by ಪ್ರಸನ್ನವೆಂಕಟದಾಸರು
ಯೋಗವೆಂದರೆ ದಾವುದು ಮಾನಿಸಗೆಯೋಗವೆಂದರೆ ದಾವುದುನಾಗಶಯನನ ನಾಮ ಕೂಗುವುದೆ ಮಹಾಯೋಗ ಪ.
ಪೂಸರಳನ ಬಲೆಗೆ ಸಿಲುಕಿ ದೃಢಆಸನಬಲಿದಹಗೆಹಾಸ್ಯವದನೆಯರ ಲೇಶ ಹಾರೈಸದೆದಾಸಾಗಿ ಹರಿಯ ಸದಾಧ್ಯಾಸವೆ ಮಹಾಯೋಗ 1
ವಾಗಾದಿಂದ್ರಿಯ ಕಟ್ಟದೆ ಕುಂಭಕವೆಂದುಮೂಗಿನುಸಿರ ಕಟ್ಟಿದಭೋಗಬಯಸದೆ ತಾನಾಗಿ ಬಂದದನುಂಡುಲೋಗರ ಹಣ ಹೆಣ್ಣಿನ ತ್ಯಾಗವೆ ಮಹಾಯೋಗ 2
ಭಾವಶುದ್ಧಿಯ ಮಾಡದೆ ಯೋಗ ಮಾರ್ಗದಠಾವ ಸಿದ್ಧವ ಮಾಡಿದದೇವ ಪ್ರಸನ್ವೆಂಕಟವರದನ ಸದ್ಭಾವುಕರ ಪಾದಾಬ್ಜಸೇವೆಯೆ ಮಹಾಯೋಗ 3
*******