Showing posts with label ಳಳ- RSS- ಎಚ್ಚರವು ಎಚ್ಚರವು ವೀರಪುತ್ರರೆ others rss. Show all posts
Showing posts with label ಳಳ- RSS- ಎಚ್ಚರವು ಎಚ್ಚರವು ವೀರಪುತ್ರರೆ others rss. Show all posts

Friday, 24 December 2021

ಎಚ್ಚರವು ಎಚ್ಚರವು ವೀರಪುತ್ರರೆ others rss

   

RSS song .

ಎಚ್ಚರವು ಎಚ್ಚರವು ವೀರಪುತ್ರರೆ ಬೇಗ

ಜಾಡ್ಯ ದುಃಸ್ವಪ್ನಗಳ ಕಾಲವು ಕಳೆದಿದೆ

ಎಚ್ಚೆತ್ತು ಕಣ್ಣಾಲಿ ಬಿಚ್ಚುತ್ತ ನೋಡೀಗ

ಎಲ್ಲೆಲ್ಲು ಜಾಗೃತಿಯು ಜಗಜಗಿಸಿದೆ ||ಪ||


ಜಾಜ್ವಲ್ಯ ಮಾನವದೋ ನವಸೃಷ್ಟಿಯಾಗುತಿದೆ

ದುರ್ನಿಯಮ ದುರ್ದಿನದ ಸುಳವು ಸಲ್ಲ

ನವ್ಯ ಶಕ್ತಿಯು ರಕ್ತ ಕಣದಿ ಖಣಖಣಿಸುತಿದೆ

ಸ್ವಾತಂತ್ರ ಸೂರ್ಯನಾ ಬೆಳಕಿದೆಲ್ಲಾ

ಘೋರ ಘರ್ಜನೆಯಿರಲಿ ದಾನವಾರ್ಭಟವಿರಲಿ

ಮಾರಿ ಮೃತ್ಯುವೆ ಮುಂದು ಗುಡುಗುಡಿಸಿ ಬರಲಿ

ಮಂಗಲೋತ್ಸವದಂದು ಸಂಗೀತ ಸ್ವರವೆಂದು

ಅದನಾಲಿಸುತ ನುಗ್ಗು ನುಗ್ಗುವೆವು ಮುಂದು ||೧||


ಶಾಂತಿಯೈ ಸಮರದಲಿ ಕ್ರಾಂತಿ ಕಿಡಿಮಿಂಚಿರಲಿ

ಬಿಸಿರಕುತ ರೋಮರಂಧ್ರದಿ ಚಿಮ್ಮಲಿ

ಭವ್ಯ ಭಾರತಮಾತೆ ಎಚ್ಚತ್ತ ಮಕ್ಕಳಲಿ

ವರದ ಹಸ್ತವನಿರಿಸಿ ಹರಿಸಿನಿಂದಿರಲಿ

ನಿನ್ನ ಸೇವೆಯೊಳದುವೆ ತನುವು ತೃಣವಾಗಿರಲಿ

ಯಜ್ಞಕುಂಡದೊಳಾಹುತಿಗೆ ಸಲ್ಲಲಿ

ಧಗಧಗಿಸಲಿ ದೇಹ | ಸತ್ಯ ಸಂತೋಷದಲಿ

ಅರ್ಪಿಸುವೆವಿದೋ ಪುಣ್ಯಪಾದ ಪದ್ಮದಲಿ ||೨||

***

eccaravu eccaravu vIraputrare bEga

jADya duHsvapnagaLa kAlavu kaLedide

eccettu kaNNAli biccutta nODIga

ellellu jAgRutiyu jagajagiside ||pa||


jAjvalya mAnavadO navasRuShTiyAgutide

durniyama durdinada suLavu salla

navya Saktiyu rakta kaNadi KaNaKaNisutide

svAtaMtra sUryanA beLakidellA

GOra Garjaneyirali dAnavArBaTavirali

mAri mRutyuve muMdu guDuguDisi barali

maMgalOtsavadaMdu saMgIta svaraveMdu

adanAlisuta nuggu nugguvevu muMdu ||1||


SAMtiyai samaradali krAMti kiDimiMcirali

bisirakuta rOmaraMdhradi cimmali

Bavya BAratamAte eccatta makkaLali

varada hastavanirisi harisiniMdirali

ninna sEveyoLaduve tanuvu tRuNavAgirali

yaj~jakuMDadoLAhutige sallali

dhagadhagisali dEha | satya saMtOShadali

arpisuvevidO puNyapAda padmadali ||2||

***