Showing posts with label ನಿಚ್ಚಳಾಗಲಿ ಬೇಕು ತಿಳಿದು ನಿಚ್ಚಳಾಗಲಿ ಬೇಕು vijaya vittala. Show all posts
Showing posts with label ನಿಚ್ಚಳಾಗಲಿ ಬೇಕು ತಿಳಿದು ನಿಚ್ಚಳಾಗಲಿ ಬೇಕು vijaya vittala. Show all posts

Wednesday, 16 October 2019

ನಿಚ್ಚಳಾಗಲಿ ಬೇಕು ತಿಳಿದು ನಿಚ್ಚಳಾಗಲಿ ಬೇಕು ankita vijaya vittala

ವಿಜಯದಾಸ
ನಿಚ್ಚಳಾಗಲಿ ಬೇಕು ತಿಳಿದು ನಿಚ್ಚಳಾಗಲಿ ಬೇಕು ಪ

ನಿಚ್ಚಮಾಡುವ ದೋಷರಾಶಿಗಳಳಿದು ನಿಚ್ಚಳಾಗಲಿ ಬೇಕು ಅ.ಪ

ಪಾಪವೆಂಬುದು ಹೊರಗಿಹುದೆ ತನ್ನ
ಅಪವರ್ಗಕೆ ಮಾರ್ಗವಹುದೆ ಬಲು
ತಾಪಸಿಗಾದರು ಅದು ಸಾಧನವಹುದೆ 1

ಪುಣ್ಯವೆಂಬದು ಬೇರೆಯಿಲ್ಲಾ ನಾನಾ
ರಣ್ಯ ಚರಿಸಿದರು ದೊರಕುವದಲ್ಲಾ
ಮನ್ಯು ಬಿಡದೆ ಮತ್ತೊಂದಲ್ಲಾ ನಿರುತ
ಅನ್ಯರಾಶಿ ಬದಲು ಗತಿಗವಸಲ್ಲಾ 2

ವೈಕುಂಠವೆಂಬೋದು ಅಲ್ಲೆ ಬರಿದೆ
ಲೌಕೀಕ ತೊರದರೆ ಇಪ್ಪದು ಇಲ್ಲೆ
ಈ ಕಲಿಯೊಳಗೆ ಈ ಸೊಲ್ಲೆವೊಲಿಸ
ಬೇಕೆನೆ ಮಾರಿ ಓಡುವುದು ನಾ ಬಲ್ಲೆ 3

ಹರಿಸ್ಮರಣೆಗೆ ಪೋಪ ದೋಷ ಬಲು
ಪರಿ ಧರ್ಮವ ಮಾಡಲು ಲೇಶ
ಸರಿಯಾವು ತರುವಾಯ ಮೋಸದಿಂದ
ತಿರುಗಿ ತಿರುಗಿ ಪುಟ್ಟಿ ಬಡವನು ಕ್ಲೇಶಾ4

ಒಬ್ಬರ ಸರಿಗಟ್ಟದಿರೊ ನಿನ
ಕರ್ಮ ಸುಖವೆಂದು ಸಾರೊ
ಉಬ್ಬಲ ದಾಡಿಪರಾರೊ ಎಲೆ
ಲ್ಹಬ್ಬಿದ ವಿಜಯವಿಠ್ಠಲನೆಂದು ಸಾರೋ 5
**********