ಗುರುಪದ ಹಾರ
ಧರೆಯೋದ್ಧಾರಕೆ ಮೆರೆವರು ಗುರುಗಳು ವರಮಂತ್ರಾಲಯದಲ್ಲಿ
ವರಪ್ರಹ್ಲಾದರು ವ್ಯಾಸ ಪ್ರಭುಗಳು ವರ ತುಂಗಾ ತಟದಲ್ಲಿ |೧|
ಕೊರೆದಿಹ ಕಂಬದಿ ಹರಿಯನು ತೋರಿಸಿ ಹರಿನಾಮವ ಜಗದಲ್ಲಿ
ಮೆರೆಸಿದ ವರಪ್ರಹ್ಲಾದರು ಮೆರವರು ವರಮಂತ್ರಾಲಯದಲ್ಲಿ |೨|
ಹರಿಮತ ಸಾರುವ ಹರಿಪದ ಹಾರವ ಪರಿ ಪರಿ ವಿಧಪದದಲ್ಲಿ
ಇಳೆಯೊಳು ಸಾರಿದ ವ್ಯಾಸರು ಮೆರೆವರು ವರಮಂತ್ರಾಲಯದಲ್ಲಿ |೩|
ಧರೆಯನು ಮುಸುಕಿದ ತಮವನು ತೆರೆಯಲು ಹರುಷದಿ ಕಲಿಯುಗದಲ್ಲಿ|
ಗುರು ರಾಘವೇಂದ್ರರು ಕರು(ಣೆ) ಮೆರೆದಿಹರು ವರಮಂತ್ರಾಲಯದಲ್ಲಿ |೪|
ತನು ಮನ ಧನಗಳ ಕೊನೆಗಾಣದೆ ಭವ ವನ ಚರಿಸುವ ಜನರಲ್ಲಿ
ಮಣಿದೀಪಕ ಮತಿ ಎನಿಸಿ ಮೆರೆದರು ವರಮಂತ್ರಾಲಯದಲ್ಲಿ |೫|
ವಿಷಯದ ವಿಷದಿಂದು-ಸಿರಿಡುತಲಿ ಬಲು ದೆಸೆಗೆಡುತಿಹ ಮನದಲ್ಲಿ
ಹೊಸ ಜ್ಯೋತಿಯ ತರ ಮೆರೆಯಲು ಮೆರೆವರು ವರಮಂತ್ರಾಲಯದಲ್ಲಿ |೬|
ದಿನ ಸಂಸಾರವ ನೆನದರೆ ಘೋರದ ಘನರಥ-ವೆಡೆ-ತಡೆದಲ್ಲಿ
ಮುನಿ ಮಹರಥಿಯಾಕ್ಷಣ ಬಂದೊಲಿವರು ವರಮಂತ್ರಾಲಯದಲ್ಲಿ |೭|
ಭುವಿಯೊಳು ಬಹುಪರಿ ಬಳಲುವ ಮನುಜರ ಬವಣೆಯ ಬಲುತಿಳಿದಿಲ್ಲಿ
ತವಕದಿ ಬಿಡಿಸಲು ಅವತರಿಸಿರುವರು ವರಮಂತ್ರಾಲಯದಲ್ಲಿ |೮|
ಕರೆದರೆ ಬರುವರು ಅರಘಳಿಗಿ-ರದಲೆ ಕರಕಶ ಹೃದಯಿಗಳಲ್ಲ|
ಧರೆಯೊಳು ಗುರುಗಳ ಮೊರೆಯಿಡಲಾರದ ನರರೇ ಪಾಪಿಗಳೆಲ್ಲಾ |೯|
ಸುರತರು ಫಲಿಸಿದೆ ವರತರು ದೊರೆತಿರೆ ವರಮಂತ್ರಾಲಯದಲ್ಲಿ
ತೆರೆವುದು ಮುಸುಕನು ಸ್ಥಿರವಲ್ಲವು-ತನು ಪರಸುಖ ಸಾಧನದಲ್ಲಿ |೧೦|
ಗುರುತರ ತಪಸು ಸಮಾಧಿಗಳಿಲ್ಲದೆ ದೊರೆವುದು ಸದ್ಗತಿ ಇಲ್ಲಿ
ಅರಿಯದೆ ವೇದ ಪುರಾಣ-ಶಾಸ್ತ್ರವ ದೊರೆವುದು ಸದ್ಗತಿ ಇಲ್ಲಿ |೧೧|
ಮಾಧವ ಮತದಾಂಭೋಧಿಗೆ ಚಂದ್ರರ ದೀಧಿತಿ ತೊಳಗುವುದಿಲ್ಲಿ
ವಾದಿಗಳೆಲ್ಲರ ಮೋದದಿ ಜೈಸಿದ ನಾದವು ಮೊಳಗುವದಿಲ್ಲಿ |೧೨|
ವೇದಾಂತದ ಪೂ-ದೋಟದ ಪರಿಮಳ ಸಾಧಿಸಿ ದೊರೆತಿಹುದಿಲ್ಲಿ
ವೇದವಿಶಾರದೆ ಸ್ವಾದಿಸಿ ಸುಧೆಯ ವಿನೋದದಿ ರಮಿಸುವಳಿಲ್ಲಿ |೧೩|
ಪಾವನತರ ಮಹಯಾತ್ರಾರ್ಥಿಗಳು-ಓವಿಸಿ ನೆಲೆಸಿಹರಿಲ್ಲಿ
