..
kruti by rukmangadaru
ಭಜಿಸುವರು ಭಾಗ್ಯವಂತರು | ಭಾಗವತರು ಪ
ನಿಲುಕದೆಂದು ನಿಗಮಗಳು ನೆಲೆಗಾಣದೆ ನಿಲ್ಲಲು |ಮಲಕೀನ ಮಾತುಗಳಿಂದ ಜರಿದು ಕಲಕಾದ ಕರ್ಮನೀರೆರೆದು ನಳಿನಾಕ್ಷ ವಲ್ಲಭ ನೀನೆಂದರಿತು 1
ಅಳಿದುಳಿದೆಲ್ಲ ನೋಡುತಲಿ ತಳೆದು ಭವದ ಮೂಲವನುಕಳೆದು ಕಾಮಕ್ರೋಧಮದಗಳನು | ಬಳೆಸುತ ಮೈತ್ರಿ-ಕರುಣಾಗಳನು | ಬಳೆಸುತ ಏಳು ಧರಣಿಗಳನು 2
ಕಡಲೊಳೊರಗುವ ತೆರೆಯಂತೆ | ಒಡಲೊಳಗೆ ರುಕ್ಮ ಕಡಗದಂತೆ ನೆಮ್ಮದೆ ಚಣಿಸಿ | ಪಡದ ರೂಪವನುಜಡವೆಂದೆನಿಸಿ ಕಡಿಗಾಗದಿರೆಂದು ಜಗವನೆನಿಸಿ 3**kruti by rukmangadaru
ಮಂಗಳಂ ಜಯ ಮಂಗಳಂ ಜಯರುಕ್ಮ ಕಿರೀಟಿಗೆ ಮಂಗಳಂ ಪ
ಮುರಹರ ರಾಣಿಗೆ | ಸುಖಕರ ವಾಣಿಗೆ |ಮುಖರಿತ ವೇಣಿಗೆ ಮಂಗಳಂ 1
ಕಿಸಲಯ ಪಾಣಿಗೆ | ರಸಲಯ ಜಾಣೆಗೆ |ಬಿಸರುಹ ಬಾಣಿಗೆ ಮಂಗಳಂ 2
ಮಂದರ ಸದನಿಗೆ | ಕುಂದರ ರದನಿಗೆ |ಚಂದಿರ ವದನಿಗೆ ಮಂಗಳಂ 3
ಸುರದರಶ ಮುನಿಗೆ | ಹರಗಿರ ಮುನಿಗೆ |ಕರಿವರ ಗಮನಿಗೆ ಮಂಗಳಂ4
ಕೃತಮತಿವಶಳಿಗೆ | ಶ್ರುತಿನುತಿ ಯಶಳಿಗೆ |ದ್ಯುತಿ ತತಿ ದಿಶಗಳಿಗೆ ಮಂಗಳಂ 5
***