Showing posts with label ಗುರುಸತ್ಯಜ್ಞಾನರ ಚರಣ ದರುಶನದಿ hanumesha vittala satyajnana teertha stutih. Show all posts
Showing posts with label ಗುರುಸತ್ಯಜ್ಞಾನರ ಚರಣ ದರುಶನದಿ hanumesha vittala satyajnana teertha stutih. Show all posts

Tuesday, 1 June 2021

ಗುರು ಸತ್ಯಜ್ಞಾನರ ಚರಣ ದರುಶನದಿ ankita hanumesha vittala satyajnana teertha stutih

 satyajnana teertharu 1911 rajahmundry matha uttaradi mutt yati 37 magha shukla ekadashi ಸತ್ಯಜ್ಞಾನ ತೀರ್ಥರು

ಗುರು ಸತ್ಯಜ್ಞಾನರ ಚರಣ ದರುಶನದಿ

ನೂರಾರು ಜನ್ಮ ಪಾವನವಾಯಿತು ಮುದದಿ ಪ


ಗುರುಗಳುಪದೇಶದಿಂ ಪರಮ ಪಾವನನಾದೆ

ನರಹರಿಯ ಭಜಿಸುವ ಅಧಿಕಾರಿಯಾದೆ

ಗುರುಮಧ್ವರಾಯರಾ ಗ್ರಂಥಶ್ರವಣಾದಿಗಳ

ನಿರುತದಲಿ ಮಾಡುವುದಕರ್ಹನಾದೆ 1


ಗುರುಗಳುಪದೇಶವಿಲ್ಲದೆ ಮಾಡುವ ಮಂತ್ರ

ಗುರುಗಳುಪದೇಶವಿಲ್ಲದ ಜ್ಞಾನವು

ಗುರುಗಳುಪದೇಶವಿಲ್ಲದ ಕರ್ಮಕವನಗಳು

ಉರಗವಾಸದಂತೆ ಕಾಣಯ್ಯ 2


ಅಂಕಿತವಿಲ್ಲದಾ ಪದ್ಯಗಳು ಶೋಭಿಸವು

ಅಂಕಿತವು ಇಲ್ಲದಿರಬಾರದೆನುತಾ

ಪಂಕಜನಾಭ ಹನುಮೇಶ ವಿಠಲನೆಂಬೊ

ಅಂಕಿತವನಿತ್ತಾ ಗುರುವು ಮಾಡಿ ಮಮತಾ 3

***