Monday, 6 September 2021

ಏನ ಬೇಡಲಿ ನಿನ್ನ ಬಳಿಗೆ ನಾ ಬಂದು ಮಾನದಿಂ ಸಲಹಯ್ಯ ಗುರು ರಾಘವೇಂದ್ರ ankita tandepurandara vittala

kruti by ತಂದೆಪುರಂದರವಿಠಲ 

ರಾಗ: ಕಾಂಬೋಜಿ ತಾಳ: ಝಂಪೆ


ಏನ ಬೇಡಲಿ ನಿನ್ನ ಬಳಿಗೆ ನಾ ಬಂದು

ಮಾನದಿಂ ಸಲಹಯ್ಯ ಗುರು ರಾಘವೇಂದ್ರ


ಮನ ಹೊಲೆಗಲಿಸಿತು ಮನವು ಮೈಲಿಗೆಯಾಯ್ತು

ನೆನೆಯಬಾರದದು ಎಲ್ಲ ಬಯಸುವುದು ಕೇಳೊ

ಅನುಭವಿಸಲಾರೆನೊ ಅದರ ಕಾಟಗಳನ್ನು

ಎನ್ನ ಉಬ್ಬಸವನು ಯಾರಲಿ ಪೇಳುವೆನೊ 1

ನೀರಲಿನೆನೆಯದು ಮನವೆಂಬಹೊಲೆಬಟ್ಟೆ

ಉರಿವಬೆಂಕಿಯಲಿ ಉರಿಯಲೊಲ್ಲದು

ಪರಿಪರಿಬಗೆಯಲಿ ಕರುಣಿಸುವುದು ಎನ್ನನು

ಪರಮಪುರುಷ ನಿನ್ನಮೊರೆಹೊಕ್ಕೆ ನಾನೀಗ 2

ಒಂದುಕ್ಷಣವಾದರು ಹರಿಯನೆನೆವೆನೆನಲು

ಒಂದಲ್ಲ ಎರಡಲ್ಲ ಹಲವು ತಾಪತ್ರಯವು

ತಂದೆಪುರಂದರವಿಠಲಗತಿಪ್ರೀತಿವಂತನೆ

ಒಂದುಪಾಯವಾದರೂ ಪೇಳಬಾರದೆ ಎನಗೆ 3

****


No comments:

Post a Comment