ಭೂ ವಲಯಕೆ ಸಲೆ ಆ ವೈಕುಂಠವು ಧಾವಿಸಿ ಬಂದಿಹುದಿಲ್ಲಿ |೧೪|
ಧನುವಂತರಿಗಳು ತನುದೋರಿರುವರು ಅನುದಿನ ಮನವೊಲಿದಿಲ್ಲಿ
ಘನರೋಗಗಳಿಗೆ ಧನುವೇರಿಸಿ ಆ ಕ್ಷಣದೊಳು ಕಳೆದೊಗೆಯುವರಿಲ್ಲಿ |೧೫|
ಕುಷ್ಟಾದಿಗಳೆಂಬಷ್ಟಾ-ದಶೆಗಳು ಶ್ರೇಷ್ಟಾಲಯದೊಳಗಿಲ್ಲಿ
ನಷ್ಟಾಗುತ ಸಕಲೇಷ್ಟವು ದೊರೆವುದು ಸೃಷ್ಠೀಶನ ಕೃಪೆಯಲ್ಲಿ |೧೬|
ಪ್ರೇತ ಪಿಶಾಚಿ ಗ್ರಹಾದಿಗಳೆಲ್ಲವು ಸೋತಿವೆ ಬಲ ಮುರಿದಿಲ್ಲಿ
ತಾತರ ಮೊರೆಯೊಳು ಯಾತರ ಭಯವಿದೆ ಜ್ಯೋತಿರ್ ಪದಯುಗದಲ್ಲಿ |೧೭|
ಅಂಧರು ಗುರುಗಳ ಸುಂದರ ಮೂರ್ತಿಯ ಕಣ್ ತೆರದು ನೋಡುವರಿಲ್ಲಿ
ವಂಧ್ಯರು ಮಗುವಿನ ನಂದನದೊಳು ಆನಂದದಿ ಪಾಡುವರಿಲ್ಲಿ |೧೮|
ಜನುಮದ ಮೂಕರು ಚಿನುಮಯ ಮೂರ್ತಿಯ ವಿನುತದಿ ಕೀರ್ತಿಪರಿಲ್ಲಿ
ಘನಮಹ ಬಧಿರರು ಮನದಣಿ ಕೇಳುತ ಮುನಿಗಳ ಪ್ರಾರ್ಥಿಪರಿಲ್ಲಿ |೧೯|
ಯಂತರ ತಂತರನಂತ ಸ್ವತಂತ್ರರ ತಂತ್ರವು ರಾಜಿಪುದಿಲ್ಲಿ
ಅಂತರ ಹೊಳಹು ಗುರುಮಂತರ ಗಾನ ನಿರಂತರ ಸುಖವಿಹುದಿಲ್ಲಿ |೨೦|
ವ್ಯಂಗಕೆ ಸ್ವಂಗವು ಭಂಗಕೆ ಸಿಂಗಾರ ಕಂಗೆಡೆ ಮಂಗಳವಿಲ್ಲಿ
ಕಂಗೊಳಿಪುದು ಸುತರಂಗಿಣಿ ತೀರದ ಪುಂಗವರಾಲಯದಲ್ಲಿ |೨೧|
ಭವ ಸಾಗರವನು ದಾಟಿಸೆ ಬಲು ಅನುಭವಿಕರು ನಾವಿಕರಿಲ್ಲಿ
ತವಕದಿ ನಿಂದರೆ ಸವೆಯುವದೇತಕೆ ಭುವಿಯೊಳು ಬಹುಪರಿಯಲ್ಲಿ |೨೨|
ಸಂತತಿ ಸಂಪದ ಆಯುರಾರೋಗ್ಯವು ನಂದದಿ ದೊರೆಯುವುದಿಲ್ಲಿ
ಚಿಂತಿಪುದೇತಕೆ ಭ್ರಾಂತಿಯೊಳೆಲ್ಲರು ಪಂಥದಿ ಗುರು ನಿಂತಲ್ಲಿ |೨೩|
ರಾಜರ ರಾಜರ ಗುರುಮಹರಾಜರ ತೇಜವ ಬಣ್ಣಿಪುದೆಂತು
ರಾಜಿಪ ಶ್ರೀಹರಿ ಪಾದ ಸರೋಜವ ಪೂಜಿಪ ಸಂಪದರಿಂತು |೨೪|
ಅನಘರು ಇವರಾ ಘನತೆಯ ನೆಲೆಯನು ಮನುಜರಿ-ಗರಿಯುವದೆಂತು
ಘನ ವ್ಯಾಪಕ ಜಗ ಜನಕ ಜನಾರ್ಧನ ಅಣಿಯಾಗಿರೆ ಬಲುನಿಂತು |೨೫|
ತುಂಗಾ ತೀರ ವಿರಾಜರ ಕೀರ್ತಿಯು ಬಂಗಾರದ ಹೊಳೆಯಲ್ಲಿ
ಶೃಂಗಾರದಿ ಹರಿ ಪೊಂಗೊಳಲುದೂತ ಕಂಗೋಚರಿಸುವನಿಲ್ಲಿ |೨೬|
ಅನಿಮಿಷರೆಲ್ಲರು ಮುನಿಕುಲರೊಂದಿಗೆ ಕುಣಿಯುವರನು-ನಯದಿಂದಾ
ವನಗೋಪಾಲನ ಘನತೆಯ ಕೀರ್ತಿಸಿ ವಿನುತದಿ ಸಂಭ್ರಮದಿಂದಾ |೨೭|
