Sunday 1 August 2021

ಜಯ ಮಂಗಳ ನಾಮ ಶ್ರೀರಾಮ ಜಯ ಜಯ ಸದ್ಗುಣ ಧಾಮ ನಿಸ್ಸೀಮ ankita lakshmikanta

..

kruti by ಲಕ್ಷ್ಮೀನಾರಯಣರಾಯರು Lakshminarayanaru 


ಜಯ ಮಂಗಳ ನಾಮ ಶ್ರೀರಾಮ

ಜಯ ಜಯ ಸದ್ಗುಣ ಧಾಮ ನಿಸ್ಸೀಮ ಪ


ಭಾನುವಂಶಪಯೋನಿಧಿ ಚಂದ್ರ

ದೀನರಕ್ಷಣ ಪರ ಹೇ ದಯಾಸಾಂದ್ರ 1


ದಾನವಹರ ಸುರಕಾರ್ಯ ವಿಚಾರ

ವಾನರತತಿ ಸುಮಾವೃತ ಧೀರ 2


ಭರತ ಶತ್ರುಹನ ಲಕ್ಷ್ಮಣ ಭ್ರಾತ

ಮರುತನಯನುತ ಶ್ರೀ ಲಕ್ಷ್ಮೀಕಾಂತ 3

***

 

No comments:

Post a Comment