..
(ಶ್ರೀ ರಮಣನೆಲ್ಲಿಹ ಕರೆತಾರೆ ಸಖಿಯಳೆ ) * ಪ
ಮನು ಕಮಂಡಲ ಕೂಪದಲ್ಲಿ ಹಿಡಿಯದಂತೆ ಬೆಳೆದು ಅವರ
ಶರಧಿ ಒಳಗೆ ಹರಿದಾಡುತಿರುವ ಕೇಳ್ ಸಖಿಯಳೆ
ಶರಧಿ ಒಳಗೆ ಹರಿದಾಡುತಲೆ ವೇದತಂದು
ತೋರಿದ್ಹೊಳೆವ ಮಚ್ಛನ್ನ ಬಲಗೊಂಬೆ ಕೇಳ್ ಸತಿಯಳೆ 1
ಸೃಷ್ಟಿಗೆ ಅಧಿಕ ಸ್ತ್ರೀಯಳ ದೈತ್ಯರು ಮೋಹಿಸಲು ಕಂಡು
ಹುಟ್ಟಿಸಿದ ಸುಧೆಯ ಸುರರಿಗೆರೆದ ಕೇಳ್ ಸಖಿಯಳೆ
ಹುಟ್ಟಿಸಿದ ಸುಧೆಯ ಸುರರಿಗೆರೆದು ಬೆಟ್ಟವನು ಬೆನ್ನ-
ಲಿಟ್ಟ ಕೂರ್ಮನ ಬಲಗೊಂಬೆ ಕೇಳ್ ಸತಿಯಳೆ 2
ವಾಸುದೇವ ಕ್ರೋಡರೂಪಿಲಿಂದ ಹಿರಣ್ಯಾಕ್ಷನ
ನಾಶವ ಮಾಡಿ ಕೋರೆಯಿಂದ ಕೇಳ್ ಸಖಿಯಳೆ
ನಾಶವ ಮಾಡಿ ಕೋರೆಯಿಂದ ಧರಣಿ ತಂದು ಹರ್ವಿ (ರವಿ?)ದ
ಭೂಪತಿವರ್ಹ(ರಾಹ?)ನ್ನ ಬಲಗೊಂಬೆ ಕೇಳ್ ಸತಿಯಳೆ 3
ಒಡೆದು ಕಂಬ ಕಡೆಗೆ ಕಿತ್ತು ಬಿಡದೆ ಅರಿಯ ತೊಡೆಯಲಿಟ್ಟು
ಒಡಲ ತಾ ಬಗೆದ ಭಕ್ತರೊಡೆಯ ಕೇಳ್ ಸಖಿಯಳೆ
ಒಡಲ ತಾ ಬಗೆದ ಭಕ್ತರೊಡೆಯನಾಗಿದ್ದ ಲಕ್ಷ್ಮೀ-
ನಾರಸಿಂಹನ್ನ ಬಲಗೊಂಬೆ ಕೇಳ್ ಸತಿಯಳೆ 4
ಅದಿತಿಕುಮಾರಗನುಗ್ರ(ಹ) ಮಾಡಿ ತೃತೀಯ ಪಾದ ದಾನ ಬೇಡಿ
ಪೃಥ್ವಿ ಆಕ್ರಮಿಸಿದ ಪರಮಾತ್ಮ ಕೇಳ್ ಸಖಿಯಳೆ
ಪೃಥ್ವಿ ಆಕ್ರಮಿಸಿದ ಪರಮಾತ್ಮನಾದ ನಮ್ಮ ಕಶ್ಯಪರ
ಸುತ ವಾಮನನ ಬಲಗೊಂಬೆ ಕೇಳ್ ಸಖಿಯಳೆ 5
ಋಷಿಗಳಲ್ಲಿ ಜನಿಸಿ ಕರದಿ ಧರಿಸಿ ಕುಠಾರವನ್ನು
ಅರಸು ಕ್ಷತ್ರಿಯರಿಗಂತಕನ ಕೇಳ್ ಸಖಿಯಳೆ
ಅರಸು ಕ್ಷತ್ರಿಯರ ಕುಲಕೆ ಅಂತಕನಾಗಿದ್ದ ನಮ್ಮ
ಪರÀಶುರಾಮನ್ನ ಬಲಗೊಂಬೆ ಕೇಳ್ ಸಖಿಯಳೆ 6
ಮುದ್ರೆ ಕಳುವಿ(ಹಿ?) ಲಂಕಾಪುರದಲ್ಲಿದ್ದ ವಾರ್ತೆ ಕೇಳಿ ಸ-
ಮುದ್ರ ಸೇತುಗಟ್ಟಿ ಜಾನಕಿಯ ಕೇಳ್ ಸಖಿಯಳೆ ಸ-
ಮುದ್ರ ಸೇತುಗಟ್ಟಿ ಜಾನಕಿಯ ಕೂಡಿ ಬಂದ ಅ-
ಯೋಧ್ಯಾರಾಮನ್ನ ಬಲಗೊಂಬೆ ಕೇಳ್ ಸಖಿಯಳೆ7
ಎಲ್ಲ ಜಗವ ತನ್ನ ಉದರದಲ್ಲೇ ಇಟ್ಟು ಗೋಕುಲದ
ಗೊಲ್ಲತಿಯರ ಮನೆಯ ಪಾಲ್ಬೆಣ್ಣೆ ಕೇಳ್ ಸಖಿಯಳೆ
ಗೊಲ್ಲತಿಯರ ಮನೆಯ ಪಾಲ್ಬೆಣ್ಣೆ ಕದ್ದು ಮೆಲ್ಲುವಂಥ
ಚೆಲ್ವ ಕೃಷ್ಣನ್ನ ಬಲಗೊಂಬೆ ಕೇಳ್ ಸುಖಿಯಳೆ 8
ಮಾಯಾಶಿಶುರೂಪ ತಾನಾಗಿ ವೇದನಿಂದ್ಯವನ್ನು
ಮಾಡಿ ಬೋಧಿಸಿದ ದುರ್ಮತವ ಕೇಳ್ ಸಖಿಯಳೆ
ಮಾಡಿ ಬೋಧಿಸಿದ ದುರ್ಮತವ ತ್ರಿಪುರಜನರಿಗೆಲ್ಲ
ಬೋಧಿಸಿದ ಬೌದ್ಧನ್ನ ಬಲಗೊಂಬೆ ಕೇಳ್ ಸಖಿಯಳೆ 9
ಕಲಿಸಮಾಪ್ತಿ ಕಾಲದಲ್ಲಿ ಚೆಲುವ ಅಶ್ವಾರೂಢನಾಗಿ
ಬಿಡದೆ ಪಾಲಿಸಿದ ಶರಣಜನರ ಕೇಳ್ ಸಖಿಯಳೆ
ಬಿಡದೆ ಪಾಲಿಸಿದ ಶರಣಜನರನು ಭೀಮೇಶಕೃಷ್ಣನ
ಚರಣಕಮಲಕೆರಗಿ ಬಲಗೊಂಬೆ ಕೇಳ್ ಸಖಿಯಳೆ 10
***