..
ಎಂತು ಜೀವಿಸಲಯ್ಯ ಯಾದವೇಶ ಪ
ಸಂತ ಚಿಂತಾರತ್ನ ನೀನುಪೇಕ್ಷಿಸೆ
ಎನ್ನಸುವಿಗಸು ನೀನು ಭಿನ್ನ e್ಞÁನದಿ ಎನ್ನ ಅ.ಪ
ಬನ್ನ ಬಡಿಸುವಿ ಮಾಯ ಜೈಸಲರಿಯೆ
ಧನ್ಯ ಶಿರಿ ವಿಧಿ ವಾಯು ಶಿವ ಶಕ್ರ ಸುರನಿಕರ
ನಿನ್ನಲ್ಲಿ ಸುಖಿಸುವರೊ ಅನ್ನೆಲ್ಲಿ ಅಸತೆಂದು 1
ನೀರಗುಳ್ಳೆಯಂತೆ ಸಂಸೃತಿಯ ಸುಖವೆಂದು
ದಾರಿತೋರ್ವವ ನೀನು ಕಣ್ಣುಕಟ್ಟೆ
ಆರು ಬಿಚ್ಚುವರಯ್ಯ ಆ ಪಟಲಕಿಕ್ಕಟ್ಟು
ವಾರಿಜಾಸನನಯ್ಯ ವಂಚಿಸದೆ ಮೈದೋರು 2
ಕಾಮಾದಿ ಷಡ್ವರ್ಗ ದುಷ್ಕರಣ ದುಮ್ಮಾನದ
ತಾಮಸದಿ ಸಿಗಬಿದ್ದು ಪಾಮರಾದೆ
ವ್ಯೋಮಕೇಶನ ಮಿತ್ರ ಜಯೇಶವಿಠಲ
ನೀ ಮನಸು ಮಾಡಲು ಆತ್ಮಾಪಿ ವೈಕುಂಠ 3
****