Showing posts with label ಏನ ಬೇಡಲಿ ನಿನ್ನ ಬಳಿಗೆ ನಾ ಬಂದು ಮಾನದಿಂ ಸಲಹಯ್ಯ ಗುರು ರಾಘವೇಂದ್ರ tandepurandara vittala. Show all posts
Showing posts with label ಏನ ಬೇಡಲಿ ನಿನ್ನ ಬಳಿಗೆ ನಾ ಬಂದು ಮಾನದಿಂ ಸಲಹಯ್ಯ ಗುರು ರಾಘವೇಂದ್ರ tandepurandara vittala. Show all posts

Monday, 6 September 2021

ಏನ ಬೇಡಲಿ ನಿನ್ನ ಬಳಿಗೆ ನಾ ಬಂದು ಮಾನದಿಂ ಸಲಹಯ್ಯ ಗುರು ರಾಘವೇಂದ್ರ ankita tandepurandara vittala

kruti by ತಂದೆಪುರಂದರವಿಠಲ 

ರಾಗ: ಕಾಂಬೋಜಿ ತಾಳ: ಝಂಪೆ


ಏನ ಬೇಡಲಿ ನಿನ್ನ ಬಳಿಗೆ ನಾ ಬಂದು

ಮಾನದಿಂ ಸಲಹಯ್ಯ ಗುರು ರಾಘವೇಂದ್ರ


ಮನ ಹೊಲೆಗಲಿಸಿತು ಮನವು ಮೈಲಿಗೆಯಾಯ್ತು

ನೆನೆಯಬಾರದದು ಎಲ್ಲ ಬಯಸುವುದು ಕೇಳೊ

ಅನುಭವಿಸಲಾರೆನೊ ಅದರ ಕಾಟಗಳನ್ನು

ಎನ್ನ ಉಬ್ಬಸವನು ಯಾರಲಿ ಪೇಳುವೆನೊ 1

ನೀರಲಿನೆನೆಯದು ಮನವೆಂಬಹೊಲೆಬಟ್ಟೆ

ಉರಿವಬೆಂಕಿಯಲಿ ಉರಿಯಲೊಲ್ಲದು

ಪರಿಪರಿಬಗೆಯಲಿ ಕರುಣಿಸುವುದು ಎನ್ನನು

ಪರಮಪುರುಷ ನಿನ್ನಮೊರೆಹೊಕ್ಕೆ ನಾನೀಗ 2

ಒಂದುಕ್ಷಣವಾದರು ಹರಿಯನೆನೆವೆನೆನಲು

ಒಂದಲ್ಲ ಎರಡಲ್ಲ ಹಲವು ತಾಪತ್ರಯವು

ತಂದೆಪುರಂದರವಿಠಲಗತಿಪ್ರೀತಿವಂತನೆ

ಒಂದುಪಾಯವಾದರೂ ಪೇಳಬಾರದೆ ಎನಗೆ 3

****