ಭೂಸುರರೆಲ್ಲರು ಶ್ರೀಶನ ಗುಣಗಳ ಸಾಸಿರ ನಾಮಗಳಿಂದಾ|
ಕೇಶವನೊಲಿದನ ತೋಷದಿ ತುತಿಪರು ಸೂಸುವ ಭಾಷ್ಪಗಳಿಂದಾ |೨೮|
ಬೃಂದಾವನ ಗೋವಿಂದನು ಗುರುಗಳ ವೃಂದಾವನ-ದೊಳಗಿಂದು|
ಮುಂದೋರದ ಭವ ಬಂಧದಿ ಸಿಲುಕಿದ ಬೃಂದವ ಪೊರೆಯುವರಿಂದು |೨೯|
ಸುಂದರ ಗುಡಿ ಶೃಂಗಾರದಿ ಶೋಭಿಪ ಚಂದದಿ ಮಂಟಪದಲ್ಲಿ
ವಂದಿತ ಗುರು ಬೃಂದಾರಕ-ರೆಸೆವರು ಕುಂದದ ಕಾಂತಿಯೊಳಿಲ್ಲಿ |೩೦|
ಮುತ್ತಿನ ಹಾರವು ಕಸ್ತೂರಿ ತಿಲಕವು ರತ್ನದ ಪದಕಗಳಿಂದ
ಚಿತ್ತದ ಭ್ರಾಂತಿಯನುತ್ತರಿಪರು ಪುರುಷೋತ್ತಮ ಗಾಯನದಿಂದ |೩೧|
ದ್ವಾದಶನಾಮವು ಮೋದದಿ ಗುರುಗಳ ಸಾದೃಶ ಸದ್ಗುರುವೆಂದು
ಭೂದಿವಿಜರಿ-ಗನುವಾದಿಸಿ ತೋರ್ಪುದು ಶ್ರೀಧರ ಸಂಪದರೆಂದು |೩೨|
ದಂಡ ಕಮಂಡಲ ಕೊಂಡಿಹ ವಸನದಿ ಮಂಡಿತ ಗುರುವರರಿಂದು
ಪಂಢರಿನಾಥನ ಖಂಡಿತ ಪ್ರೀಯರು ದಂಡ ಪ್ರಮಾಣಗಳಿಂದಾ |೩೩|
ಎಳೆತುಳಸಿಯ ವನಮಾಲೆಯು ಕೊರಳೊಳು ವಿಲಸಿತ ಕುಸುಮಗಳಿಂದಾ
ಕೊಳಲುದೂವ ಹರಿ ಕಳೆಯನು ತೋರ್ಪುದು ಮೊಳಗುವ ವಾದ್ಯಗಳಿಂದಾ |೩೪|
ರಥವೇರಿದ ಗುರು ಪಥದೊಳು ಸಾಗಿರೆ ಪೃಥುವಿಯು-ಧಿಮಿಧಿಕೆಂದು
ರಥಿಕರ ಡಂಗುರ ನಾದನಿನಾದದಿ ಪ್ರತಿ ಧ್ವನಿ ಕೊಡುತಿಹರಿಂದು |೩೫|
ಭುವಿಯೊಳು ಮೊಳಗುವ ಜಯಭೇರಿಗೆ ಆ ದಿವಿಜರು ಸಂಭ್ರಮದಿಂದಾ
ಜವದೊಳು ಪೂಮಳೆಗೆರೆವರು ಘೋಷಿಸಿ ದಿನ ದುಂಧುಭಿ-ಧ್ವನಿಯಿಂದಾ |೩೬|
ವರಮಂತ್ರಾಲಯ ಗುರು ಸಾಮ್ರಾಟರು ಮೆರೆವರು ವೈಭವದಿಂದಾ
ಗುರು ಮಧ್ವೇಶನ ಹಿರಿಯ ಪತಾಕೆಯು ತೆರೆದುದು ಬಹುಸಿರಿಯಿಂದಾ |೩೭|
ಹರಿಯನು ತೋರಿದ ಗುರುಸಂದರ್ಶನ ಗುರುತರ ಪುಣ್ಯವದಿಂದು
ಗುರು ಸಂಕೀರ್ತನೆ ಸಿರಿ-ಸಂಪದದೊಳು ನಿರುತದಿ ಪಾಲಿಪುದೆಂದು |೩೮|
ಗುರು ಪಾದೋದಕ ಪೊರೆವುದು ಭಕ್ತರ ಧುರಿತೌ-ಘವ-ಕಳೆದಿಂದು
ಗುರುಸೇವೆಯು ವರಪದವಿಯ ನೆರವುದು ಅರಿವುದು ಸತ್ಯವಿದೆಂದು |೩೯|
ಗುರುಮಹರಾಜರೆ ವರ ಮುನಿತೇಜರೆ ಎರಗುವೆ ನಿಮ್ಮಡಿಗಿಂದು
ಸೆರೆ-ಸಂಸಾರದೊಳು-ರುತರಗಾದೆನು ಪೊರೆವುದು ಕರುಣದೊಲಿಂದು |೪೦|
ಘನಭವರೋಗದಿ ಅನುಭವರೋಗದಿ ತನುಮನ ತಾಪದಿ ನೊಂದು
ದಿನದಿನ ಕೊರಗಿದೆ ಮನದೊಳು ಮರುಗಿದೆ ಕನಿಕರ ತೋರುವುದಿಂದು |೪೧|
