..
ಮಾನಾಗ ಉರಿಯು ಹೆಣ್ಣು ಹೈಕಳ ಕೂಡೆ
ಶ್ರೀನಾಥ ನಿನಗೆ ಸಲ್ಲದು ಮಕ್ಕಳಾಟ ಪ
ತರಳ ನೀನೆಮ್ಮ ಸೀರೆಗಳನೆತ್ತಿಕೊಂಡುತರುವನೇರುತ ಕಕ್ಕಳ ಕೆಳೆವೆತರುವಳಿತನ ಸಾಕು ನಿನ್ನ ಪೇರುರದಲಿತರುಣಿ ನಗುತಾಳೆ ಪೊಕ್ಕಾಟ ಸಾಕು 1
ಅರಸಿನ ಮಗನೆಂದು ತಾಳಿದೆವಲ್ಲದೆಸರಸಿಜಾಕ್ಷಿಯ ಮನೆಯ ಮಳಲಲ್ಲಿಸರಸದೊಳಿಹರೆ ನಿನ್ನಂಗದೊಳಿರ್ದಸುರರೋಡಬೇಕು ಸಲ್ಲದು ಮಕ್ಕಳಾಟ2
ನಿನ್ನ ಪೊಕ್ಕಳ ಬೊಮ್ಮ ನಿನ್ನುದರದ ಜಗನಿನ್ನ ಅಂಗದೊಳಿದ್ದ ಸುರಮುನಿಗಳುನಿನ್ನನೆ ನಗುವರೊ ನೀನರಿಯದೆ ಎಮ್ಮಚೆನ್ನ ಹೆದ್ದಾಟ ಹೊಕ್ಕಾಟ ಸಾಕು 3
ಎಸಳು ಕಂಗಳನೋಟ ನಸುನಗೆ ಕೌಂಸ್ತುಭಎಸೆವ ಕಂಠದಲಿ ತುಳಸಿಯ ಮಾಲಿಕೆಮಿಸುಣಿಯ ಸರಪಣಿ ಹೊಸ ಕಾಲ ಪೆಂಡೆಯುಹೊಸ ಹೊಸ ಚೆನ್ನಿಗ ಪರಿಹಾಸ ಸಾಕೋ4
ತುತಿಸಿ ತುತಿಸಿ ಕಾಣರು ಬ್ರಹ್ಮರುದ್ರರುಮತಿಗೊಳಗಾಗೆ ಮುನೀಶ್ವರರಶ್ರುತಿಗಳು ನಿನ್ನನು ಪುಡುಕಲರಿಯವು ಬಾಲಸತಿಯರೊಡನೆ ಖೇಳಮೇಳವೆ ಸಾಕು 5
ಸ್ನಾನಮಾಡಲೀಯೆ ಮೌನಗೌರಿಯನೋನಲೀಯದೆ ಮೌನವ ಕೆಡೆಸಿಧ್ಯಾನ ಮಾಡಲೀಯೆ, ನಿನ್ನ ಚೆನ್ನಿಗರುಹಾನಿ ನೀಗುವರು ಎಂಬುದರಿಯೆವೊ 6
ಚೆಲುವರರಸ ಶಿಖರ ಶಿಖಾಮಣಿಯೆಲಲನೆಯರ ಮನ ಸೂರೆಗಾರಫಲಿಸಿತು ವ್ರತ ನಮ್ಮ ಕೃಷ್ಣ ನಿನ್ನೊಲುಮೆಯಬಲೆಗೆ ಸಿಕ್ಕದರಾರೊ ಸೊಬಗು ಸುಗ್ಗುಳಿಯೇ7
***