Showing posts with label ನಿಂಹೊರತು ಅನ್ಯರನು ನಾನರಿಯೆ ಗುರುವೇ janakiramana. Show all posts
Showing posts with label ನಿಂಹೊರತು ಅನ್ಯರನು ನಾನರಿಯೆ ಗುರುವೇ janakiramana. Show all posts

Monday, 6 September 2021

ನಿಂಹೊರತು ಅನ್ಯರನು ನಾನರಿಯೆ ಗುರುವೇ ankita janakiramana

ankita janakiramana



ನಿಂಹೊರತು ಅನ್ಯರನು ನಾನರಿಯೆ ಗುರುವೇ

ಮಂತ್ರಾಲಯ ಧೊರೆಯೇ


ನಿಮ್ಮ ಕಾಣದೆ ಮನಸು ತಲ್ಲಣಿಸುತಿಹುದು ಅ.ಪ


ತುಂಗಾತೀರದಲಿರುವ ಮಂಚಾಲೆಯಲಿವಾಸ

ಜಗವೆಲ್ಲ ವ್ಯಾಪಿಸಿತು ನಿಮ್ಮ ಮಹಿಮೆಯ ಸುಪ್ರಕಾಶ

ಬಾಗಿ ಶಿರ ನಮಿಸಲು ಕಳೆವ ಮನಸಿನ ಕ್ಲೇಶ

ರಾಘವೇಂದ್ರರೆಂಬ ಪೆಸರಿನ ಮಂಚಾಲೆ ಈಶ 1

ಅಪರಾಧಿನಾನೆಂದು ಒಪ್ಪಿಕೊಳ್ಳುವೆ ಯಿಂದು

ತಪ್ಪದೆ ನೀವ್ ಬಂದು ಉಪಕರಿಸಿ ಮುಂದು

ಕುಪಿತರಾಗಲಿಬೇಡಿ ನೀವ್ ಕೃಪಾಸಿಂಧು

ತಾಪಗಳಪರಿಹರಿಪ ದೀನರಬಂಧು 2

ಕಲಿಯುಗದಿ ಅವತರಿಸಿ ಗ್ರಂಥಗಳ ರಚಿಸಿ

ಛಲದಿಂದ ಮಧ್ವಮತಸಿದ್ಧಾಂತ ಬಲಪಡಿಸಿ 

ಒಲುಮೆಯಿಂದಲಿ ನಮ್ಮ ಜಾನಕಿರಮಣ

ಮೂಲರಾಮರಪಾದ ಸೇವಿಪಾ ಸದ್ಗುರುವೇ 3

***


ರಾಗ: ಶಂಕರಾಭರಣ ತಾಳ: ಝಂಪೆ