Showing posts with label ರಾಮನ ನೋಡಿರೈ ಮಂಗಳ ನಾಮನ ಪಾಡಿರೈ karpara narahari. Show all posts
Showing posts with label ರಾಮನ ನೋಡಿರೈ ಮಂಗಳ ನಾಮನ ಪಾಡಿರೈ karpara narahari. Show all posts

Monday, 2 August 2021

ರಾಮನ ನೋಡಿರೈ ಮಂಗಳ ನಾಮನ ಪಾಡಿರೈ ankita karpara narahari

ರಾಮನ ನೋಡಿರೈ ಮಂಗಳ ನಾಮನ ಪಾಡಿರೈ ಪ


ಭೂಮಿಯೊಳಾರ್ಯ ಅಕ್ಷೋಭ್ಯರ ಮಠದಿ

ಪೂಜಿತನ ಸೀತಾನ್ವಿತನ ಅ.ಪ


ತಾಮರಸ ಭವಾದ್ಯಮರ ಗಣ ಪ್ರಾರ್ಥನದಿ

ದಶರಥ ಗೃಹದಿ

ಶ್ರೀ ಮನೋಹರ ನವತರಿಸಿ ಭೂಭಾರವನಿಳುಹಿ

ಸುಜನರ ಸಲುಹಿ

ಪ್ರೇಮದಿ ಕುಶಲವರನುದಿನ ಪೂಜಿಪೆವೆಂದು

ಬೆಸಗೊಳಲಂದು

ರಾಮನು ಸ್ಮರಿಸಲು ವೈಕುಂಠದಿ ಬಂದಿಹನಾ

ಸೀತಾವರನಾ 1


ಚಿಂತಿಸು ರಾಮನ ಶುಭಲಕ್ಷಣಗಳನೇಕ ಕರ್ಮವಿಪಾಕ

ಗ್ರಂಥದೊಳಷ್ಟಮ ಕಾಂಡದಿ ಚತುರಧ್ಯಾಯ

ದೊಳಗೀ ವಿಷಯಾ-

ದ್ಯಂತವಾಗಿ ವರ್ಣಿತವೆಂಬುವದನೆ

ಖರೆಯ ಯತಿಕುಲವರ್ಯ

ಕಾಂತ ಕರಜ ರಘುದಾಂತ ಕರಾರ್ಚಿತ

ಚರಣ ಸುಜನೋದ್ಧರಣ 2


ಫನಶೋಭಿಸುವ ಕುಂದಣ ಮಣಿಮಯದ

ಕಿರೀಟ ಯುಕ್ತಲಲಾಟ

ಚಿನ್ಮಯಗಾತ್ರದಿ ಮಿನುಗುವ ರತ್ನಾಭರಣ ಜಿತರವಿ ಕಿರಣ

ಮನದೊಳು ಬಿಡದೆ ತನ್ನನು ಧÉೀನಿಪರಘ

ಹರಣ ಕರುಣಾಪೂರ್ಣ

ಮುನಿ ಸರ್ವಜ್ಞಕರಾಗತ ಲಕ್ಷ್ಮಣಯುತನಾ

ರಿಪುಕುಲಮಥನಾ 3


ಮಂದಹಾಸ ಮುಖದಿಂದೊಪ್ಪುವ

ಶುಭಕಾಯಾಕವಿಜನಗೇಯಾ

ಸುಂದರ ಹೇಮ ಮಂಟಪದೊಳು ಪೂಜೆಯ

ಕೊಳುವ ಮನದೊಳು ಪೊಳೆವ

ನಿಂದಿರುವುದು ದ್ವಿಜವೃಂದ ಪಠಿಸುತಲಿ

ವೇದಾ ಮನಕತಿಮೋದಾ

ಹಿಂದಕೆ ಮಳಖೇಡ ಮಂದಿರವೆನಿಪ ಜಯಾರ್ಯ

ಮುನಿ ಸಂಶೇವÀ್ಯ 4


ವರ್ಣಿಸಲೊಶವೆ ಶ್ರೀರಘು ಶಾಂತರ

ಶುಭಚರಿಯ ಬಹು ಆ

ಶ್ಚರ್ಯ ಪರಮಕ್ಷೇತ್ರ ಕೂಡಲಿಯೊಳಿರುವ

ಮಂದಿರದಿ ಪಾರಾ-

ಯಣದಿ ಇರುತಿರ ಲೊಂದಿನ ಕಿರುಗೆಜ್ಜೆಗಳ

ಸುನಾದ ಕೇಳಲು ಮೋದ

ತರುಳರೀರ್ವರತಿತ್ವರದಿ ಬರುತ ಸಮ್ಮುಖದಿ

ಪೊಕ್ಕರು ಗೃಹದಿ 5


ಕಂಡರು ಮುನಿಪರು ಕೊಂಡಾಡುತ ಹರಿಗುಣವ

ಪೊಂದಿರೆ ಮುದವ

ತಂಡ ತಂಡ ಬಣ್ಣಿಸುತವರನು ಗೃಹದೊಳಗೆ

ಪುಡಕಿದರಾಗೆ ಬಾಲವ

ಕಾಣದೆ ಯೋಚಿಸಿದರು ಮನದೊಳಗೆ ತಿಳಿದರು

ಹೀಗೆ ಕುಂಡಲಿಶಯನ

ಶ್ರೀರಾಮನೆ ದರ್ಶನವಿತ್ತ ಲಕ್ಷ್ಮಣಸಹಿತ6


ಧರೆಯೊಳು ಬಹುಯತಿಕರ ಪೂಜಿತ ಪದಪದುಮಸ-

ದ್ಗುಣ ಧಾಮ ನಿರುತ ಶೇವಿಸುವ ಧರೆಸುರ ನಿಕರಕೆ

ಕೊಡುವ ಬೇಡಿದ ವರವ ಶರಣು ಜನಕೆ ಸುರ

ತರುವೆನಿಸಿದ ಸುರಪ್ರಿಯ ಕಾರ್ಪರನಿಲಯ ತರು

ಪಿಪ್ಪಲಗತ ಶಿರಿನಾರಸಿಂಹನೆ ಈತ ಶ್ರೀರಘುನಾಥಾ7

****