ಹಸಿ-ತೃಷೆ ವಿಷಯದಿ ವ್ಯಸನದಿ ಬಹು ಪರ ವಶನಾದೆನು ಸೆರೆಗೊಂಡು
ಬಿಸಜಾಕ್ಷನ ಪದ ತುಸು-ಸಹ ನೆನಯದೆ ಪಶು ಜೀವನ ಕೈಗೊಂಡು |೪೨|
ಶಿಶುವೆಂದರಿಯುತ ಶಶಿ ಹಾಸದಿ ನರ ಪಶು ಮಹಪಾಪಿಯನಿಂದು
ಅಸದಳ ಭಕುತಿಯೊಳೆಸೆಯುವ ಮತಿಮನನಿಸಿ ಸಲೆ ಪೊರೆಯುವದಿಂದು |೪೩|
ಮೀಸಲು ಮುಡಿಪಿದು ಸೂಸಿತು ಹೃದಯದಿ ಭಾವಿಸಿ ಗುರುಪದಕೆಂದು
ಪೂಸಿದ ಪರಿಮಳ ವಾಸಿಸೆ ಬಲು-ಸುವಿಕಾಸಿತ ಹಾರವಿದೆಂದು |೪೪|
ಗುರುಪದ ಸೇವಿಸಿ ಹರುಷದಿ ಭಾವಿಸಿ ಗುರುಪದ ಹಾರವನಿಂದು
ಇರಿಸಿದೆ ಪದದೊಳು ಹರಿ ವಿಠ್ಠಲೇಶನೆ ನಿರುತದಿ ಪಾಲಿಪುದೆಂದು |೪೫|
***
ಧರೆಯೋದ್ಧಾರಕೆ ಮೆರವರು ಗುರುಗಳು ವರಮಂತ್ರಾಲಯದಲ್ಲಿ |
ವರಪ್ರಹ್ಲಾದರು ವ್ಯಾಸ ಪ್ರಭುಗಳು ವರ ತುಂಗಾ ತಟದಲ್ಲಿ || | ||
ಕೊರದಿಹ ಕಂಬದಿ ಹರಿಯನು ತೋರಿಸಿ ಹರಿನಾಮವ ಜಗದಲ್ಲಿ |
ಮೆರೆಸಿದ ಪ್ರಹ್ಲಾದರು ಮೆರವರು ವರಮಂತ್ರಾಲಯದಲ್ಲಿ || 2 ||
ಹರಿಮತ ಸಾರವ ಹರಿಪದ ಹಾರವ ಪರಿ ಪರಿ ವಿಧಪದ ದಲ್ಲಿ |
ಇಳೆಯೊಳು ಸಾರಿದ ವ್ಯಾಸರು ಮೆರೆವರು ವರಮಂತ್ರಾಲಯದಲ್ಲಿ || 3 ||
ಧರೆಯನು ಮುಸುಕಿದ ತಮವನು ತೆರಯಲು ಹರುಷದಿ ಕಲಿಯುಗದಲ್ಲಿ |
ಗುರು ರಾಘವೇಂದ್ರರು ಕರು ಮೆರೆದಿಹರು ವರಮಂತ್ರಾಲಯದಲ್ಲಿ || 4 ||
ತನುಮನಧನಗಳ ಕೊನೆಗಾಣದೆ ಭವ ವನಚರಿಸುವ ಜನರಲ್ಲಿ |
ಮಣೀದೀಪಕ ಮತಿ ಮನನಿಸಿ ಮೆರೆದರು ವರಮಂತ್ರಾಲಯದಲ್ಲಿ || 5 ||
ವಿಷಯದ ವಿಷದಿಂದುಸಿರಿಡುತಲಿ ಬಲುದೆಷೆಕೆಡುತಿಹ ಮನದಲ್ಲಿ |
ಹೊಸ ಜ್ಯೋತಿಯ ಕರಮೆರೆಯಲು ಮೆರವರು ವರಮಂತ್ರಾಲಯದಲ್ಲಿ || 6 ||
ದಿನ ಸಂಸಾರದ ನೆನದರೆ ಗೋರದ ಘನರಥ ಎಡತಡೆದಲ್ಲಿ |
ಮುನಿ ಮಹಾರಥಿ ಆಕ್ಷಣ ಬಂದೊಲಿವರು ವರಮಂತ್ರಾಲಯದಲ್ಲಿ || 7 ||
ಭುವಿಯೊಳು ಬಹುಪರಿ ಬಳಲುವ ಮನುಜನ ಭವಣೆಯ ಬಲುತಿಳಿದಿಲ್ಲಿ |
ತವಕದಿ ಬಿಡಿಸಲು ಅವತರಿಸಿರುವರು ವರಮಂತ್ರಾಲಯದಲ್ಲಿ || 8 ||
ಕರೆದರೆ ಬರುವರು ಅರಗಳಿಗಿರದಲೆ ಕರೆಸಿದದಯಿಗಳೆಲ್ಲಾ |
ಧರೆಯೊಳು ಗುರುಗಳ ಮೊರೆಯಿಡಲಾರದ ನರರೆ ಪಾಪಿಗಳೆಲ್ಲ || 9 ||
.
