..
kruti by ಲಕ್ಷ್ಮೀನಾರಯಣರಾಯರು Lakshminarayanaru
ಜಯ ಜಯ ರಮಾಕಾಂತ - ಜಯತು ದೈತ್ಯ ಕೃತಾಂತ
ಜಯ ಸರ್ವ ವೇದಾಂತ - ಜಯತು ನಿಶ್ಚಿಂತ ಪ
ಬೇಡ ವೇಷವ ತಾಳಿ- ಓಡಿಸುತೆ ತುರಗವನು
ಪ್ರೌಢೆ ಪದ್ಮಾವತಿಯ - ನೋಡಿ ನಸುನಗುತ
ಜೋಡಾಗು ತನಗೆಂದು - ಗಾಡಿಕಾರರ ಮಾತ
ನಾಡಿ ಕ್ರೋಢಾಲಯಕೆ - ಓಡಿಬಂದವನೆ 1
ತಾಯೆ ಬಕುಳೆಯ ಕಳುಹಿ ಮಾಯಕದ ಕೊರವಂಜಿ
ಕಾಯದಿಂದಾಕಾಶರಾಯನರಮನೆಗೆ
ಜೋಯೆಂದು ಪೋಗಿ - ಸದುಪಾಯಗಳ ನಡೆಸಿ ತ
ನ್ನಾಯ ಕೈತಂದ ಕಮನೀಯ ಮೂರುತಿಯೆ 2
ಶುಕಮುನಿಯ ಮುಖದಿಂದ ಸುಖವಾರ್ತೆಯನು ಕೇಳಿ
ಸಕಲ ದೇವೋತ್ತಮರ - ನಿಕರವನು ನೆರಹಿ
ಅಕಳಂಕ ಲಗ್ನದಲಿ ಸುಕಪೋಲೆಗೊಲಿದುರಗ
ಶಿಖರಿಯಲಿ ನೆಲೆಯಾದ ಲಕುಮಿವಲ್ಲಭನೆ 3
***
No comments:
Post a Comment