..
Kruti by ವಿಜಯರಾಮಚಂದ್ರ ವಿಠಲ ದಾಸರು mysore kattemane
ಬಿಡನೆ ಬಿಡನೆ ನಿನ್ನ ಕೂಡ ವಾಸ
ಮೃಡನ ಜಟಾಂತರವಾಸಿ ನಾಮಕಳೆ ಪ
ನಿರುತ ಹರಿ ಗುರು ಕರುಣಾ ಪಾತ್ರೆ
ಪರಮ ಪುರುಷ ದೂಷಿ ನಿಚಯ ವೀತಿ ಹೋತ್ರೆ 1
ದುರಿತ ಮಾರ್ಗಚರಿತ ಜನ ಹೃತ್‍ಶೂಲೆ
ಪರಿಹತ ಮದನ ಶರಜಾಲೆ 2
ನಿವಾರಿತ ಮಮತಾ ಪಾಶ ವಾರಂ ವಾರೆ
ಹರಿಕಥಾಶ್ರವಣ ದಳಿತ ಅಶ್ರುಧಾರೆ 3
ವರಸತ್ಕಲಾಪ ಮಂದಾಯು ಹರಣೆ
ಪರಿಪರಿ ಸುಕ್ಷೇತ್ರ ಚರಿತ ಚರಣೆ 4
ಗುರುದತ್ತಾಶ್ರೀತ ವರಸುಪಥೆ
ಹರಿಸ್ಮರಣಾವಿನಾ ನ ಜೀವಿತ ಶಪಥೆ 5
ಪರಿಕರಾ ಪರಿತದಾಕಾರ ವೀಕ್ಷಿತ ನೇತ್ರೆ
ಸರಿತಶ್ವಾಸ ಸಾವೃತ ಪರಿಮಳಗಾತ್ರೆ 6
ಲಜ್ಜೋದಧಿ ನಕ್ಷೇಪಿತ ಗಜಗಮನೆ
ಅರ್ಜಿತಾಂಗಾರ ವಿಲಸಿತ ಶೃಂಗಾರ ವದನೆ 7
ರುಜು ಜ್ಞಾನಭಕ್ತಿ ವಿಧಾರಣ ಶಕ್ತೆ
ವಿಜಯ ರಾಮಚಂದ್ರವಿಠಲ ಪದ ಸೇವಾಸಕ್ತೆ 8
***