Showing posts with label ಗುರುರಾಯಾ ಗುರುರಾಯಾ ತರಣಿಪ್ರಕಾಶ pranesha vittala. Show all posts
Showing posts with label ಗುರುರಾಯಾ ಗುರುರಾಯಾ ತರಣಿಪ್ರಕಾಶ pranesha vittala. Show all posts

Monday, 11 November 2019

ಗುರುರಾಯಾ ಗುರುರಾಯಾ ತರಣಿಪ್ರಕಾಶ ankita pranesha vittala

by ಪ್ರಾಣೇಶದಾಸರು
ಗುರುರಾಯಾ ಗುರುರಾಯಾ |ತರಣಿಪ್ರಕಾಶ ಯತಿ ಪ 

ವರದೇಂದ್ರ ಪಬೆಂದೆನೋ ಭವದೊಳು | ತಂದೆ ನೀ ಬಹು ತ್ವರೆ ||ಯಿಂದ ಕರಪಿಡಿಯೋ |ಮಂದದಯಾಳೋ 1

ಆರೆನು ಮನುಜರು | ದೂರುವ ಮಾತನು ||ಆರಿಗುಸಿರಲಿ ನಿ | ವಾರಿಸೋ ಸ್ವಾಮಿ2

ನೀನೊಲಿಯಲು ಭಯ | ಕಾಣಿಸಿಕೊಂಬುದೆ ||ಹೀನ ಮತಾಟವಿ ಕೃ | ಶಾನು ಮಹಾತ್ಮ 3

ಮೇದಿನಿಪರು ಬೆರ | ಗಾದರು ದಾನಕೆ ||ಮೋದಮುನಿಮತ ಮ | ಹೋದಧಿ ಚಂದ್ರ 4

ಕಾಷಾಯ ವಸನಿ |ದೇಶಿಕವರಪ್ರಾ ||ಣೇಶ ವಿಠಲನವ | ರಾ ಸಲಹುವದೋ 5
******