Showing posts with label ವಿಜಯವಿಠ್ಠಲ ಶ್ರೀ ವಿಜಯವಿಠ್ಠಲ ವನಚರ ನಗಧರ vijaya vittala. Show all posts
Showing posts with label ವಿಜಯವಿಠ್ಠಲ ಶ್ರೀ ವಿಜಯವಿಠ್ಠಲ ವನಚರ ನಗಧರ vijaya vittala. Show all posts

Thursday, 17 October 2019

ವಿಜಯವಿಠ್ಠಲ ಶ್ರೀ ವಿಜಯವಿಠ್ಠಲ ವನಚರ ನಗಧರ ankita vijaya vittala

ವಿಜಯದಾಸ
ವಿಜಯವಿಠ್ಠಲ ಶ್ರೀ ವಿಜಯವಿಠ್ಠಲ ಪ
ವನಚರ ನಗಧರ ಅವನಿಯ ಉದ್ಧಾರ
ಕಾನನ ವೇಗದಿ ಭು-
ವನ ದಾನದ ನೆವನನು ಮಾಡಿ ಗಂಗೆಯ ಹ -
ವಣದಿ ಪಡದೋ ಶ್ರೀ ವಿಜಯವಿಠ್ಠಲಾ 1

ಛಲದಿಂದ ಕುಲ ಕೋಲಾಹಲ ಮಾಡಿಸಿ ನೀ ತರಿದೆ
ಬಾಲೆಯರ ಬಾಲರ ಬಿಡದೆ
ಸುಲಭದಿ ಕರ್ಣಗೆ ಒಲಿದು ಪೇಳಿದೆ ಆ
ಸುಲಲಿತಾ ಭಾರ್ಗವ ವಿಜಯವಿಠ್ಠಲ2

ಶತಮಖರಿಪು ಲೋಕಪಿತನೊರವಿನಿಂದಲಿ
ಖತಿ ಸಕಲರಿಗೆ ನೀವು ತರಿದಿರಲು
ಪತಿತಪಾವನ ರಾಮ ಅತಿ ವೇಗ ದನುಜನ
ಹತವ ಮಾಡಿದೆಯೊ ಶ್ರೀ ವಿಜಯವಿಠ್ಠಲ3

ಬಕಮುಖ ದನುಜರ ಹಕ್ಕಲಗೊಳಿಸಿ ಬಲು
ಯುಕುತಿಯಿಂದಲಿ ಭಕುತರ ಪೊರದೆ
ವಿಕಸಿತ ಕಮಲನಯನ ಕಂಜನಾಭನೆ
ಸಕಲ ಸುರರ ಪಾಲ ವಿಜಯವಿಠ್ಠಲಾ 4

ರಕ್ಕಸ ಮರ್ದನ ದಿಕ್ಕು ಮೋಹಿಪ ಕೃಷ್ಣ
ರುಕ್ಮಿಣಿ ಪತಿಯಾದಾ ಚಕ್ರಪಾಣಿ
ಉಕ್ಕಿದ ಮಗಧನ ಸೊಕ್ಕು ಮುರಿದು ಕಪಿ
ರೆಕ್ಕ ಆಳ್ವನಿಗೆ ಒಲಿದೆ ವಿಜಯವಿಠ್ಠಲಾ 5

ಘನವಾದ ವಿಶ್ವರೂಪವ ತೋರಿದೆ
ದಿನಮಣಿ ಕೋಟಿ ಅಧಿಕ ಕಾಂತಿ ನರಹರಿ
ವನಜ ಸಂಭವನಯ್ಯ ವಿಜಯವಿಠ್ಠಲಾ 6

ವನಿತೆಯರ ವ್ರತ ಭಂಗವ ಮಾಡಿ
ದಾನವರ ಮೋಹಿಸಿದೆಯೊ ಪವನನೊಡಿಯಾ
ಉನುಮತ ಜನ ಕುಲ ಸನುಮತ ಶಾಸ್ತ್ರವ ವ-
ದನದಲಿ ಮೆದ್ದಿಯೊ ವಿಜಯವಿಠ್ಠಲಾ 7

ರಜೋತಮ ಗುಣವನು ಭುಂಜಿಸುತ
ವ್ರಜ ಭೂಮಿ ನಿಜವಾಗಿ ವ್ಯಾಪಿಸಿರೆ
ಸುಜನಪಾಲ ನೀನು ವದಗಿ ವಾಜಿಯನೇರಿ
ಭಜನಗೈಸಿದ ವೇಗ ವಿಜಯವಿಠ್ಠಲಾ 8

ಗೋಕುಲದಲಿ ಅನೇಕ ಲೀಲೆಯ ತೋರಿ
ಬೇಕಾದ ವರ ಪುಂಡರೀಕಗಿತ್ತೆ
ಸಾಕಾರ ಗುಣ ಪೂರ್ಣ ವೇಣುಗೋಪಾಲ ವಿ
ವೇಕವ ಕೊಟ್ಟ ಕಾಯನ್ನ ವಿಜಯವಿಠ್ಠಲಾ9
*********