ಸ್ಮರಿಸಿ ಸುಖಿಸು ಮನವೆ ಗುರುರಾಜಾಚಾರ್ಯರ ಪ
ಸ್ಮರಿಸು ಪರಿಮಳ ವಿರಚಿಸಿದ ಗುರು ವರರ
ಕರುಣವ ಪಡೆದ ಶರಣರ ದುರಿತ
ಉರಗಕೆ ಗರುಡನೆನಿಸಿದವರ ಸುಚರಿತೆಯ
ಹರುಷದಿಂದಲಿ ಅ.ಪ
ಇಳಿಯೋಳ್ ಶ್ರೀ ಸುರಪುರದಿ
ಯಳಮೇಲಿ ಶ್ರೀ ವಿಠ್ಠಲಚಾರ್ಯ
ರಿಹ ಜನ್ಮದಿ ಕುಸುಮೂರ್ತಿ ಗುರುಗಳ
ಒಲಿಮೆ ಪಡೆದು ನಿತ್ಯದಿ ಗಳಿಸಿದ
ಸುಪುಣ್ಯದಿ ಲಲನೆ ಜಾನಕಿ ವರ
ಸುಗರ್ಭದಿ ಚಲುವ ಲಕ್ಷಣ
ಗಳಲಿ ಜನಿಸಿ ಗೆಳೆಯರೊಡನಾಡುತಲೆ
ಶಬ್ಧಾವಳಿ ಸುಶಾಸ್ರ್ತವ ಕಲಿತ ವರಪದ 1
ಎರಡನೆ ಆಶ್ರಮದಿ ಪದವಿಟ್ಟು ನೋಡಲು
ಮೆರೆವ ಘನ ವೈಭವದಿ ವೈರಾಗ್ಯಭಾಗ್ಯವೆ
ಪಿರಿದೆಂಬೊ ಧೃಢಮನದಿ ವನಿತಾದಿ ವಿಷಯದಿ
ತಿರುಗಿಸುತ ಮನವಿರದೆ ಸಿರಿವರ ತುರುಗವದನನ
ಚರಣ ಪೂಜಿಯೊಳಿರಿಸಿ ಗುರುವರ ಮುಖದಿ ಶ್ರೀ
ಮನ್ಮರುತ ಶಾಸ್ತ್ರದ ಶ್ರವಣಗೈದರ 2
ವರ ವಿದ್ಯಾವಂತರೆನಿಸಿ ವಿದ್ಯಾರ್ಥಿಗಳನುಪ
ಚರಿಸಿ ಶಾಸ್ತ್ರವ ಬೋಧಿಸಿ ಪ್ರವಚನದಿ
ಗುರುಗಳ ಕರುಣವ ಸಂಪಾದಿಸಿ
ನೃಪಮಾನ್ಯರೆನಿಸಿ ಹರಿದಿನಾದಿ
ವೃತ ಬಿಡದಾಚರಿಸಿ ಕಾರ್ಪರ ನಿಲಯ
ಶಿರಿನರ ಹರಿಯ ಪುರವನು ತ್ವರದಿ
ಶೇರಿದ ಪರಮ ಮಹಿಮರ ಚರಣ ಯುಗಲವ 3
****