Showing posts with label ಜಯ ಜಯ ರಮಾಕಾಂತ ಜಯತು ದೈತ್ಯ ಕೃತಾಂತ lakshmikanta. Show all posts
Showing posts with label ಜಯ ಜಯ ರಮಾಕಾಂತ ಜಯತು ದೈತ್ಯ ಕೃತಾಂತ lakshmikanta. Show all posts

Sunday, 1 August 2021

ಜಯ ಜಯ ರಮಾಕಾಂತ ಜಯತು ದೈತ್ಯ ಕೃತಾಂತ ankita lakshmikanta

 ..

kruti by ಲಕ್ಷ್ಮೀನಾರಯಣರಾಯರು Lakshminarayanaru 


ಜಯ ಜಯ ರಮಾಕಾಂತ - ಜಯತು ದೈತ್ಯ ಕೃತಾಂತ

ಜಯ ಸರ್ವ ವೇದಾಂತ - ಜಯತು ನಿಶ್ಚಿಂತ ಪ


ಬೇಡ ವೇಷವ ತಾಳಿ- ಓಡಿಸುತೆ ತುರಗವನು

ಪ್ರೌಢೆ ಪದ್ಮಾವತಿಯ - ನೋಡಿ ನಸುನಗುತ

ಜೋಡಾಗು ತನಗೆಂದು - ಗಾಡಿಕಾರರ ಮಾತ

ನಾಡಿ ಕ್ರೋಢಾಲಯಕೆ - ಓಡಿಬಂದವನೆ 1


ತಾಯೆ ಬಕುಳೆಯ ಕಳುಹಿ ಮಾಯಕದ ಕೊರವಂಜಿ

ಕಾಯದಿಂದಾಕಾಶರಾಯನರಮನೆಗೆ

ಜೋಯೆಂದು ಪೋಗಿ - ಸದುಪಾಯಗಳ ನಡೆಸಿ ತ

ನ್ನಾಯ ಕೈತಂದ ಕಮನೀಯ ಮೂರುತಿಯೆ 2


ಶುಕಮುನಿಯ ಮುಖದಿಂದ ಸುಖವಾರ್ತೆಯನು ಕೇಳಿ

ಸಕಲ ದೇವೋತ್ತಮರ - ನಿಕರವನು ನೆರಹಿ

ಅಕಳಂಕ ಲಗ್ನದಲಿ ಸುಕಪೋಲೆಗೊಲಿದುರಗ

ಶಿಖರಿಯಲಿ ನೆಲೆಯಾದ ಲಕುಮಿವಲ್ಲಭನೆ 3

***