ankita janakiramana
ನಿಂಹೊರತು ಅನ್ಯರನು ನಾನರಿಯೆ ಗುರುವೇ
ಮಂತ್ರಾಲಯ ಧೊರೆಯೇ ಪ
ನಿಮ್ಮ ಕಾಣದೆ ಮನಸು ತಲ್ಲಣಿಸುತಿಹುದು ಅ.ಪ
ತುಂಗಾತೀರದಲಿರುವ ಮಂಚಾಲೆಯಲಿವಾಸ
ಜಗವೆಲ್ಲ ವ್ಯಾಪಿಸಿತು ನಿಮ್ಮ ಮಹಿಮೆಯ ಸುಪ್ರಕಾಶ
ಬಾಗಿ ಶಿರ ನಮಿಸಲು ಕಳೆವ ಮನಸಿನ ಕ್ಲೇಶ
ರಾಘವೇಂದ್ರರೆಂಬ ಪೆಸರಿನ ಮಂಚಾಲೆ ಈಶ 1
ಅಪರಾಧಿನಾನೆಂದು ಒಪ್ಪಿಕೊಳ್ಳುವೆ ಯಿಂದು
ತಪ್ಪದೆ ನೀವ್ ಬಂದು ಉಪಕರಿಸಿ ಮುಂದು
ಕುಪಿತರಾಗಲಿಬೇಡಿ ನೀವ್ ಕೃಪಾಸಿಂಧು
ತಾಪಗಳಪರಿಹರಿಪ ದೀನರಬಂಧು 2
ಕಲಿಯುಗದಿ ಅವತರಿಸಿ ಗ್ರಂಥಗಳ ರಚಿಸಿ
ಛಲದಿಂದ ಮಧ್ವಮತಸಿದ್ಧಾಂತ ಬಲಪಡಿಸಿ
ಒಲುಮೆಯಿಂದಲಿ ನಮ್ಮ ಜಾನಕಿರಮಣ
ಮೂಲರಾಮರಪಾದ ಸೇವಿಪಾ ಸದ್ಗುರುವೇ 3
***
ರಾಗ: ಶಂಕರಾಭರಣ ತಾಳ: ಝಂಪೆ
No comments:
Post a Comment