ್ತುವೆರಡು ಪಾದ ಶ್ರೀಕಾಂತ ಬಾಡದ ರಂಗ ಕರುಣಿ ದೇವೋತ್ತುಂಗ neleyadikeshava. Show all posts
Showing posts with label ಎಂಥ ಕೀರುತಿ ಪೊತ್ತುವೆರಡು ಪಾದ ಶ್ರೀಕಾಂತ ಬಾಡದ ರಂಗ ಕರುಣಿ ದೇವೋತ್ತುಂಗ neleyadikeshava. Show all posts

Wednesday, 1 September 2021

ಎಂಥ ಕೀರುತಿ ಪೊತ್ತುವೆರಡು ಪಾದ ಶ್ರೀಕಾಂತ ಬಾಡದ ರಂಗ ಕರುಣಿ ದೇವೋತ್ತುಂಗ ankita neleyadikeshava

 ..

ಎಂಥ ಕೀರುತಿ ಪೊತ್ತುವೆರಡು ಪಾದ - ಶ್ರೀ-ಕಾಂತ ಬಾಡದ ರಂಗ ಕರುಣಿ ದೇವೋತ್ತುಂಗ ಪ

ಕುಬ್ಜ ಬ್ರಾಹ್ಮಣನಾಗಿ ಕುಂಭಿನಿ ಈರಡಿ ಮಾಡಿಹೆಜ್ಜೆಯೊಳಡಗಿಟ್ಟ ಹೆಚ್ಚಿನ ಪಾದಅರ್ಜುನನ ಶಿರವ ಕಾಯಲು ಬಾಣದಿಂದ ರಥವಗುಜ್ಜೆಯಲೂರಿ ನೆಲಕೊತ್ತಿದ ಪಾದ 1

ಶಾಪದಿ ಬಹುಕಾಲ ಅಹಲ್ಯೆಯು ಶಿಲೆಯಾಗೆಆ ಪ್ರಾಣ ನಿರ್ಮಿಸಿದ ಅಧಿಕ ಪಾದಗೋಪಿ ಕಟ್ಟಿದ ಒರಳ ಗೊಲ್ಲಗೇರಿಗೆಳೆಯುತಆ ಫಣಿಯ ತಲೆಯ ಮೇಲಾಡಿದ ಪಾದ 2

ಕುರುರಾಯನೇಳದೆಯೆ ಕುಳಿತ ಸಿಂಹಾಸನದಿಉರುಳಿಸಿಬಿಟ್ಟಂತ ಉನ್ನತ ಪಾದಮರಕತ ನಗರಿಯ ಬಾಡ ಬಂಕಾಪುರದರಸು ಸಿರಿಯಾದಿಕೇಶವನ ಶ್ರೀಪಾದ3

***