ಸುರತರು ಫಲಿಸಿದೆ ವರಕರು ದೊರೆತಿದೆ ವರಮಂತ್ರಾಲಯದಲ್ಲಿ |
ತೆರೆವುದು ಮುಸುಕನು ಸ್ತಿರವಲ್ಲವು ತನ ಪರಸುಖ ಸಾಧನದಲ್ಲಿ || 10 ||
ಉರುತರ ತಪಸ್ಸು ಸಮಾಧಿಗಳಿಲ್ಲದೆ ದೊರೆವುದು ಸದ್ಗತಿಯಿಲ್ಲಿ |
ಅರಿಯದೆ ವೇದ ಪುರಾಣ ಶಾಸ್ತ್ರವ ದೊರೆವುದು ಸನ್ಮತಿಯಿಲ್ಲಿ || 11 ||
ಮಾಧವ ಮತದಾಂಭೋನಿಧಿಚಂದ್ರರ ದಿಧೀತಿ ತೊಳಗುವುದಿಲ್ಲಿ |
ವಾದಿಗಳೆಲ್ಲರ ಮೊದದಿ ಜಯಿಸಿದ ನಾದವು ಮೊಳಗುವದಿಲ್ಲಿ || 12 ||
ವೇದಾಂತದ ಪೂದೋಟದ ಪರಿಮಳ ಸಾಧಿಸಿ ದೊರೆತಿಹುದಿಲ್ಲಿ |
ವೇದವಿಶಾರದೆ ಸ್ವಾದಿಸಿ ಸುಧೆಯ ವಿನೋದದಿ ರಮಿಸುವಳಿಲ್ಲಿ || 13 ||
ಪಾವನತರ ಮಹಯಾತ್ರಾ ತೀರ್ಥಿಗಳೋವಿಸಿ ನೆಲೆಸಿಹರಿಲ್ಲಿ |
ಭೂವಲಯಕೆ ಸಲೆ ಆ ವೈಕುಂಠವು ಧಾವಿಸಿ ಬಂದಿಹುದಿಲ್ಲಿ || 14 ||
ಧನ್ವಂತರಿಗಳು ತನುದೋರಿರುವರು ಅನುದಿನ ಮನ ಒಲಿದಿಲ್ಲಿ |
ಘನರೋಗಗಳಿಗೆ ಧನುವೇರಿಸಿ ಆ ಕ್ಷಣದೊಳು ಕಳೆದೋಯುವವಿಲ್ಲಿ || 15 ||
ಕುಷ್ಠಾದಿಗಳೆಂಭಷ್ಟಾದೆಶೆಗಳ ಶ್ರೇಷ್ಟಾಲಯದೊಳಗಿಲ್ಲಿ |
ನಷ್ಟಾಗುತ ಸಕಲೇಷ್ಟವು ದೊರೆವುದು ಸೃಷ್ಟೀಷನ ಕೃಪೆಯಲ್ಲಿ || 16 ||
ಪ್ರೇತ ಪಿಶಾಚಗ್ರಹಾದಿಗಳೆಲ್ಲವು ಸೋತಿವೆ ಬಲಮುರಿದಿಲ್ಲಿ |
ಆತರ ಮೊರೆಯೊಳು ಯಾತರ ಭಯವಿದೆ ಜ್ಯೋತಿರೆ ಪದಯುಗದಲ್ಲಿ || 17 || ||
ಅಂಧರು ಗುರುಗಳ ಸುಂದರ ಮೂರ್ತಿಯ ಕಣ್ತೆರೆದು ನೋಡುವರಿಲ್ಲಿ |
ವಂದ್ಯರು ಮಗುವಿನ ನಂದನದೊಳು ಆನಂದದಿ ಪಾಡುವರಿಲ್ಲಿ || 18 ||
ಜನುಮದ ಮೂಕರು ಚಿನ್ಮಯ ಮೂರ್ತಿಯ ವಿನುತದಿ ಕೀರ್ತಿಪರಿಲ್ಲಿ |
ಘನಮಹಬದಿರರು ಮನದಣಿ ಕೇಳುತ ಮುನಿಗಳ ಪ್ರಾರ್ಥಿಪರಿಲ್ಲಿ || 19 ||
ಯಂತರ ಗುರುಗಳ ತಂತರನಂತಸ್ವತಂತ್ರವು ರಾಜಿಪುದಿಲ್ಲಿ |
ಅಂತರ ಹೊಳೆ ಗುರುವಂತರ ಗಾನ ನಿರಂತರ ಸುಖವಿಹುದಿಲ್ಲಿ || 20 ||
ವ್ಯಂಗಕೆ ಸಂಗವು ಭಂಗಕೆ ಸಿಂಗರ ಕಂಗೆಡೆ ಮಂಗಳವಿಲ್ಲಿ |
ಕಂಗೊಳಿಪುದು ಸುತರಂಗಿಣಿ ತೀರದ ಪುಂಗವರಾಲಯದಲ್ಲಿ || 21 ||
ಧರೆಯೋದ್ಧಾರಕೆ ಭವ ಸಾಗರವನು ದಾಟಿಸೆ ಬಲು ಅನುಭವಿಕರು ನಾವಿಕರಿಲ್ಲಿ |
ತವಕದಿ ನಿಂದಿರೆ ಸವಿಯುವದೇತಕೆ ಭುವಿಯೊಳು ಬಹುಪರಿಯಿಲ್ಲಿ || 22 ||
ಸಂತತಿ ಸಂಪದ ಆಯುರರೋಗ್ಯವು ನಂದದಿ ದೊರೆಯುವುದಿಲ್ಲಿ |
ಚಿಂತಿಪುದೇತಕೆ ಭ್ರಾಂತಿಯೊಳೆಲ್ಲರು ಪಂತದಿ ಗುರುನಿಂತಲ್ಲಿ || 23 ||
ರಾಜರ ರಾಜರ ಗುರುಮಹರಾಜರ ದೇಹವ ಬಣ್ಣಿಪುದೆಂತು |
ರಾಜಿಪ ಶ್ರೀಹರಿ ಪಾದ ಸರೋಜವ ಪೂಜಿಪ ಸಂಪದರಿಂತು || 24 ||
ಅನಗರು ಇವರಾ ಘನತೆಯ ನೆಲೆಯದು ಮನುಜರಿಗರಿಯುವದೆಂತು |
ಘನವ್ಯಾಪಕ ಜಪ ಜನಕ ಜನಾರ್ದನ ಅಣಿಯಾಗಿರೆ ಬಲುನಿಂತು || 25 || ||
ತುಂಗಾ ತೀರ ವಿರಾಜರ ಕೀರ್ತಿಯು ಬಂಗಾರದ ಹೊಳೆಯಲ್ಲಿ |
ಶೃಂಗಾರದಿ ಹರಿ ಪೊಂಗೊಳಲೂದುತ ಕಂಗೋಚರಿಸುವನಿಲ್ಲಿ || 26 ||
ಅನಿಮಿಷರೆಲ್ಲರು ಮುನಿಕುಲರೊಂದಿಗೆ ಕುಣಿಯುವರನುನಯದಿಂದಾ |
ವನಗೋಪಾಲನ ಘನತೆಯ ಕೀರ್ತಿಸಿ ವಿನುತದಿ ಸಂಭ್ರಮದಿಂದಾ || 27 ||
ಭೂಸುರರೆಲ್ಲರು ಶ್ರೀಷನ ಗುಣಗಳ ಸಾಸಿರ ನಾಮಗಳಿಂದಾ |
ಕೇಶವನೊಲಿದನ ತೋಷದಿ ತುತಿಪರು ಸೂಸುವ ಭಾಷ್ಪಗಳಿಂದಾ || 28 ||
ಬೃಂದಾವನ ಗೋವಿಂದನು ಗುರುಗಳ ವೃಂದಾವನದೊಳಗಿಂದು |
ಮುಂದೋರದ ಭವ ಬಂದದಿ ಸಿಲುಕಿದ ವೃಂದವ ಪೊರೆಯುವನಿಂದು || 29 ||
ಸುಂದರ ಗುಡಿ ಶೃಂಗಾರದಿ ಶೋಭಿಪ ಚಂದದಿ ಮಂಟಪದಲ್ಲಿ |
ವಂದಿತ ಗುರು ವೃಂದಾರಕರೆಸವರು ಕುಂದದ ಕಾಂತಿಯೊಳಿಲ್ಲಿ || 30 ||
ಮುತ್ತಿನ ಹಾರವು ಕಸ್ತೂರಿ ತಿಲಕವು ರತ್ನದಪದಕಗಳಿಂದಾ |
ಚಿತ್ತದ ಭ್ರಾಂತಿಯನುತ್ತರಿಪವು ಪುರುಷೋತ್ತಮ ಗಾಯನದಿಂದಾ || 31 ||
ದ್ವಾದಶನಾಮವು ಮೋದದಿ ಗುರುಗಳ ಸಾದೃಷ ಸದ್ಗುರುವೆಂದು |
