Wednesday, 13 November 2019

ನಮ್ಮ ತಪ್ಪೇನೊ ಪರಬೊಮ್ಮ ನಿನಗೆ ankita prasannavenkata

by ಪ್ರಸನ್ನವೆಂಕಟದಾಸರು

ರಾಗ - : ತಾಳ -


ನಮ್ಮ ತಪ್ಪೇನೊ ಪರಬೊಮ್ಮ ನಿನಗೆ ಕೋಟಿ

ಬೊಮ್ಮಾಂಡ ನಾಯಕ ಅಚಿಂತ್ಯ ಮಹಿಮನಿಗೆ ll ಪ ll


ಒಂದು ನಾಮೋಚ್ಚರಣೆಯಲಿ ಪರಗತಿ ಪಡೆದ

ರೊಂದು ಗುಣ ಪಿಡಿದು ಕಡೆಗಾಣರ್ಯಾರು

ಮಂದಮತಿಯಲಿ ಭಜಿಸಿ ಮಹಾಪಾಪ ನೂಕುವರು

ಇಂದಿರಾರಾಧ್ಯಪದ ಭಕ್ತವತ್ಸಲನೆ ll 1 ll


ನಾರಾಯಣನೆ ನಿನ್ನ ಮಗಳ ಮೈಗಾಳಿಯಲಿ

ಮೂರುಲೋಕದ ಪುಣ್ಯ ಬೆಳೆವುದು

ಸೂರ್ಯನ ಮಗನವರು ನಿನ್ನ ಬಂಟರಿಗಂಜಿ

ಜಾರುವರೆಲೆ ಶ್ರೀ ಜಾನಕೀರಮಣ ರಾಮ ll 2 ll


ಶಿಶುಗಳಪರಾಧಕ್ಕೆ ನಯನದಂಜಿಕೆ ಶಿಕ್ಷೆ

ಪಶುವಿರಕಳಿಗೆ ಕಂಠಕಾಷ್ಠವೆ ಶಿಕ್ಷೆ

ವಿಷಮ ಹಿಂಸೆಯು ಸಲ್ಲ ಪ್ರಸನ್ನವೆಂಕಟರಮಣ

ವಿಷಯಾಸೆ ಭವಶಿಕ್ಷೆ ಸಾಕೆನಗೆ ತಂದೆ ll 3 ll
***

ನಮ್ಮ ತಪ್ಪೇನೊ ಪರಬೊಮ್ಮ ನಿನಗೆ ಕೋಟಿಬೊಮ್ಮಾಂಡನಾಯಕಅಚಿಂತ್ಯ ಮಹಿಮನಿಗೆಪ.

ಒಂದು ನಾಮೋಚ್ಚರಣೆಯಲಿ ಪರಗತಿ ಪಡೆದರೊಂದುಗುಣಪಿಡಿದು ಕಡೆಗಾಣರ್ಯಾರುಮಂದಮತಿಯಲಿ ಭಜಿಸಿ ಮಹಾಪಾಪ ನೂಕುವರುಇಂದಿರಾರಾಧ್ಯಪದ ಭಕ್ತವತ್ಸಲನೆ 1

ನಾರಾಯಣನೆ ನಿನ್ನ ಮಗಳ ಮೈಗಾಳಿಯಲಿಮೂರುಲೋಕದ ಪುಣ್ಯ ಬೆಳೆವುದುಸೂರ್ಯನ ಮಗನವರು ನಿನ್ನ ಬಂಟರಿಗಂಜಿಜಾರುವರೆಲೆ ಶ್ರೀ ಜಾನಕಿರಮಣ ರಾಮ 2

ಶಿಶುಗಳಪರಾಧಕ್ಕೆ ನಯನದಂಜಿಕೆ ಶಿಕ್ಷೆಪಶುವಿರಕಳಿಗೆ ಕಂಠಕಾಷ್ಠವೆ ಶಿಕ್ಷೆವಿಷಮ ಹಿಂಸೆಯು ಸಲ್ಲ ಪ್ರಸನ್ನವೆಂಕಟರಮಣವಿಷಯಾಸೆ ಭವಶಿಕ್ಷೆ ಸಾಕೆನಗೆ ತಂದೆ 3
*******

No comments:

Post a Comment