Showing posts with label ಶಾಂತಿಯ ಬಲಿಯಣ್ಣಾ ಮನದಲಿ gurumahipati. Show all posts
Showing posts with label ಶಾಂತಿಯ ಬಲಿಯಣ್ಣಾ ಮನದಲಿ gurumahipati. Show all posts

Wednesday, 1 September 2021

ಶಾಂತಿಯ ಬಲಿಯಣ್ಣಾ ಮನದಲಿ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಶಾಂತಿಯ ಬಲಿಯಣ್ಣಾ | ಮನದಲಿ ಪ 


ಕೋಪ ತಾಪದ ತಾಮಸ ಗುಣದ ಮನಿ | ತಾಪತ್ರಯ ಮೂಲಾನಳ ಶಮನಿ 1 

ವಾರಿಧಿ ಉಕ್ಕೇರುವದು ಜ್ಞಾನ ನಿಧಾನವು ಕೈ ಸೇರುವದು 2 

ಪ್ರಪಂಚ ಪರಮಾರ್ಥದ ಹಿತಕಾರಿ | ಕೃಪೆಯಲಿ ಸರಿಸಮ ಬಗೆ ಮುರಾರಿ 3 

ಸಾಧು ಸಂತರು ಸಂಧಿಪ ಘನವು | ಸಾಧಿಸಿ ಕೊಡುವದು ತಾ ಚಿದ್ಘನವು 4 

ಗುರು ಮಹಿಪತಿ ಸಾರಿದ ಬೋಧಾ | ಭವ ಬಾಧಾ 5

***