ಭೂದಿವಿಜರಗನುವಾಧಿಸಿ ತೋರ್ಪುದು ಶ್ರೀಧರ ಸಂಪದರೆಂದು || 32 ||
ದಂಡ ಕಮಂಡಲ ಕೊಂಡಿಹ ವಸನದಿ ಮಂಡಿತ ಗುರುವರರಿಂದು |
ಪಂಡರಿನಾಥನ ಕಂಡಿತ ಪ್ರೀಯರು ದಂಡ ಪ್ರಣಾಮಗಳಿಂದು || 33 ||
ಎಳೆತುಳಸಿಯ ವನಮಾಲೆಯ ಕೊರಳೊಲು ವಿಲಸಿತ ಕುಸುಮಗಳಿಂದಾ |
ಕೊಳಲುದೂವ ಹರಿ ಕಳೆಯನು ತೋರ್ಪುದು ಮೊಳಗುವ ವಾದ್ಯಗಳಿಂದಾ || 34 ||
ರಥವೇರಿದ ಗುರು ಪತದೊಳು ಸಾಗಿರೆ ಪೃಥಿವಿಯು ಧಿಮಿಧಿಮಿಕೆಂದು |
ರಥಿಕರ ಡಂಗುರ ನಾದನಿನಾದದಿ ಪ್ರತಿಧ್ವನಿ ಕೊಡುತಿಹರಿಂದು || 35 ||
ಭುವಿಯೊಳು ಮೊಳಗುವ ಜಯಬೇರಿಗೆ ಆ ದಿವಿಜರು ಸಂಭ್ರಮದಿಂದಾ |
ಜವದೊಳು ಪೂಮಳೆ ಗರೆವರು ಪೋಷಿಸಿ ದಿನ ದುಂಧುಭಿಧ್ವನಿಯಿಂದಾ || 36 ||
ವರಮಂತ್ರಾಲಯ ಗುರು ಸಮ್ರಾಟರು ಮೆರೆವರು ವೈಭವದಿಂದಾ |
ಗುರು ಮಧ್ವೇಶನ ಹಿರಿಯ ಪತಾಕೆಯ ತೆರದುದು ಬಹು ಸಿರಿಯಿಂದಾ || 37 ||
ಹರಿಯನು ತೋರಿಸಿ ಗುರುಸಂದರ್ಶನ ಉರುತರ ಪುಣ್ಯವದಿಂದು |
ಗುರು ಸಂಕೀರ್ತನೆ ಸಿರಿಸಂಪದದೊಳು ನಿರುತದಿ ಪಾಲಿಪುದೆಂದು || 38 ||
ಗುರು ಪಾದೋದಕ ಪೊರೆವುದು ಭಕ್ತರ ಧುರಿತೊವ್ಗವಕಳೆದಿಂದು |
ಗುರುಸೇವೆಯು ವರಪದವಿಯ ಮೆರೆವುದು ಅರಿವುದು ಸತ್ಯವಿದೆಂದು || 39 ||
ಗುರುಮಹರಾಜರೆ ವರ ಮುನಿತೇಜರೆ ಎರಗುವೆ ನಿಮ್ಮಡಿಗಿಂದು |
ಘನಸಂಸಾರದೊಳಿರೆ ತರಗಾದೆನು ಪೊರೆವುದು ಕರುಣದೊಳಿಂದು || 40 ||
ಘನಭವರೋಗದಿ ಅನುಭವಭೋಗದಿ ತನುಮನ ತಾಪದಿ ನೊಂದು |
ದಿನದಿನ ಕೊರಗಿದೆ ಮನದೊಳು ಮರುಗಿದೆ ಕನಿಕರ ತೋರುವುದಿಂದು || 41 ||
ಹಸು ತೃಷೆ ವಿಷಯದಿ ವ್ಯಸನದಿ ಬಹುಪರ ವಶನಾದೆನು ಸೆರೆಗೊಂಡು |
ಬಿಸಜಾಕ್ಷನ ಪದ ತುಸುಸಹ ನೆನಯದೆ ಪಶು ಜೀವನ ಕೈ ಕೊಂಡು || 42 ||
ಶಿಶುವೆಂದರಿಯುತ ಶಶಿ ಹಾಸದಿ ನರ ಪಶು ಮಹಪಾಪಿಯನಿಂದು |
ಅಸದಳ ಭಕುತಿಯೊಳೆಸೆಯುವ ಮತಿಮನನಿಸಿ ಸೆಲೆ ಪೊರುಯುವದಿಂದು || 43 ||
ಮೀಸಲು ಮುಡುಪಿದು ಸೂಸಿತು ಹೃದಯದಿ ಭಾವಿಸಿ ಗುರುಪದಕೆಂದು |
ಪೂಸಿದ ಪರಿಮಳ ವಾಸಿಸೆ ಬಲು ಸುವಿಕಾಸಿತ ಹಾರವಿದೆಂದು || 44 ||
ಗುರುಪದ ಸೇವಿಸಿ ಹರುಷದಿ ಭಾವಿಸಿ ಗುರುಪದ ಹಾರವನಿಂದು |
ಇರಿಸಿದೆ ಪದದೊಳ್ ಹರಿ ವಿಠ್ಠಲೇಶನೆ ನಿರುತದಿ ಪಾಲಿಪುದೆಂದು || 45 ||
***
dhareyOddhArake meravaru gurugaLu vara mantralayadalli |
varaprahlAdaru vyAsa praBugaLu vara tungA taTadalli || 1 ||
koradiha kaMbadi hariyanu tOrisi harinAmava jagadalli |
merasida varaprahlAdaru meravaru vara mantralayadalli || 2 ||
harimata sArava haripada hArava pari pari vidhapada dalli |
iLeyoLu sArida vyAsaru merevaru vara mantralayadalli || 3 ||
dhareyanu musukida tamavanu terayalu haruShadi kaliyugadalli |
guru raghavendraru karumerediharu vara mantralayadalli || 4 ||
tanumanadhanagaLa konegANade Bava vanacarisuva janaralli |
maNIdIpaka mati mananisi meredaru vara mantralayadalli || 5 ||
viShayada viShadindusiriDutali baludeShekeDutiha manadalli |
hosa jyOtiya karamereyalu meravaru vara mantralayadalli || 6 ||
dina saMsArada nenadare gOrada Ganaratha vedataDedalli |
muni mahArathi AkShaNa bandolivaru vara mantralayadalli || 7 ||
