Showing posts with label ನಮ್ಮ ತಪ್ಪೇನೊ ಪರಬೊಮ್ಮ ನಿನಗೆ prasannavenkata. Show all posts
Showing posts with label ನಮ್ಮ ತಪ್ಪೇನೊ ಪರಬೊಮ್ಮ ನಿನಗೆ prasannavenkata. Show all posts

Wednesday, 13 November 2019

ನಮ್ಮ ತಪ್ಪೇನೊ ಪರಬೊಮ್ಮ ನಿನಗೆ ankita prasannavenkata

by ಪ್ರಸನ್ನವೆಂಕಟದಾಸರು
ನಮ್ಮ ತಪ್ಪೇನೊ ಪರಬೊಮ್ಮ ನಿನಗೆ ಕೋಟಿಬೊಮ್ಮಾಂಡನಾಯಕಅಚಿಂತ್ಯ ಮಹಿಮನಿಗೆಪ.

ಒಂದು ನಾಮೋಚ್ಚರಣೆಯಲಿ ಪರಗತಿ ಪಡೆದರೊಂದುಗುಣಪಿಡಿದು ಕಡೆಗಾಣರ್ಯಾರುಮಂದಮತಿಯಲಿ ಭಜಿಸಿ ಮಹಾಪಾಪ ನೂಕುವರುಇಂದಿರಾರಾಧ್ಯಪದ ಭಕ್ತವತ್ಸಲನೆ 1

ನಾರಾಯಣನೆ ನಿನ್ನ ಮಗಳ ಮೈಗಾಳಿಯಲಿಮೂರುಲೋಕದ ಪುಣ್ಯ ಬೆಳೆವುದುಸೂರ್ಯನ ಮಗನವರು ನಿನ್ನ ಬಂಟರಿಗಂಜಿಜಾರುವರೆಲೆ ಶ್ರೀ ಜಾನಕಿರಮಣ ರಾಮ 2

ಶಿಶುಗಳಪರಾಧಕ್ಕೆ ನಯನದಂಜಿಕೆ ಶಿಕ್ಷೆಪಶುವಿರಕಳಿಗೆ ಕಂಠಕಾಷ್ಠವೆ ಶಿಕ್ಷೆವಿಷಮ ಹಿಂಸೆಯು ಸಲ್ಲ ಪ್ರಸನ್ನವೆಂಕಟರಮಣವಿಷಯಾಸೆ ಭವಶಿಕ್ಷೆ ಸಾಕೆನಗೆ ತಂದೆ 3
*******