by hosakere chidambarayya
ನಿನ್ನನು ನಂಬಿದೆ ಶಾರದೆ ನೀನು ಪ್ರಸನ್ನಳಾಗಬಾರದೆ ಪ
ನಿನ್ನನು ಬಿಟ್ಟg ಎನ್ನಯ ದುಃಖಗಳನ್ನು ಕಳೆಯುವರಿನ್ನಾರಿರುವರು ಅ.ಪ
ಹೇಳಿಕೊಳ್ಳುವೆ ತಾಯೇ ದುಃಖವಕೇಳು ಮಹಾಮಾಯೆಹಾಳು 'ಷಯಗಳ ಜಾಲದಿ ಸಿಕ್ಕಿಹಗೋಳನು ನಾನೀಗ ತಾಳಲಾರೆನು ಹಾಯ್ 1
ಆಟದ ವಸ್ತುಗಳ ಕೊಟ್ಟು ಚೆಲ್ಲಾಟವಾಡುವೆಯಾಸಾಟಿ ಇಲ್ಲದೀಆಟವ ಸಾಕು ಸಾಕುಕಾಟವಕಳೆನೀಂ ಭೇಟಿಯ ಕೊಟ್ಟು 2
ಹರಿಹರಿಯೆನ್ನದೆ ಈ ನಾಲಿಗೆಯನರಗಳು ಸೊಕ್ಕಿಹವುನಿರುತವು ಹರಿನಾಮ ಭರವೆಡೆಬಿಡದಂತೆಹರಸಿ ಕಾಯೆ ಚಿಚ್ಛರೀರದ ತಾಯೆ3
****