BuviyoLu bahupari baLaluva manujana BavaNeya balutiLidilli |
tavakadi biDisalu avatarisiruvaru vara mantralayadalli || 8 ||
karedare baruvaru aragaLigiradale karesidadayigaLellA |
dhareyoLu gurugaLa moreyiDalArada narare pApigaLella || 9 ||
surataru Paliside varakaru doretide varamaMtrAlayadalli |
terevudu musukanu stiravallavu tana parasuKa sAdhanadalli || 10 ||
urutara tapas susamAdhigaLillade dorevudu sadgatiyilli |
ariyade vEda purANa SAstrava dorevudu sanmatiyilli || 11 ||
mAdhava matadAMBOnidhi chandrara didhIti moLaguvudilli |
vAdigaLellara modadi jayisida nAdavu moLaguvadilli || 12 ||
vEdAntada pUdOTada parimaLa sAdhisi doretihudilli |
vEdaviSArade svAdisi sudheya vinOdadi ramisuvaLilli || 13 ||
pAvanatara mahayAtrA tIrthigaLOvisi nelesiharilli |
BUvalayake sale A vaikunThavu dhAvisi bandihudilli || 14 ||
dhanvantarigaLu tanudOriruvaru anudina mana olidilli |
GanarOgagaLige dhanuvErisi A kShaNadoLu kaLedOyuvavilli || 15 ||
kuShThAdigaLeMBaShTAdeSegaLa SrEShTAlayadoLagilli |
naShTAguta sakalEShTavu dorevudu sRuShTIShana kRupeyalli || 16 ||
prEta piSAcagrahAdigaLellavu sOtive balamuridilli |
Atara moreyoLu yAtara Bayavide jyOtire padayugadalli || 17 ||
andharu gurugaLa sundara mUrtiya kaNteredu nODuvarilli |
vandyaru maguvina nandanadoLu Anandadi pADuvarilli || 18 ||
janumada mUkaru cinmaya mUrtiya vinutadi kIrtiparilli |
Ganamahabadiraru manadaNi kELuta munigaLa prArthiparilli || 19 ||
yantara gurugaLa tantaranantasvatantravu rAjipudilli |
aMtara hoLe guruvaMtara gAna nirantara suKavihudilli || 20 ||
vyangake sangavu Bangake singara kangeDe mangaLavilli |
kangoLisudu sutarangiNi tIrada pungavarAlayadalli || 21 ||
Bava sAgaravanu dATise balu anuBavikaru nAvikarilli |
tavakadi nindire saviyuvadEtake BuviyoLu bahupariyilli || 22 ||
santati saMpada AyurarOgyavu nandadi doreyuvudilli |
cintipudEtake BrAntiyoLellaru pantadi gurunintalli || 23 ||
rAjara rAjara gurumaharAjara dEhava baNNipudentu |
rAjipa SrIhari pAda sarOjava pUjipa sampadarintu || 24 ||
anagaru ivarA Ganateya neleyadu manujarigariyuvadentu |
GanavyApaka japa janaka janArdana aNiyAgire balu nintu || 25 ||
tungA tIra virAjara kIrtiyu bangArada hoLeyalli |
SRungAradi hari pongoLalUduta kangOcarisuvanilli || 26 ||
