Showing posts with label ವಾದೀಂದ್ರ ಗುರುರಾಜ ನಿನ್ನ ಪಾದವ ತೋರಿಸಯ್ಯಾ narahari P vadeendra teertha stutih. Show all posts
Showing posts with label ವಾದೀಂದ್ರ ಗುರುರಾಜ ನಿನ್ನ ಪಾದವ ತೋರಿಸಯ್ಯಾ narahari P vadeendra teertha stutih. Show all posts

Thursday 5 August 2021

ವಾದೀಂದ್ರ ಗುರುರಾಜ ನಿನ್ನ ಪಾದವ ತೋರಿಸಯ್ಯಾ ankita narahari P vadeendra teertha stutih

 ..

kruti by pradyumna teertha ಪ್ರದ್ಯುಮ್ನತೀರ್ಥರು


ವಾದೀಂದ್ರ ಗುರುರಾಜ ನಿನ್ನ

ಪಾದವ ತೋರಿಸಯ್ಯಾ

ವಾದೀಂದ್ರ ಗುರು ನಿನ್ನ ಪಾದವ ನಂಬಿದೆ

ಮೋದವÀ ಕೊಡುವುದು ಮದಗಳೋಡಿಸಿ ಪ


ಉಪೇಂದ್ರ ಕರಕಮಲಜಾತ ಪಾಪಗಳೋಡಿಸಯ್ಯ

ಪಾಪರಾಶಿಯ ಸುಟ್ಟು ದ್ರೌಪದೀವರದನ

ಕೃಪೆಯಾಗುವಂತೆ ಮಾಡೋ ಶ್ರೀಪತಿ ಪ್ರಿಯನೆ 1


ಮೂಲರಾಮರ ಪಾದಪದುಮದಿ ಅಳಿಯಂತಿಪ್ಪ ಧೀರ

ಶೀಲಾದಿ ಗುಣವಿತ್ತು ಶ್ರೀ ಲೋಲನಂಘ್ರಿಯ

ಮಲಿನ ಮನವ ಕಳದು ಪೊಳೆಯುವಂತೆ ಮಾಡೋ2


ತುಂಗಾ ತೀರದೊಳಿದ್ದು ನಿತ್ಯ ಭಂಗಗಳೋಡಿಸುವಿ

ಶೃಂಗಾರ ತುಳಸಿಯ ಮಂಗಳ್ಹಾರವ ಧರಿಸಿ

ತುಂಗಮಹಿಮ ನರಸಿಂಗ ಮೂರುತಿ ತೋರೊ 3

***