sushameendra teertha, rayara mutt stutih
ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ....
ಗುರು ಸುಶಮೀಂದ್ರರ ಸ್ಮರಿಸಿರೋ ।
ಗುರು ಸುಧೀಂದ್ರ ಸುತ -
ಪ್ರಿಯ ಕಂದನಾ ।। ಪಲ್ಲವಿ ।।
ಸುಪ್ರಜ್ಞೇ೦ದ್ರ ನಾಮಾದಿ -
ಭುವಿಯೊಳು ಜನಿಸಿ ।
ಸುಪ್ಪಾಣಿ ಗುಣಗಳಿಂದ -
ಮೆರೆವೋರಾ । ಚರಣ ।।
ಸುಖಕ್ಕಿಂಬು ದಾತ -
ಪಂಡಿತ ಪೋಷಕ ।
ಸುಖಾತೀರ್ಥಾಬ್ಧಿಯೊಳುದಿಸಿದ -
ಸುಕಲಾನಿಧಿ ।। ಚರಣ ।।
ಚೈತ್ರ ಸಿತ ಪಕ್ಷ ದ್ವಿತೀಯಾದಲಿ ।
ಚಿತ್ತಜನಯ್ಯ ವೇಂಕಟನಾಥನ -
ಸಭೆ ಸೇರಿದ ಮುನಿವರ ।। ಚರಣ ।।
***
ಸುಪ್ಪಾಣಿ = ಶ್ರೇಷ್ಠವಾದ ಗುಣ
ಸುಖಕ್ಕಿಂಬುದಾತ = ಆನಂದಕ್ಕೆ ಆಶ್ರಯ ದಾತ
ಸುಕಲಾನಿಧಿ = ಚಂದ್ರ
****