animiSharellaru munikularondige kuNiyuvaranunayadindA |
vanagOpAlana Ganateya kIrtisi vinutadi saMBramadindA || 27 ||
BUsurarellaru SrIShana guNagaLa sAsira nAmagaLindA |
kESavanolidana tOShadi tutiparu sUsuva BAShpagaLindA || 28 ||
bRundAvana gOvindanu gurugaLa vRundAvanadoLagindu |
mundOrada Bava bandadi silukida vRundavaporeyuvanindu || 29 ||
sundara guDi SRungAradi ShoBipa candadi manTapadalli |
vandita guru vRundArakaresavaru kundada kAntiyoLilli || 30 ||
muttina hAravu kastUri tilakavu ratnadapadakagaLindA |
cittada BrAntiyanuttaripavu puruShOttama gAyanadindA || 31||
dvAdaSanAmavu mOdadi gurugaLa sAdRuSha sadguruveMdu |
BUdivijaraganuvAdhisi tOrpudu SrIdhara saMpadarendu || 32 ||
danDa kamanDala konDiha vasanadi manDita guruvararindu |
phanDari nAthana kanDita prIyaru danDapraNAmagaLindu || 33 ||
eLetuLasiya vanamAleya koraLolu vilasita kusumagaLindA |
koLaludUva hari kaLeyanu tOrpudu moLaguva vAdyagaLindA || 34 ||
rathavErida guru patadoLu sAgire pRuthiviyu dhimidhimikendu |
rathikara DaMgura nAdaninAdadi pratidhvani koDutiharindu || 35 ||
BuviyoLu moLaguva jayabErige A divijaru saMBramadindA |
javadoLu pUmaLe garevaru pOShisi dina dundhuBidhvaniyindA || 36 ||
varamantrAlaya guru samrATaru merevaru vaiBavadindA |
guru madhvESana hiriya patAkeya teradudu bahu siriyindA || 37 ||
hariyanu tOrisi gurusandarSana urutara puNyavadindu |
guru sankIrtane sirisanpadadoLu nirutadi pAlipudendu || 38 ||
guru pAdOdaka porevudu Baktara dhuritovgavakaLedindu |
gurusEveyu varapadaviya merevudu arivudu satyavidendu || 39 ||
gurumaharAjare vara munitEjare eraguve nimmaDigindu |
SarasansAradoLire taragAdenu porevudu karuNadoLindu || 40 ||
GanaBavarOgadi anuBavaBOgadi tanumana tApadi nondu |
dinadina koragide manadoLu marugide kanikara tOruvudindu || 41 ||
hasu tRuShe viShayadi vyasanadi bahupara vaSanAdenu seregonDu |
bisajAkShana pada tususaha nenayade paSu jIvana kaikonDu || 42 ||
SiSuvendariyuta SaSi hAsadi nara paSu mahapApiyanindu |
asadaLa BakutiyoLeseyuva matimananisi sele poruyuvadindu || 43 ||
mIsalu muDupidu sUsitu hRudayadi BAvisi gurupadakendu |
pUsida parimaLa vAsise balu suvikAsita hAravidendu || 44 ||
gurupada sEvisi haruShadi BhAvisi gurupada haaravanindu |
iriside padadoLu hariviThThalESane nirutadi pAlipudendu || 45 ||
***