Showing posts with label ಸಾಕು ಸಾಕು ಸಂಸಾರ ಸಜ್ಜಾಗಿಲ್ಲ purandara vittala. Show all posts
Showing posts with label ಸಾಕು ಸಾಕು ಸಂಸಾರ ಸಜ್ಜಾಗಿಲ್ಲ purandara vittala. Show all posts

Friday, 6 December 2019

ಸಾಕು ಸಾಕು ಸಂಸಾರ ಸಜ್ಜಾಗಿಲ್ಲ purandara vittala

ಪುರಂದರದಾಸರು
ರಾಗ ಕಾಮವರ್ಧನಿ /ಪಂತುವರಾಳಿ ಅಟ ತಾಳ

ಸಾಕು ಸಂಸಾರ ಸಜ್ಜಾಗಿಲ್ಲ ಒಲ್ಲೆ ಒಗತನವ ||ಪ ||

ಆರು ಮಂದಿಯು ಗಂಡರಾಳುವರು ಎನ್ನ
ಆರು ಮಂದಿಗೆ ಮೂರು ಸುತರೆನಗೆ
ಆರು ಮೂರೇಳ್ವರು ಭಾವ ಮೈದುನರೆಲ್ಲ
ಆರೇನೆಂದರೆ ಬಿಡರು ಯಾರಿಗುಸಿರಲಮ್ಮ ||

ಹತ್ತು ಮಂದಿ ಬೆನ್ನ ಮುತ್ತಿಕೊಂಡಿಹರೆ
ಮತ್ತೆ ಬಿಟ್ಟೇನೆಂದರೆ ಬಿಡಗೊಡರು
ಅತ್ತಿಗೆ ನೆಗೆಣ್ಣೆ ಹೊತ್ತು ಹೊತ್ತಿನೊಳೆನ್ನ
ನೆತ್ತಿಯೊಳ್ ಹಸ್ತವಿಟ್ಟೆನ್ನ ಸೆಣಸುವರಮ್ಮ ||

ಪಂಚೈವರು ಎನ್ನ ತ್ವಂಚಾ ಹಂಚ ಎಂದು
ಸಂಚಿತ ಕರ್ಮನುಣಿಸುವರು
ವಂಚನೆಯಳಿದ ಪ್ರಪಂಚವ ಕಳೆದಿಹ
ಮಿಂಚಿನ ಪರಿಲಿ ವಿರಿಂಚಿ ಬರೆದಿಹನಮ್ಮ ||

ಜ್ಯೇಷ್ಟನಾಗಿಹ ಪುತ್ರ ಧರ್ಮವ ಅಗಲಿಸಿ
ಭ್ರಷ್ಟ ಅತ್ತೆಯು ಮೃತ್ಯುವಾಗಿಹಳು
ಮೆಟ್ಟಿನ ಹೊರಗೆ ಕಣ್ಣಿಟ್ಟು ಸಾಧುಗಳನ್ನು
ದೃಷ್ಟಿಸಿ ನೋಡಲರೆಕ್ಷಣ ಬಿಡರಮ್ಮ ||

ಒಂಭತ್ತು ಬಾಗಿಲ ಊಳಿಗವನು ಮಾಳ್ಪ
ಕುಂಭಕದ ನರಕ ಕಾವರ ದಾಳಿ
ಡಂಭಕವನು ಬಿಟ್ಟಂಬಿಕ(ಗ?)ನೊಳಗೆ ಇಟ್ಟು ವಿ-
ಶ್ವಂಭರ ಪುರಂದರವಿಠಲ ಧ್ಯಾನದ ಘುಟ್ಟು ||
***

pallavi

sAku samsAra sajjAgilla olle ogatanava

caraNam 1

Aru mandiyu kaNDarALuvaru enna Aru mandige mUru sutarenage
Aru mUrELvaru bhAva maidunarella ArEnendare biDaru yArigusiralamma

caraNam 2

hattu mandi benna muttikoNDihare matte biTTEnendare biDagoDaru
attige nege heNNe hottu hottinoLenna nettiyoL hastaviTTenna seNasuvaramma

caraNam 3

pancaivaru enna tvancA hanca endu sancita karmanuNisuvaru
vancaneyaLida prapancava kaLidiha mincina parili virinci baredihanamma

caraNam 4

jyESTanAgiha putra dharmava agalisi bhraSTa atteyu mrtyuvAgihaLu
meTTina horage kaNNITTu sAdhugaLannu drSTisi nODalare kSaNa biDaramma

caraNam 5

ombhattu bAgila Uligavanu mALpa kumbhakada naraka kAvara dhALi
Dambhakavanu biTTambiganoLage iTTu vishvambhara purandara viTTala dhyAnada GuTTu
***


ಸಾಕು ಸಾಕು ಸಂಸಾರ ಸಂಖ್ಯಾಗಿಲ್ಲ ಒಲ್ಲೆ ಒಗೆತನವ ಪ.

ಆರುಮಂದಿ ಗಂಡರಾಳುವರು ಎನ್ನಆರುಮಂದಿಗೆ ಮೂರು ಸುತರೆನಗೆಆರು ಮೂರೇಳ್ಪರುಭಾವ - ಮೈದುನರೆಲ್ಲಆರರೆಂದರೆ ಬಿಡರು ಆರಿಗುಸುರಲಮ್ಮ 1

ಹತ್ತುಮಂದಿ ಬೆನ್ನ ಮುತ್ತಿಕೊಂಡರೆಮತ್ತೆ ಬಿಟ್ಟೆನೆಂದೆ ಬಿಡಗೊಡರುಅತ್ತಿಗೆ ನಗೆಹಣ್ಣಿ ಹೊತ್ತು ಹೊತ್ತನೊಳೆಮ್ಮನೆತ್ತಿಯೊಳು ಹಸ್ತವಿಟ್ಟೆನ್ನ ಸಲುವರಮ್ಮ 2

ಪಂತರೈವರು ಎನ್ನ ತೊಂತ ಹಂತಯೆಂದುಸಂಚಿತದ ಕರ್ಮವನುಣಿಸುವರುವಂಚನೆಯಳಿದ ಪ್ರಪಂಚವನು ಕಳೆದಿಹಮಿಂಚಿನ ಪರಿಯವಿರಿಂಚಿಬರೆದಿಹನಮ್ಮ3

ಜೇಷ್ಠನಾಗಿಹ ಪುತ್ರ ಧರ್ಮನ ಅಗಲಿಸಿಭ್ರಷ್ಟ ಆತ್ತೆಯು ಮೈತ್ಯುವಾಗಿಹಳುಮೆಟ್ಟಿಲಿನ ಹೊರಗೆ ಕಣ್ಣಿಟ್ಟು ಸಾಧುಗಳನುದೃಷ್ಟಿಸಿ ನೋಳ್ಪನೆಂದರೆ ಕ್ಷಣ ಬಿಡರಮ್ಮ 4

ಒಂಬತ್ತು ಬಾಗಿಲ ಊಳಿಗವನು ಮಾಳ್ಪಕುಂಬತದ ನರತ ಕಾವರ ದಾಳಿಢಂಭಕವನು ಬಿಟ್ಟು ಇಂಬಿನೊಳಟ್ಟು ವಿಶ್ವಂಭರ ಪುರಂದರವಿಠಲ ಧ್ಯಾನದಗುಟ್ಟು5
***********