Showing posts with label ಸಾಧು ಸಂತರಾಶ್ರಯ ಮಾಡಿ ಇದೇ ಮಾಡಿ ಹಿತ ನೋಡಿ gurumahipati. Show all posts
Showing posts with label ಸಾಧು ಸಂತರಾಶ್ರಯ ಮಾಡಿ ಇದೇ ಮಾಡಿ ಹಿತ ನೋಡಿ gurumahipati. Show all posts

Wednesday 1 September 2021

ಸಾಧು ಸಂತರಾಶ್ರಯ ಮಾಡಿ ಇದೇ ಮಾಡಿ ಹಿತ ನೋಡಿ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಸಾಧು ಸಂತರಾಶ್ರಯ ಮಾಡಿ | ಇದೇ ಮಾಡಿ ಹಿತ ನೋಡಿ ಪ 


ಅವರ ವಚನಕಾಗಿ ಅಗೋಚರನಾದಾ | ದೇವ ಬಹನು ಒಡಮೂಡಿ 1 

ಎಡಬಲದಲಿ ರಿದ್ದಿ ಶಿದ್ಧಿ ನಿಂದಿರಲು | ನೋಡಲು ನುಡಿಸರು ಕೂಡೀ 2 

ಮಹಿಪತಿ ನಂದನು ಸಾರಿದ ನಿಜವಾ | ಇಹಪರ ಸುಖವ ಸೂರ್ಯಾಡಿ 3

***