Showing posts with label ಸುಖದಿಂದ ಬಾಳೆ ಬಾಲೆ ಸುಮಂಗಲೇ shyamasundara. Show all posts
Showing posts with label ಸುಖದಿಂದ ಬಾಳೆ ಬಾಲೆ ಸುಮಂಗಲೇ shyamasundara. Show all posts

Wednesday, 1 September 2021

ಸುಖದಿಂದ ಬಾಳೆ ಬಾಲೆ ಸುಮಂಗಲೇ ankita shyamasundara

..

ಸುಖದಿಂದ ಬಾಳೆ ಬಾಲೆ | ಸುಮಂಗಲೇ | ಪ


ಸುಖದಿ ಬಾಳೆ ಸಾವಿತ್ರಿಯಂತೆ

ಸುತರ ಪಡೆದಿಳೆಯೊಳ್ ನಿರಂತರ

ಪತಿಯ ವಾಕ್ಯದಿ ನಿರತಳಾಗಿ ಅ.ಪ


ಅತಿಶಯದಿ ನಿರುತ ಪತಿಯ ಸೇವಿಸುತ್ತ

ಆತನೇ ಪರದೈವವೆಂದೆನುತ

ಹಿತವಚನ ವಾಡುತ ಅತ್ತಿಮಾವನ ಸ್ಮರಿಸುತ್ತ

ಅತಿಥಿಗಳು ಬಂದರೆ ಆದರಿಸುತ

ರತಿಪತಿ ಪಿತನಂಘ್ರಿ ಭಜಿಸುತ

ಪೃಥ್ವಿಯೋಳ್ ಅನುಸೂಯಳಂತೆ 1


ಸುಂದರಾಂಗಿಯೆ ಸತತ ಗೃಹ ಕಾರ್ಯ ಮಾಡುತ

ಇಂದಿರೇಶನ ಪಾಡುತ್ತ | ಬಂದಂಥ ವಿಪ್ರರ

ದ್ವಂದ್ವ ಪಾದಕೆರಗುತ | ಹಿಂಗಿರುವದುಚಿತ

ಮಂದ ಮತಿಗಳ ಮಾತು ಕೇಳದೆ

ತಂದೆ ತಾಯಿಗೆ ಕುಂದು ತಾರದೆ

ಇಂದು ಮುಖಿ ನೀ ಹಿಂಗಿದ್ದರನುದಿನ

ಬಂದು ಕಾಯ್ವ ಶ್ರೀರಾಮಚಂದಿರ 2


ಉಡುರಾಜವದನೆ ಸದಾ ನಿನ್ನೊಡೆಯ

ನಡಿದಾವರೆ ಪೂಜಿಸು ಸರ್ವದಾ ಬಿಡಿ

ನುಡಿಗಳಾಡದೆ ಕಡು ಕರುಣದಿ ದ್ರೌಪದಾ

ಪಡೆವಳತಿ ಮೋದ | ಪಡಿಸುಪುತ್ರರ ಪರ

ರೊಡನೆ ಕಾಲ್ಕೆದರಿ ಕಲಹವ ತೆಗೆಯದಿರು ಸಖಿ

ಒಡೆಯ ಶ್ರೀ ಶಾಮಸುಂದರನು

ತಡೆಯದೆ ಸಂಪದವ ನೀಯುವ 3

***